ಭೋಪಾಲ್: ನಾಯಿ ಬೊಗಳಿದ್ದಕ್ಕೆ ಪಕ್ಕದ ಮನೆಯ ವ್ಯಕ್ತಿ ಅದನ್ನು ಹೊಡೆದು ಕೊಂದಿರುವ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
ರಾಮಕಲಾ ನಗರದ ನಿವಾಸಿ ಚಾಯಾ ತೋಮರ್ ನಾಯಿಯೊಂದನ್ನು ಪ್ರೀತಿಯಿಂದ ಸಾಕಿದ್ದರು. ನಾಯಿ ನಮ್ಮ ಮನೆಯ ಬಾಗಿಲಿನಲ್ಲಿ ನಿಂತು ಬೊಗಳುತ್ತಿತ್ತು. ಪಕ್ಕದ ಮನೆಯ ವ್ಯಕ್ತಿ ನಾಯಿಯನ್ನು ಒಂದೆಡೆ ಕರೆದುಕೊಂಡು ಹೋಗಿ ಹೊಡೆದು ಕೊಂದಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ನಾಯಿಯನ್ನು ನಾನು ಆಸ್ಪತ್ರೆಗೆ ಕರೆದುಕೊಂಡು ಹೋದೆ ಆದರೆ ನಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ತನ್ನ ಸಾಕು ನಾಯಿ ಸಾವಿಗೆ ಕಾರಣನಾದವನ ವಿರುದ್ಧ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಾಣಿಗಳ ಹತ್ಯೆ ಸೆಕ್ಷನ್ 429ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮಹಿಳೆ ದೂರಿನ ಮೆರೆಗೆ ದೂರನ್ನು ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸುತ್ತೇವೆ. ಪ್ರಾಣಿಹತ್ಯೆ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುರಾನ್ ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ಪವಾರ್ ಹೇಳಿದ್ದಾರೆ.