– ಇನ್ನೋರ್ವನಿಗಾಗಿ ಶೋಧ ಕಾರ್ಯ
ರಾಯಚೂರು: ತಾಲೂಕಿನ ತುಂಗಭದ್ರಾ ಕ್ಯಾಂಪ್‍ನಲ್ಲಿ ಶಾಲೆಗೆ ತೆರಳಿದ್ದ ಇಬ್ಬರು ಬಾಲಕರು ನಾಪತ್ತೆ ಪ್ರಕರಣದ ಓರ್ವ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಇಂದು ಬೆಳಗ್ಗೆ ಬಾಲಕ ಪ್ರವೀಣ್ (8) ಮೃತ ದೇಹ ಕಾಲುವೆಯಲ್ಲಿ ಪತ್ತೆಯಾಗಿದೆ. ಪ್ರವೀಣ್ ಹಾಗೂ ಚಿನ್ನಿ ಶಾಲೆಗೆ ಹೋದವರು ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಪೋಷಕರು ಹಾಗೂ ಗ್ರಾಮಸ್ಥರು ಹುಡುಕಾಡಿದರೂ ಬಾಲಕರು ಪತ್ತೆಯಾಗಿರಲಿಲ್ಲ. ಪ್ರವೀಣ್‍ನ ಮೃತ ದೇಹ ಕಾಲುವೆಯಲ್ಲಿ ಪತ್ತೆಯಾಗಿದೆ. ಮತ್ತೋರ್ವ ಬಾಲಕ ಚಿನ್ನಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಫೆಬ್ರವರಿ 12 ರಂದು ವಿದ್ಯಾರ್ಥಿಗಳಿಬ್ಬರು ಶಾಲೆಗೆ ತೆರಳಿದ್ದು, ಮಧ್ಯಾಹ್ನದ ವೇಳೆ ಶಾಲೆ ಬಿಟ್ಟು ಹೊರಗಡೆ ಹೋಗಿದ್ದರು. ಸಂಜೆಯಾದರೂ ಬಾಲಕರು ಮನೆಗೆ ಮರಳಿರಲಿಲ್ಲ. ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ದಳ ಹಾಗೂ ಇಡಪನೂರು ಪೊಲೀಸರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.