– ವಿಚಾರಣೆ ವೇಳೆ ಹಲವು ವಿಚಾರ ಬಹಿರಂಗ
ಬೆಂಗಳೂರು: ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ರವಿಶಂಕರ್ ಬಾಯಿಬಿಡಿಸಿದ್ದಾರೆ. ಈ ವೇಳೆ ಆತ ನಾನು ರಾಗಿಣಿ ಒಟ್ಟಿಗೆ ಡ್ರಗ್ ಸೇವನೆ ಮಾಡಿದ್ವಿ. ಒಂದು ಮಾತ್ರೆಯ ‘ಕಾಲು ಭಾಗ’ ಇಬ್ಬರು ತಗೊಂಡಿದ್ವಿ. ವೈಭವ್ ಜೈನ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ವಿ ಎಂಬುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಸೆಂಟ್ ಮಾರ್ಕ್ಸ್ ರಸ್ತೆಯ ಏರ್ ಲೈನ್ಸ್ ಹೋಟೆಲ್‍ನಲ್ಲಿ ನಾನು ರಾಗಿಣಿ ಭೇಟಿಯಾಗಿದ್ವಿ. ಸೆಂಟ್ ಮಾರ್ಕ್ಸ್ ರಸ್ತೆಯ ಕಬಾಬ್ ಕಾರ್ನರ್ ಬಳಿ ಡ್ರಗ್ಸ್ ನೀಡಿದ್ದ. ಆನಂತರ ನಾವು ಅದನ್ನ ಪಡೆದುಕೊಂಡು ಊಟ ಮಾಡಿ ಹೋಗಿದ್ದೆವು. ಬಳಿಕ ನಾವು ಹೊಟೇಲ್‍ಗೆ ವಾಪಸ್ ಹೋದೆವು ಎಂಬ ಮಾಹಿತಿಯನ್ನು ರವಿಶಂಕರ್ ನೀಡಿದ್ದಾನೆ.
Advertisement
Advertisement
ಕೊರೊನಾ ಲಾಕ್‍ಡೌನ್ ಟೈಂ ಸಮಯದಲ್ಲೂ ನಮ್ಮ ಬಿಸಿನೆಸಲ್ ನಿಲ್ಲಿಸಿರಲಿಲ್ಲ. ನಗರದಲ್ಲಿ ಎಲ್ಲಾ ಕ್ಲೋಸ್ ಆದ ಮೇಲೆ ಬೆಂಗಳೂರಿನ ಹೊರವಲಯಕ್ಕೆ ಶಿಫ್ಟ್ ಆಗಿತ್ತು. ಆ ನಂತರ ಪಾರ್ಟಿಗಳನ್ನ ನಗರದ ಹೊರವಲಯಕ್ಕೆ ಶಿಫ್ಟ್ ಮಾಡಲಾಯ್ತು. ಅಲ್ಲಿ ವಿನಯ್, ಅರುಣ್, ಚರಣ್ ಸಾಥ್ ನೀಡಿದ್ರು. ವೈಭವ್ ಅಲ್ಲಿಗೆ ಡ್ರಗ್ ಸಪ್ಲೈ ಮಾಡ್ತಾ ಇದ್ದ. ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತರ ಮಕ್ಕಳಿಗೆ ಮೆಸೇಜ್ ಮಾಡಿ ಕೆಲ ಕೋಡ್ ವರ್ಡ್ ಗಳ ಮೂಲಕ ಕರೆಸಲಾಗ್ತಿತ್ತು. ಈ ವೇಳೆ ಜಿಮ್ಮರ್ ಪ್ರಶಾಂತ್ ರಾಂಕಾ ಆಯೋಜನೆಗೆ ಸಾಥ್ ನೀಡಿದ್ದ. ಇನ್ನೂ ಪಾರ್ಟಿ ಆಯೋಜನೆಗೆ ಪ್ರಶಾಂತ್ ರಾಜ್ ಫಾರಂ ಹೌಸ್ ವ್ಯವಸ್ಥೆ ಮಾಡ್ತಿದ್ದ. ಈ ಪಾರ್ಟಿಗಳಿಗೆ ಎಕ್ಟಸಿ ಪಿಲ್ಸ್ ಡ್ರಗ್ ಬಳಕೆ ಮಾಡಲಾಗ್ತಿತ್ತು ಎಂದು ರವಿಶಂಕರ್ ವಿವರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆದಿತ್ಯ ಆಳ್ವಾ, ವೈಭವ್ ಪಾತ್ರವೇನು?:
