ಬಿಗ್ಬಾಸ್ ಮನೆಯಲ್ಲಿ ವೈಷ್ಣವಿ ತಾಳ್ಮೆಯಿಂದ ಇದ್ದು, ಯಾರೊಂದಿಗೂ ಇವರೆಗೂ ಜಗಳವನ್ನು ಮಾಡಿಕೊಂಡಿರಲಿಲ್ಲ. ಆದರೆ ಸೆಕೆಂಡ್ ಸೀಸನ್‍ನಲ್ಲಿ ವೈಷ್ಣವಿ ಸ್ವಲ್ಪ ತಾಳ್ಮೆ ಕಳೆದುಕೊಂಡು ನಡೆದುಕೊಂಡಿದ್ದಾರೆ. ಈ ಕುರಿತಾಗಿ ಸುದೀಪ್ ವೈಷ್ಣವಿಯನ್ನು ಕೇಳಿದಾಗ ವೈಷ್ಣವಿ ಒಂದೇ ಒಂದು ಮಾತಿಗೆ ಸುದೀಪ್ ಮರು ಮಾತನಾಡದೇ ಸುಮ್ಮನಾಗಿದ್ದಾರೆ.
‘ಸೂಪರ್ ಸಂಡೆ ವಿತ್ ಸುದೀಪ’ ಕಾರ್ಯಕ್ರಮದಲ್ಲಿ ಚರ್ಚೆ ನಡೆಯುತ್ತಿತ್ತು. ಎಸ್ ಆರ್ ನೋ ಆಟದಲ್ಲಿ ಸುದೀಪ್ ಮನೆಯಲ್ಲಿ ನಡೆದಿರುವ ಕೆಲವು ವಿಚಾರಗಳನ್ನು ಆಧರಿಸಿ ಪ್ರಶ್ನೆಯನ್ನು ಮಾಡುತ್ತಾರೆ. ಗೆಲ್ಲಬೇಕು ಎನ್ನುವ ಹಠ ಬಂದಮೇಲೆ ವೈಷ್ಣವಿಗೆ ಕೋಪ ಬರೋಕೆ ಆರಂಭವಾಗಿದೆ ಎಂದು ಸುದೀಪ್ ಪ್ರಶ್ನೆ ಮಾಡಿದರು. ಆಗ ಹೆಚ್ಚಿನವರು ಹೌದು ಎನ್ನುವ ಉತ್ತರವನ್ನು ಕೊಟ್ಟಿದ್ದಾರೆ. ವೈಷ್ಣವಿಗೆ ಮೊದಲಿನಿಂದಲೂ ಕೋಪ ಬರುತ್ತಿತ್ತು. ಅದನ್ನು ಅವರು ಮನೆಯಲ್ಲಿ ತೋರಿಸಿರಲಿಲ್ಲ. ಈಗ ಅದನ್ನು ತೋರಿಸೋಕೆ ಆರಂಭಿಸಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ ಎಂದು ಪ್ರಶಾಂತ್ ಹೇಳಿದರು.
ಮಂಜು ಕೂಡ ಸುದೀಪ ಪ್ರಶ್ನೆಗೆ ಹೌದು ಸುಮ್ಮನೇ ಇದ್ದರೇ ಪ್ರಯೋಜನ ಇಲ್ಲ ಎಂದು ಬದಲಾಗಿದ್ದಾರೆ ಎನ್ನುವ ಉತ್ತರ ಕೊಟ್ಟರು. ವೈಷ್ಣವಿಗೆ ಈ ಪ್ರಶ್ನೆ ಕೇಳಿದಾಗ ನಾನು ಮನುಷ್ಯಳೇ ಅಲ್ಲವಾ ಸರ್? ಎಂದು ಮರು ಪ್ರಶ್ನೆ ಹಾಕಿದರು. ಆಗ ಸುದೀಪ್ ನಕ್ಕು ಸುಮ್ಮನಾಗಿದ್ದಾರೆ.
ಬಿಗ್‍ಬಾಸ್ ಎಂಟನೇ ಸೀಸನ್ ಆರಂಭದಲ್ಲಿ ವೈಷ್ಣವಿ ತುಂಬಾನೇ ಸೈಲೆಂಟ್ ಆಗಿದ್ದರು. ಅವರು ಎಲ್ಲರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಈ ವಿಚಾರ ಇಟ್ಟುಕೊಂಡು ಮನೆ ಮಂದಿ ವೈಷ್ಣವಿ ಅವರನ್ನು ಟೀಕೆ ಮಾಡಿದ್ದರು. ಅವರ ಗಾಡಿ ಇನ್ನೂ ಸ್ಟಾರ್ಟ್ ಆಗಿಲ್ಲ ಎಂದು ಅನ್ನಿಸುತ್ತಿದೆ ಎಂದು ಕೆಲವರು ಅಭಿಪ್ರಾಯ ಹೊರ ಹಾಕಿದ್ದರು. ಇದನ್ನು ವೈಷ್ಣವಿ ಗಂಭೀರವಾಗಿ ಪರಿಗಣಿಸಿದ್ದರು. ಈ ಕಾರಣಕ್ಕೆ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಟಾಸ್ಕ್‌ನಲ್ಲಿ ಅಗ್ರೆಸ್ಸಿವ್ ಆಗಿ ಆಡೋಕೆ ಆರಂಭಿಸಿದ್ದರು. ಈ ವಾರ ಪ್ರಶಾಂತ್ ಅವರೊಂದಿಗೆ ಜಗಳ ಮಾಡಿಕೊಂಡು ಸುದ್ದಿಯಾದ್ದರು.
View this post on Instagram