ಬೆಂಗಳೂರು: ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ, ಒಂದೇ ಧ್ವನಿಯೊಂದಿಗೆ ಟ್ವಿಟ್ಟರ್ ಮತ್ತು ಇಮೇಲ್ ಮೂಲಕ ಕರ್ನಾಟಕ ಸರಕಾರಕ್ಕೆ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಇಂದು ಅಭಿಯಾನ ನಡೆಸಲಾಯಿತು.
‘ಎನ್ಆರೈ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನಕ್ಕೆ ಬೆಂಬಲ ನೀಡಿ ಟ್ವಿಟ್ಟರ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಕರೆ ನೀಡಿದ @narayanagowdru ನಾರಾಯಣ ಗೌಡರಿಗೆ ಧನ್ಯವಾದಗಳು ???????? ????
“ಅನಿವಾಸಿಗಳಿಗಾಗಿ ಒಂದು ದಿನ”
ಜನವರಿ 2 ಸಂಜೆ 4ಗಂಟೆಗೆ#NRIappealDay @IKFederation @karave_KRV pic.twitter.com/S7CUWSg0R6
— Kannadigas Federation (@IKFederation) January 1, 2021
‘ಎನ್‍ಆರ್‍ಐ ಅಪೀಲ್ ಡೇ’ #NRIappealDay ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಜನವರಿ 2ನ್ನು ಅಂತರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲಾಯಿತು. ಅಭಿಯಾನದಲ್ಲಿ ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈಟ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜಲ್ರ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಂಕಾಂಗ್, ಸಿಂಗಪೂರ್, ಸ್ಕಾಟ್ಲ್ಯಾಂಡ್, ನಾರ್ವೆ, ನೆದಲ್ರ್ಯಾಂಡ್, ಸೌತ್ ಕೊರಿಯಾ ಸೇರಿದಂತೆ ಇನ್ನಿತರ ದೇಶದ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.
ಸರ್ಕಾರ ಮೂರು ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ಕೂಡಲೇ ಉಪಾಧ್ಯಕ್ಷರನ್ನು ನೇಮಿಸುವ ಜತೆಗೆ, ಕನ್ನಡ ಕಾಳಜಿಯ ಕ್ರಿಯಾಶೀಲ ಅಧಿಕಾರಿಗೆ ಸಮಿತಿಯ ಜವಾಬ್ದಾರಿ ನೀಡಬೇಕು. ಅನಿವಾಸಿ ಕನ್ನಡಿಗರು ಮತ್ತು ಸರ್ಕಾರದ ನಡುವೆ ಇರುವ ಏಕೈಕ ಕೊಂಡಿ ಈ ಸಮಿತಿ ಎಂಬುದನ್ನು ಸರ್ಕಾರ ಮರೆಯಬಾರದು. (5/6)#NRIAppealDay
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) January 2, 2021
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಕೂಡಲೇ ಉಪಾಧ್ಯಕ್ಷರನ್ನ ನೇಮಿಸಬೇಕು, ಉಪಾಧ್ಯಕ್ಷ ಸ್ಥಾನಕ್ಕೆ ಅನಿವಾಸಿಗಳ ಕಷ್ಟ ಬಲ್ಲ ಒಬ್ಬ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು. ನೆನೆಗುದಿಗೆ ಬಿದ್ದಿರುವ ಎನ್‍ಆರ್‍ಕೆ ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೆಗೊಳಿಸಬೇಕು. ಹೆಚ್ಚು ಅನಿವಾಸಿ ಕನ್ನಡಿಗರ ಸಾಂದ್ರತೆ ಇರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಪಾಠಶಾಲೆ ನಡೆಸಲು ವ್ಯವಸ್ಥೆ ಮಾಡಬೇಕು ಎಂಬ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.
#NRIappealDay @IKFederation @publictvnews @tv9kannada @CMofKarnataka @narendramodi @TOIIndiaNews @ndtv @DVSadanandGowda @udayavani_web @varthabharati @drashwathcn pic.twitter.com/JrSs9xLqfC
— Hidayath Addoor (@HidayathAddur) January 3, 2021
ಹೊರದೇಶಗಳಲ್ಲಿರುವ ಕನ್ನಡಿಗರು ಭೌತಿಕವಾಗಿ ನಮ್ಮಿಂದ ದೂರವಿರಬಹುದು. ಆದರೆ ಅವರೆಲ್ಲ ಕರ್ನಾಟಕದ ಮಣ್ಣಿನಮಕ್ಕಳು, ಕನ್ನಡಮ್ಮನ ಕರುಳಬಳ್ಳಿಯ ಕುಡಿಗಳು. ದೂರದೇಶಗಳಲ್ಲಿ ಇದ್ದೂ ತಾಯ್ನಾಡಿನ ಧ್ಯಾನ ಮಾಡುವ ಅನಿವಾಸಿ ಕನ್ನಡಿಗರನ್ನು ಸರ್ಕಾರ ನಿರ್ಲಕ್ಷ್ಯ ಮಾಡಕೂಡದು. ಅವರ ಎದೆಯ ದನಿಗೆ ಕಿವಿಗೊಡಬೇಕು. (1/6)#NRIAppealDay
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) January 2, 2021