ಭೋಪಾಲ್: ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಸ್ ಉರುಳಿದ ಪರಿಣಾಮ 35 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಹಳ್ಳಿಯಲ್ಲಿ ನಡೆದಿದೆ.
ಬಸ್ಸಿನಲ್ಲಿ 54 ಮಂದಿ ಪ್ರಯಾಣ ಮಾಡುತ್ತಿದ್ದರು. ಬಸ್ ನಾಲೆಗೆ ಬಿದ್ದಿದ್ದರಿಂದ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ. 7 ಮಂದಿ ಈಜಿಕೊಂಡು ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Advertisement
#UPDATE Madhya Pradesh: A total of 35 bodies recovered till now from the site in Sidhi where a bus, carrying around 54 passengers, fell into a canal today. 7 people were rescued. A search operation is underway. pic.twitter.com/Q47fSHhgUw
— ANI (@ANI) February 16, 2021
Advertisement
ಸುಮಾರು 54 ಮಂದಿ ಪ್ರಯಾಣಿಸುತ್ತಿದ್ದ ಬಸ್ ಸಿಧಿಯಿಂದ ಸತ್ನಾಕ್ಕೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನುರಿತ ಈಜುಗಾರರು ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸಾವು-ನೋವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.
Advertisement
घटना स्थल पर डॉक्टर, एम्बुलेंस समस्त व्यवस्थाएं लगी हुई हैं, राहत व बचाव के लिए हरसंभव प्रयास किये जा रहे हैं।
हम सबको सुरक्षित निकालने का प्रयास कर रहे हैं। आप भी सबके सकुशल होने की प्रार्थना कीजिए।
हम आज के इस कार्यक्रम को स्थगित करते हैं, इसे किसी और दिन करेंगे।
— Shivraj Singh Chouhan (@ChouhanShivraj) February 16, 2021
Advertisement
ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಸುಮಾರು 1 ಲಕ್ಷಕ್ಕೂ ಹೆಚ್ಚು ಮನೆಗಳ ಫಲಾನುಭವಿಗಳಿಗಾಗಿ ಇಂದು ಗೃಹ ಪ್ರವೇಶ ಎಂಬ ಸರ್ಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವವರಿದ್ದರು. ಆದರೆ ಬಸ್ ಅಪಘಾತ ನಡೆದ ಬೆನ್ನಲ್ಲೇ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮ ರದ್ದು ಮಾಡುವುದಾಗಿ ಘೋಷಿಸಿದ್ದಾರೆ.
मेरे भाइयों-बहनों, आज हम उत्साह से एक लाख घरों में गृह प्रवेश का यह कार्यक्रम संपन्न करने वाले थे, लेकिन सीधी में यात्रियों से भरी बस नहर में गिरने की दुखद सूचना सुबह मिली। राहत और बचाव का कार्य जारी है। ऐसी परिस्थिति में मेरा मन भी वहीं लगा हुआ है। pic.twitter.com/nfeOWLKum5
— Shivraj Singh Chouhan (@ChouhanShivraj) February 16, 2021
ಬಸ್ ಅಪಘಾತವಾಗಿರುವ ಬಗ್ಗೆ ವರದಿ ಕೇಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಸಿಧಿ ಜಿಲ್ಲಾಧಿಕಾರಿಯಿಂದ ಮಾಹಿತಿ ಕೇಳಿದ್ದಾರೆ. ನಾಲೆಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಯೂ ಕಷ್ಟವಾಗುತ್ತಿದೆ. ಹಾಗಾಗಿ ಶಾಹದಲ್ ಜಿಲ್ಲೆಯಲ್ಲಿ ಸೋನೆ ನದಿಗೆ ಕಟ್ಟಲಾದ ಬಾಣ್‍ಸಾಗರ್ ಅಣೆಕಟ್ಟೆಯಿಂದ ನೀರು ಬಿಡುವುದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿ ಟ್ವೀಟ್ ಮಾಡಿದ್ದಾರೆ.