– ಮನೆಯ ಬಳಿ ಸೈಕಲ್ ಸವಾರಿ ಮಾಡುವಾಗ ಮಿಸ್ಸಿಂಗ್
– ಸೈಕಲ್ ಪತ್ತೆಯಾದ 2 ಕಿ.ಮೀ ದೂರದಲ್ಲಿ ಶವವಾಗಿ ಪತ್ತೆ
ಹೈದರಾಬಾದ್: ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿ ಇಂದು ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿಯನ್ನು ಸುಮೇಧಾ ಕಪುರಿಯಾ ಎಂದು ಗುರುತಿಸಲಾಗಿದೆ. ಸುಮೇಧಾ ಕೊನೆಯದಾಗಿ ಹೈದರಾಬಾದ್‍ನ ವಸತಿ ಪ್ರದೇಶವಾದ ನೆರೆಡ್‍ಮೆಟ್‍ನ ಕಾಕತಿಯಾ ನಗರದಲ್ಲಿ ತನ್ನ ಮನೆಯ ಹೊರಗೆ ಸೈಕಲ್ ಸವಾರಿ ಮಾಡುತ್ತಿದ್ದಳು. ಆದರೆ ಬಾಲಕಿಯ ಸೈಕಲ್ ಪತ್ತೆಯಾದ ಸ್ಥಳದಿಂದ 2 ಕಿ.ಮೀ ದೂರದಲ್ಲಿರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಗಾಗಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದ ಕೆಲವೇ ಗಂಟೆಗಳ ನಂತರ ಮೃತದೇಹ ಪತ್ತೆಯಾಗಿದೆ.
Advertisement
Advertisement
ಸುಮೇಧಾ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಈಕೆ ಗುರುವಾರ ಸಂಜೆ ನಾಪತ್ತೆಯಾಗಿದ್ದಳು. ನಂತರ ಪೋಷಕರು ಮಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೂಡಲೇ ಪೋಷಕರು ನೆರೆಡ್‍ಮೆಟ್ ಪೊಲೀಸರಿದೆ ನಾಪತ್ತೆ ದೂರ ದಾಖಲಿಸಿದ್ದರು. ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ಬಾಲಕಿ ಸೈಕಲ್ ತುಳಿಯುತ್ತಿದ್ದಾಗ ಚರಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
Advertisement
ನನ್ನ ಮಗಳು ಚರಂಡಿಗೆ ಬಿದ್ದಿದ್ದಾಳೆ ಎಂದರೆ ನಾನು ನಂಬಲ್ಲ. ಹೀಗಾಗಿ ಅವಳ ಸಾವಿನ ಬಗ್ಗೆ ತನಿಖೆ ನಡೆಸಬೇಕಾಗಿದೆ. ಏನೋ ಸಂಭವಿಸಿದಂತೆ ತೋರುತ್ತದೆ ಎಂದು ಬಾಲಕಿ ತಾಯಿ ಸುಕನ್ಯಾ ಕಪುರಿಯಾ ಆಗ್ರಹಿಸಿದ್ದಾರೆ.
Advertisement
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡಗಳು ಬಾಲಕಿಯ ಗುಲಾಬಿ ಬಣ್ಣದ ಸೈಕಲ್ ಅನ್ನು ಮನೆಗೆ ಹತ್ತಿರವಿರುವ ತೆರೆದ ಚರಂಡಿಯಲ್ಲಿ ಪತ್ತೆ ಮಾಡಿದೆ. ಕಳೆದ ಎರಡು ದಿನಗಳಿಂದ ಹೈದರಾಬಾದ್‍ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಚರಂಡಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಬಾಲಕಿ ಚರಂಡಿಗೆ ಬಿದ್ದಿರಬಹುದೆಂದು ಶಂಕಿಸಿ ರಕ್ಷಣಾ ಪಡೆ ಪೊಲೀಸರಿಗೆ ಚರಂಡಿ ತೆರೆಯಲು ಸಹಾಯ ಮಾಡಿದ್ದಾರೆ.
ಚರಂಡಿಯಲ್ಲಿ ಬಾಲಕಿ ಪತ್ತೆಯಾಗಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಸಮೀಪದ ಕೆರೆಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಸದ್ಯಕ್ಕೆ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಸ್ಥಳದಲ್ಲಿ ಮಗಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗುರುವಾರ ರಾತ್ರಿಯೇ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ನಾವು ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ. ಸದ್ಯ ತನಿಖೆಗಾಗಿ ನಾಲ್ಕು ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅದೇ ಕಾಲೋನಿಯ ಮನೆಯೊಂದರ ಹೊರಗಿನ ಕ್ಯಾಮೆರಾದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ತನ್ನ ಸೈಕಲ್‍ನಲ್ಲಿ ಹೋಗುತ್ತಿರುವನ್ನು ಕಾಣಬಹುದು ಎಂದು ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್ ಹೇಳಿದರು.