ಬೆಂಗಳೂರು: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಾರಿಗೆ ನೌಕರರು ನೀಡಿರುವ ಬಂದ್ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಮೆಜೆಸ್ಟಿಕ್ ನಲ್ಲಿ ಒಂದೇ ಒಂದು ಬಸ್ ಇಲ್ಲ.
Advertisement
ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಂಪೂರ್ಣ ಖಾಲಿ ಖಾಲಿಯಾಗಿದೆ. ಬಸ್ ಇಲ್ಲ ಅಂದರೂ ಪ್ರಯಾಣಿಕರು ಮಾತ್ರ ಬಸ್ಸಿಗಾಗಿ ಪರದಾಡುತ್ತಿದ್ದಾರೆ. ನಾವು ಬಸ್ ಅನ್ನು ಓಡಿಸುತ್ತೇವೆ ಪ್ರಯಾಣಿಕರು ಬನ್ನಿ ಅಂತ ಸರ್ಕಾರ ಹೇಳಿದೆ. ಆದರೆ ಇದುವರೆಗೂ ಯಾವುದೇ ಒಂದು ಬಸ್ಸು ಓಡಾಡುತ್ತಿಲ್ಲ. ಈ ಮೂಲಕ ನಾಲ್ಕನೇ ದಿನವೂ ಪ್ರಯಾಣಿಕರ ಪರದಾಟ ಮುಂದುವರಿದಿದೆ.
Advertisement
Advertisement
ಪ್ರಯಾಣಿಕರು ಗುಂಪು ಗಂಪಾಗಿ ಸೇರುತ್ತಿದ್ದಾರೆ. ಸರಿಯಾಗಿ ಖಾಸಗಿ ಬಸ್ ಇಲ್ಲ, ಸರ್ಕಾರಿ ಬಸ್ ಮೊದಲೇ ಇಲ್ಲ. ಆಟೋ, ಕ್ಯಾಬ್ ಗಾಗಿ ಜನ ಮುಗಿ ಬೀಳುತ್ತಿದ್ದಾರೆ. ಇಂದು ಸೋಮವಾರವಾಗಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಸ್ಥಳಗಳಿಗೆ ಕೆಲಸಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಬರುತ್ತಿರುವ ಪ್ರಯಾಣಿಕರು ಬಸ್ಸಿಲ್ಲದೆ ಕಂಗಾಲಾಗಿದ್ದಾರೆ. ಒಂದು ಬಿಎಂಟಿಸಿ ಬಸ್ ಏರ್ ಪೋರ್ಟ್ ಕಡೆಗೆ ತೆರಳಿದೆ. ಇನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸುಗಳ ಮುಂದೆ ಪ್ರಯಾಣಿಕರ ದಂಡೇ ತೆರಳುತ್ತಿದೆ. ಆದರೆ ಖಾಸಗಿ ಬಸ್ಸುಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ.
Advertisement
ಕಳೆದ ಮೂರು ದಿನಗಳಿಂದ ಬಸ್ ನಿಲ್ದಾಣದ ಹೊರಗಿದ್ದ ಖಾಸಗಿ ಬಸ್ಸುಗಳು ಇಂದು ನೇರ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿವೆ. ನೇರವಾಗಿ ಬಸ್ ನಿಲ್ದಾಣಕ್ಕೆ ಬಂದು ನಿಂತು ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಮೆಜೆಸ್ಟಿಕ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿ ಬಸ್ಸಿಗೆ ಫ್ರೀ ಬಿಟ್ಟಿದ್ದೀನಿ ಸರ್ಕಾರ ಅಂದಿದೆ. ಆದರೆ ಸಾರಿಗೆ ಸಿಬ್ಬಂದಿ ಖಾಸಗಿ ಬಸ್ ಬರದಂತೆ ಬ್ಯಾರೀಕೇಡ್ ಹಾಕಿದ್ದಾರೆ. ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಭಾಗದಲ್ಲಿ ಪ್ರಯಾಣಿಕರು ಹೆಚ್ಚಾಗಿದ್ದಾರೆ.