ಬೆಂಗಳೂರು: ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಆತಂಕದಿಂದ ಮತ್ತೋರ್ವ ಸಚಿವನ ಭೇಟಿಗೆ ಹಾತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಚಿವ ಶಿವರಾಂ ಹೆಬ್ಬಾರ್ ಜೆಸಿ ರಸ್ತೆಯ ನಿವಾಸದಲ್ಲಿ ಬೆಳವಣಿಗೆಗಳ ಬಗ್ಗೆ ಮಾತನಾಡಲು ಸಚಿವ ಬಿ.ಸಿ.ಪಾಟೀಲ್ ಭೇಟಿಗಾಗಿ ಮನೆಯ ಗೇಟ್ ನಲ್ಲೆ ನಿಂತು ಚಡಪಡಿಸಿದ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಏನೋ ಆತಂಕ….ಏನೋ ಸಂಕಟ…ನಿಂತಲ್ಲಿ ನಿಲ್ಲಲು ಆಗುತ್ತಿಲ್ಲ ಕೂತಲ್ಲಿ ಕೂರಲಾಗುತ್ತಿಲ್ಲ. ಏನಿದು ಗೊಂದಲ ಏನಿದು ಟೆನ್ಷನ್…. ಎಲ್ಲಿ ಎಲ್ಲಿ….ಸ್ನೇಹಿತ ಎಲ್ಲಿ ಎಷ್ಟೊತ್ತಿಗೆ ಬರ್ತಾನೆ…? ಏನಂತೆ ಈ ಬೆಳವಣಿಗೆ…? ಎಂಬಂತೆನೆಯಿಂದ ಒಳಗೂ ಹೊರಗೂ ಓಡಾಡಿದ್ದಾರೆ.
Advertisement
Advertisement
ಸಚಿವ ಶಿವರಾಂ ಹೆಬ್ಬಾರ್ ಬಿಜೆಪಿಯ ಸದ್ಯದ ಬೆಳವಣಿಗೆಯಿಂದ ಆತಂಕಗೊಂಡಿದ್ದಾರೆ. ಜೆಸಿ ರಸ್ತೆಯ ಸರ್ಕಾರಿ ನಿವಾಸದಲ್ಲಿ ಶಿವರಾಂ ಹೆಬ್ಬಾರ್ ಟೆನ್ಷನ್ ನಲ್ಲಿ ಇದ್ದರು. ತಮ್ಮ ನಿವಾಸದ ಪಕ್ಕದಲ್ಲೇ ಇದ್ದ ಬಿ.ಸಿ.ಪಾಟೀಲ್ ಗಾಗಿ ರಸ್ತೆವರೆಗೆ ಹೋಗಿ ಕಾದು ನಿಂತಿದ್ದರು. ಫೋನ್ ಮೇಲೆ ಫೋನ್ ಮಾಡಿ ಬೇಗ ಬಾ ಮನೆಗೆ ಮಾತಾಡಬೇಕು ಎಂದು ಬಿ.ಸಿ.ಪಾಟೀಲ್ ಗೆ ಕರೆ ಮಾಡಿ ಕರೆಯತೊಡಗಿದರು. ಇದನ್ನೂ ಓದಿ : ನಾಯಕತ್ವ ಬದಲಾವಣೆಗೆ ಕಾಲ ಸೂಕ್ತವಾಗಿಲ್ಲ: ಪೇಜಾವರ ಶ್ರೀ
Advertisement
Advertisement
ನಿಮ್ಮ ಮನೆಗೆ ನೇರವಾಗಿ ಬರ್ತಿನಿ ಎಂದಿದ್ದ ಸಚಿವ ಬಿ.ಸಿ.ಪಾಟೀಲ್ ಬರಲೇ ಇಲ್ಲ. ಪದೇ ಪದೇ ಗೇಟ್ ಬಳಿ ಬಂದು ರಸ್ತೆ ಕಡೆ ನೋಡುತ್ತ ಬಿ.ಸಿ.ಪಾಟೀಲ್ ಗಾಗಿ ಹೆಬ್ಬಾರ್ ಕಾದು ನಿಂತಿದ್ದಾರೆ. ಆದರೆ ಶಿವರಾಂ ಹೆಬ್ಬಾರ್ ನಿವಾಸಕ್ಕೆ ಬರದೇ ಪಕ್ಕದಲ್ಲಿ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ನೇರವಾಗಿ ಬಿ.ಸಿ.ಪಾಟೀಲ್ ಹೋಗಿದ್ದಾರೆ.
ಬಿ.ಸಿ.ಪಾಟೀಲ್ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಏಕಾಂಗಿಯಾಗಿ ಫುಟ್ ಪಾತ್ ಮೇಲೆ ಶಿವರಾಂ ಹೆಬ್ಬಾರ್ ನಡೆದುಕೊಂಡೇ ಪಾಟೀಲ್ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿ.ಸಿ.ಪಾಟೀಲ್ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಶಿವರಾಂ ಹೆಬ್ಬಾರ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಯಡಿಯೂರಪ್ಪ ಬದಲಾವಣೆಗೆ ಜೊತೆಗೆ ನಾಲ್ಕೈದು ವಲಸಿಗರನ್ನು ಸಂಪುಟದಿಂದ ಕೈಬಿಡಬಹುದು ಎಂಬ ಸುದ್ದಿ ಹಬ್ಬಿದೆ. ಈ ಬೆಳವಣಿಗೆಯಿಂದ ವಿಚಲಿತರಾಗಿರುವ ವಲಸಿಗ ಮಂತ್ರಿಗಳು ನಿನ್ನೆ ತಡರಾತ್ರಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಸಂಪುಟ ಸಭೆ ಬಳಿಕ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.