ಪ್ರಕರಣದಲ್ಲಿ ಆದಿತ್ಯ ಆಳ್ವಾ ಮತ್ತು ವೈಭವ್ ದಂಧೆ ಮಾಹಿತಿ ಏನು ಎಂಬುದರ ಬಗ್ಗೆಯೂ ಎಳೆ ಎಳೆಯಾಗಿ ರವಿಶಂಕರ್ ಬಿಚ್ಚಿಟ್ಟಿದ್ದಾನೆ. ಮಾಜಿ ಸಚಿವರ ಪುತ್ರನೊಬ್ಬ ಗೋಲ್ಡ್ ಬ್ಯುಸಿನೆಸ್ ಮ್ಯಾನ್ ವೈಭವ್‍ಗೆ ಸಾಥ್ ನೀಡಿದ್ದಾನೆ. ಹೌದು ಈ ವೈಭವ್ ಜೈನ್ ಗೆ ಸಾಥ್ ನೀಡಿದ್ದು ದಿ.ಜೀವರಾಜ್ ಆಳ್ವಾ ಪುತ್ರ ಆದಿತ್ಯಾ ಆಳ್ವಾ. ವೈಭವ್ ಪಾರ್ಟಿ ಆಯೋಜಿಸಲು ಆದಿತ್ಯ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಜಾಗದ ವ್ಯವಸ್ಥೆ ಮಾಡಿದ್ದ. ತನ್‍ನ ಹೌಸ್ ಆಫ್ ಲಿಫ್ಟ್ ಪಕ್ಕದ ಫಾರಂ ಹೌಸ್ & ಕಿಟ್ ಕ್ಲೋಕ್ಕನ್ ನಲ್ಲಿ ಆಯೋಜನೆ ಮಾಡಿದ್ದ. ಅದಕ್ಕೆ ನಾನು ಮತ್ತೆ ರಾಗಿಣಿ ಸಾಥ್ ನೀಡಲು ಶುರು ಮಾಡಿದ್ವಿ. ನಮ್ಮ ಮೊಬೈಲ್ ನಂಬರ್ ಕಾಂಟ್ಯಾಕ್ಟ್ ಬಳಸಿಕೊಂಡ್ವಿ. ದೊಡ್ಡ ದೊಡ್ಡವರ ಮಕ್ಕಳನ್ನ ಪಾರ್ಟಿಗೆ ಕರೆಸುತ್ತಿದ್ವಿ. ಆರೋಪಿಗಳೆಲ್ಲರೂ ಒಟ್ಟಿಗೆ ಸೇರಿ ಈ ಬ್ಯುಸಿನೆಸ್ ನಡೆಸುತ್ತಿದ್ದರು.
ಪ್ರತೀಕ್ ಶೆಟ್ಟಿ ರೋಲ್ ಬಿಚ್ಚಿಟ್ಟ ರವಿಶಂಕರ್.!
ಪ್ರತೀಕ್ ಶೆಟ್ಟಿ 2018ರ ಬಾಣಸವಾಡಿ ಕ್ರೈಂ ನಂಬರ್ 588ರ ಆರೋಪಿ. ಅದೇ ಪ್ರಕರಣದ ಮುಂದುವರಿದ ಭಾಗವಾಗಿಯೂ ಸದ್ಯ ತನಿಖೆ ನಡೆಯುತ್ತಿದೆ. ಈ ಪ್ರತೀಕ್ ಶೆಟ್ಟಿ ರವಿಶಂಕರ್ ಹೆಂಡತಿ ತಂಗಿಯ ಬಾಯ್ ಫ್ರೆಂಡ್. ಆತ ಟೆಕ್ಕಿಯಾಗಿದ್ದು, ಆತನಿಗೆ ಚಿನ್ನದ ವ್ಯಾಪಾರಿ ವೈಭವ್ ಜೈನ್ ಬ್ಯುಸಿನೆಸ್ ಪಾರ್ಟನರ್ ಆಗಿದ್ದ. ಹೀಗಾಗಿ ಈ ಡ್ರಗ್ಸ್ ಬ್ಯುಸಿನೆಸ್ ಮಾಡಲು ಕೂಡ ಪಾರ್ಟನರ್ ಆದ. ಇವರು ಮೂರು ನಾಲ್ಕು ವರ್ಷಗಳಿಂದ ಈ ಬ್ಯುಸಿನೆಸ್ ಮಾಡ್ತಿದ್ದಾರೆ. ವೀಕ್ ಎಂಡ್ ಪಾರ್ಟಿ ಆಯೋಜನೆ ಮಾಡಿ ಹಣ ಮಾಡ್ತಿದ್ದರು. ಬಂದವರಿಗೆ, ಊಟ, ಎಣ್ಣೆ ಮತ್ತು ಮಾದಕ ಮತ್ತು ಸಪ್ಲೆ ಮಾಡ್ತಿದ್ದರಂತೆ. ಹೀಗೆ ಮಾಡಲು ಹೋಗಿ 2018 ರಲ್ಲಿ ತಗ್ಲಾಕೊಂಡು ಜೈಲಿಗೆ ಹೋಗಿದ್ದ. ಈ ವೇಳೆ ವೈಭವ್ ಜೈನ್ ಹೆಸರು ಕೇಳಿ ಬಂದಿತ್ತು. ಆಗ ಮಾಜಿ ಮಿನಿಸ್ಟರ್ ಮಗ ಅಂತ ಆದಿತ್ಯ ಆಳ್ವಾ, ವೈಭವ್ ನ ಬಚಾವ್ ಮಾಡಿದ್ನಂತೆ. ಸದ್ಯ ಆ ಕೇಸ್ ತನಿಖೆ ಈಗ ನಡೆಯುತ್ತಿದೆ.
ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸದಂತೆ ವಿಚಾರಣೆಯ ವೇಳೆ ಆರೋಪಿಗಳ ಬಣ್ಣ ಬಯಲಾಗುತ್ತಿದೆ. ಅಲ್ಲದೆ ಈ ಮಧ್ಯೆ ಆರೋಪಿಗಳ ಇತರ ಕೆಲ ಪ್ರಕರಣಗಳು ಕೂಡ ಒಂದೊಂದಾಗಿ ಹೊರಬರುತ್ತಿದ್ದು, ಮುಂದೇನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.