– ಸಾರಿ ಅಪ್ಪ, ಅಮ್ಮ: ಪುತ್ರನ ಭಾವನಾತ್ಮಕ ಪತ್ರ
– ನನ್ನ ನಿರ್ಧಾರ ಸರಿ ಇದೆಯೋ ಗೊತ್ತಾಗ್ತಿಲ್ಲ
ಲಕ್ನೋ: ನಾನು ಹೇಡಿಯಲ್ಲ, ನನ್ನಿಂದ ಬದುಕಲು ಆಗುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಪ್ರತಾಪಗಢದ ಲಾಲ್‍ಗಂಜ್ ವ್ಯಾಪ್ತಿಯ ಬೆಲ್ಹಾ ಗ್ರಾಮದ ಐಟಿಐ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಧೀರೇಂದ್ರ ಶರ್ಮಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮೃತ ಧೀರೇಂದ್ರ ಪ್ರತಾಪಘಢನಲ್ಲಿ ಐಟಿಐ ಓದುತ್ತಿದ್ದನು. ರಜೆ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಆಗಮಿಸಿದ್ದನು. ಮನೆಗೆ ಬಂದವನು ಎರಡನೇ ಮಹಡಿಯಲ್ಲಿರುವ ಕೋಣೆ ಸೇರಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ ತಾಯಿ ಊಟಕ್ಕೆ ಕರೆದಾಗಲೂ ಕೋಣೆಯಿಂದ ಉತ್ತರ ಬಂದಿಲ್ಲ. ಬಾಗಿಲು ತಟ್ಟಿದ್ರೂ ಮಗ ಉತ್ತರಿಸಿದರಿಂದ ಆತಂಕಗೊಂಡ ತಾಯಿ ಬೆಳಕಿನ ಕಿಂಡಿಯಲ್ಲಿ ಇಣುಕಿದಾಗ ಮಗನ ಶವ ನೇತಾಡುತ್ತಿರುವ ಭಯಾನಕ ದೃಶ್ಯ ಕಂಡಿದೆ.
Advertisement
Advertisement
ತಾಯಿಯ ಕಿರುಚಾಟ ಕೇಳಿ ಆಗಮಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಧೀರೇಂದ್ರ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ತನ್ನ ಸಾವಿಗೆ ಪ್ರದೀಪ್ ಸಿಂಗ್ ಮತ್ತು ಆತನ ಸೋದರಳಿಯ ಕಾರಣ ಎಂದು ಬರೆದಿದ್ದಾನೆ. ಹಾಗೆ ತಂದೆ-ತಾಯಿಗೂ ಕ್ಷಮೆ ಕೇಳಿದ್ದಾನೆ.
Advertisement
ಪ್ರೀತಿಯ ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ಸಾಯುತ್ತಿದ್ದೆನೆಂದು ನಾನೇನು ಹೇಡಿಯಲ್ಲ. ಆ ಇಬ್ಬರು ನನಗೆ ಬ್ಲ್ಯಾಕ್‍ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ನಾನು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನಾ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ಆದ್ರೆ ನನ್ನಿಂದ ಬದುಕಲು ಆಗುತ್ತಿಲ್ಲ. ನನ್ನ ಸಾವಿಗೆ ಪ್ರದೀಪ್ ಸಿಂಗ್ ಮತ್ತು ಆತನ ಸೋದರಳಿಯ ಕಾರಣ ಎಮದು ಧೀರೇಂದ್ರ ಹೇಳಿದ್ದಾನೆ.