ಮುಂಬೈ: ಬಾಲಿವುಡ್ ನಟ ಸೋನು ಸೂದ್ ಅವರು ಕೊರೊನಾ ಮೊದಲ ಅಲೆಯ ಸಮಯದಲ್ಲಿ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದರು. ಆದರೆ ಕೋವಿಡ್ ಎರಡನೇ ಅಲೆವೇಳೆ ಜನರಿಗೆ ಸಹಾಯ ಮಾಡಲು ಸಾಧ್ಯವಾಗದಿರುವ ಬಗ್ಗೆ ಸೋನು ಸೂದ್ ವಿಷಾದವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
Advertisement
ಕಳೆದ ವರ್ಷ ಕೊರೊನ ವೈರಸ್ ಕಾರಣದಿಂದಾಗಿ ಲಾಕ್‍ಡೌನ್ ಆಗಿರುವ ಸಮಯದಲ್ಲಿ ಬಡವರು, ಕಾರ್ಮಿಕ ವರ್ಗದವರಿಗೆ ಹೀರೋ ಆಗಿದ್ದಾರೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಯ ಹಾಸಿಗೆಗಳು ಮತ್ತು ಔಷಧಿಗಳನ್ನು ವ್ಯವಸ್ಥೆಗೊಳಿಸಲು ಸೂದ್ ಹೆಣಗಾಡುತ್ತಿದ್ದಾರೆ. ನನು ವಿಫಲನಾನಗತಿದ್ದೇನೆ ಎಂದು ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ.
Advertisement
Today :
Request for beds : 570
I could arrange just: 112
Requests for Remdesivir :1477
I could arrange just : 18
Yes we have failed
So is our health care system.????
— sonu sood (@SonuSood) April 19, 2021
Advertisement
ಆಸ್ಪತ್ರೆಯ ಬೆಡ್ ಕೇಳಿ ಸರಿಸುಮಾರು 570 ಮನವಿಗಳಿತ್ತು. ಆದರೆ ನಾನು ಒದಗಿಸಲು ಸಾಧ್ಯವಾಗಿದ್ದು ಕೇವಲ 112 ಆಗಿದೆ. ರೆಮ್‍ಡೆಸಿವಿರ್ ಚುಚ್ಚು ಮದ್ದು ಕೇಳಿ 1477 ಮನವಿಗಳು ಬಂದಿದ್ದವು. ನಾನು ಕೇವಲ 18 ಮಾತ್ರ ಒದಗಿಸಲು ಸಾಧ್ಯವಾಯಿತ್ತು. ನಾನು ವಿಫಲವಾಗಿದ್ದೇನೆ, ನಮ್ಮ ಆರೋಗ್ಯ ವ್ಯವಸ್ಥೆಯೂ ವಿಫಲವಾಗಿದೆ ಎಂದು ಬೇಸರದಿಂದ ಸೋನು ಸೂದ್ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಸೋನು ಅವರ ಪ್ರಯತ್ನಕ್ಕೆ ನೆಟ್ಟಿಗರು, ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
Advertisement
???? pic.twitter.com/ZRkapUQXFK
— sonu sood (@SonuSood) April 17, 2021
ಸೋನು ಸೂದ್ ಅವರಿಗೆ ಕಳೆದವಾರ ಕೊರೊನಾ ಪಾಸಿಟಿವ್ ಬಂದಿದೆ. ಈ ವಿಚಾರವನ್ನು ಟ್ವೀಟ್ ಮೂಲಕವಾಗಿ ತಿಳಿಸಿದ್ದರು.