ಧಾರವಾಡ: ನಾನು ಸತ್ತರೆ ಗೃಹ ಸಚಿವರು, ಸರ್ಕಾರವೇ ಕಾರಣ ಎಂದು ಯುವಕನೋರ್ವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಹಿರಿಯ ಅಧಿಕಾರಿ ಪ್ರವೀಣ್ ಸೂದ್ ಹೆಸರಿನಲ್ಲಿ ಪತ್ರ ಬರೆದಿದ್ದಾನೆ.
ಧಾರವಾಡದ ತಿಮ್ಮಾಪೂರ ಗ್ರಾಮದ ಮೈಲಾರ ಎಂಬ ಯುವಕನೇ ಪತ್ರ ಬರೆದಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ವಯಸ್ಸಿನ ಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಪತ್ರ ಬರೆದಿದ್ದನು. ಇದೇ 25ಕ್ಕೆ ತನ್ನ ವಯಸ್ಸಿನ ಮಿತಿ ಮುಗಿಯುತ್ತೆ ಎಂಬ ಆತಂಕದಿಂದ ಯುವಕ ಈ ಪತ್ರವನ್ನು ಬರೆದಿದ್ದಾನೆ.
ಸರ್ಕಾರ ಪಿಎಸ್‍ಐ ನೇಮಕಾತಿ ವಯಸ್ಸಿನ ಮಿತಿ ಹೆಚ್ಚಳ ಮಾಡಿರೋ ಹಿನ್ನೆಲೆಯಲ್ಲಿ ಅದೇ ರೀತಿ ಕಾನ್ಸ್ ಟೇಬಲ್ ನೇಮಕಾತಿ ವಯಸ್ಸಿನ ಮಿತಿ ಹೆಚ್ಚಿಸುವಂತೆ ಮೈಲಾರ ಆಗ್ರಹಿಸಿದ್ದು, ವಯಸ್ಸಿನ ಮಿತಿ ಹೆಚ್ಚಿಸಬೇಕು ಇಲ್ಲವೇ ಕೂಡಲೇ ನೇಮಕಾತಿ ಕರೆಯಬೇಕು. ಇಲ್ಲದೇ ಹೋದಲ್ಲಿ ನನ್ನ ಸಾವಿಗೆ ಗೃಹ ಸಚಿವರು ಮತ್ತು ಸರ್ಕಾರವೇ ಕಾರಣ ಎಂದಿದ್ದಾನೆ.
ಒಟ್ಟಿನಲ್ಲಿ ಕೊರೊನಾ ಹಿನ್ನೆಲೆ ವಯಸ್ಸಿನ ಮಿತಿ ಸಡಿಲಿಸುವಂತೆ ಸರ್ಕಾರಕ್ಕೆ ಮೈಲಾರ ಸರ್ಕಾರಕ್ಕೆ ಒತ್ತಾಯಿಸಿದ್ದಾನೆ.