ಮಡಿಕೇರಿ: ಕೊಡಗಿನಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಇಂದು ಒಂದೇ ದಿನದಲ್ಲಿ ಬರೋಬರಿ 72 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಆದರೆ ಇದು ಯಾವುದರ ಅರಿವು ಇಲ್ಲದೆ, ಮಡಿಕೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿರುವ ಅಭ್ಯರ್ಥಿಗಳು ಹಾಗೂ ಅವರ ಜೊತೆಗೆ ಬಂದಿರುವ ನೂರಾರು ಬೆಂಬಲಿಗರು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸ್ಥಳದಲ್ಲೇ ನಿಯಮ ಉಲ್ಲಂಘನೆ ಅಗುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಪೊಲೀಸರು ಇದಕ್ಕೆ ಕ್ಯಾರೆ ಎನ್ನದೆ ಇರುವುದರಿಂದ ನೂರಾರು ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದರು. ಬಳಿಕ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡ ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಅಭ್ಯರ್ಥಿಗಳಿಗೆ ಹಾಗೂ ಬೆಂಬಲಿಗರಿಗೆ ದಂಡ ಹಾಕುತ್ತೇವೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ರು.
ದಿನದಿಂದ ದಿನಕ್ಕೆ ಕೊಡಗಿನಲ್ಲಿ ಕೋವಿಡ್ ಸ್ಫೋಟಗೊಳ್ಳುತ್ತಿರುವ ಸಮಯದಲ್ಲಿ ಜನರು ಮಾತ್ರ ಮೈ ಮರೆಯುತ್ತಿರುವುದು ಸಾರ್ವಜನಿಕರ ಅತಂಕಕ್ಕೆ ಕಾರಣವಾಗಿದೆ.