ಮುಂಬೈ: ನಾನು ಶ್ರೀರಾಮನ ಭಕ್ತೆ, ಪ್ರಾಣ ಹೋದ್ರೂ ಕೊಟ್ಟ ಮಾತು ತಪ್ಪಲಾರೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿರುದ್ಧ ಕೇಳಿ ಬಂದ ಪ್ರಶಸ್ತಿ ವಾಪಸ್ ನೀಡಿ ಕೂಗಿಗೆ ಉತ್ತರಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಆತ್ಮಹತ್ಯೆ ಎಂದು ಏಮ್ಸ್ ವೈದ್ಯ ಹೇಳಿದ್ದು, ಕೊಲೆ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಏಮ್ಸ್ ವೈದ್ಯರ ವರದಿ ಉಲ್ಲೇಖಿಸಿ ಕಂಗನಾ ವಿರುದ್ಧ ಹರಿಹಾಯ್ದಿರುವ ನಟಿ ಸ್ವರಾ ಭಾಸ್ಕರ್, ನಿಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್ ನೀಡುವಂತೆ ಆಗ್ರಹಿಸಿದ್ದರು. ನೆಟ್ಟಿಗರು ಸಹ ಕಂಗನಾ ಪ್ರಶಸ್ತಿ ಹಿಂದಿರುಗಿಸಬೇಕೆಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗಳಿಗೆ ಕಂಗನಾ ತಮ್ಮ ಹೇಳಿಕೆಯನ್ನ ಮತ್ತೊಮ್ಮೆ ಕೇಳಿ ಎಂದು ಸಂದರ್ಶನ ವಿಡಿಯೋ ಲಿಂಕ್ ಹಾಕಿ ತಿರುಗೇಟು ನೀಡಿದ್ದಾರೆ.
Advertisement
Advertisement
ರಾಮನ ಭಕ್ತೆ: ಇದು ನನ್ನ ಸಂದರ್ಶನದ ವಿಡಿಯೋ. ನಿಮ್ಮ ನೆನಪಿನ ಶಕ್ತಿ ಕಡಿಮೆ ಇದ್ರೆ ಮತ್ತೊಮ್ಮೆ ನೋಡಿ. ನಾನು ಮಾಡಿರುವ ಆರೋಪಗಲ್ಲಿ ಯಾವುದಾದರು ಒಂದು ಸುಳ್ಳಾದರೂ ನನ್ನ ಎಲ್ಲ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತೇನೆ. ಇದು ಕ್ಷತ್ರೀಯಳ ಮಾತು. ನಾನು ರಾಮನ ಭಕ್ತೆ ಯಾಗಿದ್ದು, ಪ್ರಾಣ ಹೋದರೂ ಮಾತು ತಪ್ಪಲ್ಲ. ಜೈ ಶ್ರೀರಾಮ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಆರೋಪ ಸುಳ್ಳೆಂದರೆ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡ್ತೇನೆ: ಕಂಗನಾ
Advertisement
Advertisement
ಸಂದರ್ಶನದಲ್ಲಿ ಕಂಗನಾ ಹೇಳಿದ್ದೇನು?: ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಕಂಗನಾ ರಣಾವತ್, ನನ್ನ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಾಗದಿದ್ರೆ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತೇನೆ ಎಂದಿದ್ದರು. ಬಾಲಿವುಡ್ ಸ್ವಜನಪಕ್ಷಪಾತದ ಧ್ವನಿ ಎತ್ತಿದ್ದ ಕಂಗನಾ, ಸಿನಿಮಾ ಉದ್ಯಮದಲ್ಲಿ ತಾರತಮ್ಯದ ಬಗ್ಗೆ ಮಾತನಾಡಿದ್ದರು. ಸುಶಾಂತ್ ಸಾವಿಗೆ ಸ್ವಜನಪಾತ ಸಹ ಕಾರಣ ಎಂದು ಆರೋಪಿಸಿದ್ದರು. ಇದನ್ನೂ ಓದಿ: ತುಮಕೂರಲ್ಲಿ ಕಂಗನಾ ವಿರುದ್ಧ ದೂರು ದಾಖಲು
Hey! Now thay both CBI and AIIMS have concluded that #SushantSinghRajput tragically died by suicide… weren’t some people going to return their government bestowed awards??? ????????????
— Swara Bhasker (@ReallySwara) October 7, 2020
ಸುಶಾಂತ್ ಸಿಂಗ್ ಪ್ರಕರಣ ಡ್ರಗ್ಸ್, ಅಕ್ರಮ ಹಣ ವರ್ಗಾವಣೆ ಮತ್ತು ನಿಗೂಢ ಸಾವಿನ ಕುರಿತಾಗಿ ಮೂರು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಸುಶಾಂತ್ ಪ್ರೇಯಸಿ, ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಆದ್ರೆ ರಿಯಾ ಸೋದರ ಶೌವಿಕ್ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡಿದೆ. ಇದನ್ನೂ ಓದಿ: ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