ಬೆಂಗಳೂರು: ಭಾನುವಾರ ನಾನ್‍ವೆಜ್ ಪ್ರಿಯರಿಗೆ ವಿಶೇಷ ದಿನವಾಗಿದ್ದು, ಬೆಳ್ಳಂಬೆಳಗ್ಗೆ ನಾನ್ ವೆಜ್ ಅಂಗಡಿಗಳ ಮುಂದೆ ಜನರು ಸಾಲಾಗಿ ಕ್ಯೂ ನಿಂತಿದ್ದಾರೆ.
ಇಂದು ಲಾಕ್‍ಡೌನ್ ಜಾರಿಯಾಗಿ ಐದನೇ ದಿನವಾಗಿದೆ. ಜೊತೆಗೆ ಇಂದು ಸಂಡೇ ಲಾಕ್‍ಡೌನ್ ಕೂಡ ಆಗಿದೆ. ಹೀಗಾಗಿ ಮುಂಜಾನೆಯಿಂದಲೇ ನಾನ್ ವೆಜ್ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಶಿವಾಜಿನಗರ ಮಾಂಸ ಮಾರುಕಟ್ಟೆಯಲ್ಲಿ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮಟನ್, ಚಿಕನ್, ಫಿಶ್ ಖರೀದಿಯಲ್ಲಿ ಮಾಂಸ ಪ್ರಿಯರು ತೊಡಗಿದ್ದು, ಇದರಿಂದ ಐದನೇ ದಿನದ ಲಾಕ್‍ಡೌನ್‍ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
Advertisement
Advertisement
ಇತ್ತ ಮೈಸೂರು ರಸ್ತೆಯ ಮಟಾನ್ ಸ್ಟಾಲ್ ಮುಂದೆ ಬೆಳ್ಳಂಬೆಳಗ್ಗೆ ಮಟಾನ್ ಖರೀದಿಗೆ ಜನರು ಫುಲ್ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಸದಾಶಿವನಗರ ಮಟನ್, ಚಿಕನ್ ಅಂಗಡಿಗಳ ಮುಂದೆಯೂ ಜನರು ಕ್ಯೂ ನಿಂತಿದ್ದಾರೆ. ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಜನರು ಸಾಲಿನಲ್ಲಿ ನಿಂತು ಮಟನ್, ಚಿಕನ್ ಖರೀದಿ ಮಾಡುತ್ತಿದ್ದಾರೆ.
Advertisement
Advertisement
ರಾಜ್ಯದಲ್ಲಿ ಕೊರೊನಾ ರುದ್ರ ತಾಂಡವ ಮುಂದುವರಿದಿದ್ದು, ಶನಿವಾರ 4,537 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಸಹ 2 ಸಾವಿರದ ಗಡಿ ದಾಟಿದ್ದು, 2,125 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಶನಿವಾರ 49 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕಳೆದ ದಿನ 93 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.