ಮುಂಬೈ: ನಾನು ಪ್ರತಿ ನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂದು ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಹೇಳಿದ್ದಾರೆ.
ವೈಲ್ಡ್ ಮ್ಯಾನ್ ಎಂದೇ ಖ್ಯಾತರಾಗಿರುವ ಬಿಯರ್ ಗ್ರಿಲ್ಸ್ ಹಾಗೂ ಹುಮಾ ಖುರೇಶಿ ನಡೆಸಿದ ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಭಾಗವಹಿಸಿದ ವೇಳೆ ಸ್ವತಃ ಅಕ್ಷಯ್ ಕುಮಾರ್ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಆಯುರ್ವೇದ ಕಾರಣಗಳಿಂದಾಗಿ ಕಾಡಿನಲ್ಲಿ ಸ್ಟಂಟ್ ಮಾಡುವುದು ನನಗೆ ಸಮಸ್ಯೆ ಆಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ಪ್ರತಿ ನಿತ್ಯ ಗೋಮೂತ್ರವನ್ನು ಸೇವಿಸುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ.
ಅಕ್ಷಯ್ ಕುಮಾರ್ ಈ ವಿಚಾರವನ್ನು ರಿವೀಲ್ ಮಾಡುತ್ತಿದ್ದಂತೆ ಲೈವ್‍ನಲ್ಲಿ ಭಾಗವಹಿಸಿದ್ದವರು ಆಶ್ಚರ್ಯಚಕಿತರಾಗಿದ್ದಾರೆ. ಅಕ್ಷಯ್ ಕುಮಾರ್ ಅವರು ಮಾರ್ಷಲ್ ಆಟ್ರ್ಸ್ ಎಕ್ಸ್ ಪರ್ಟ್ ಎಂದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ ಅವರು ಬೆಳಗ್ಗೆ ಬೇಗ ಏಳುತ್ತಾರೆ ಎಂಬುದು ಸಹ ತಿಳಿದಿದೆ. ಆದರೆ ಅವರು ಗೋಮೂತ್ರ ಕುಡಿಯುವ ಕುರಿತು ಈವರೆಗೆ ರಿವೀಲ್ ಮಾಡಿರಲಿಲ್ಲ. ಇದೀಗ ಈ ಕುರಿತು ಸ್ಪಷ್ಟಪಡಿಸಿದ್ದಾರೆ.
ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ಬಿಯರ್ ಗ್ರಿಲ್ಸ್ ಜೊತೆಗೆ ‘ಇಂಟು ದಿ ವೈಲ್ಡ್’ ಶೋ ಭಾಗವಾಗಿ ವಿವಿಧ ರೀತಿಯ ಸ್ಟಂಟ್‍ಗಳನ್ನು ಮಾಡಿದ್ದರು. ಮರ ಹತ್ತುವುದು, ರೋಪ್ ಲ್ಯಾಡರ್ ಹಾಗೂ ಹೊಳೆಯನ್ನು ದಾಟುವುದು ಸೇರಿದಂತೆ ವಿವಿಧ ರೀತಿಯ ಸ್ಟಂಟ್‍ಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅಲ್ಲದೆ ಶೋನಲ್ಲಿ ಅಕ್ಷಯ್ ಕುಮಾರ್ ಅವರು ಎಲಿಫ್ಯಾಂಟ್ ಪೂಪ್ ಟೀಯನ್ನು ಸಹ ಕುಡಿದಿದ್ದಾರೆ. ಈ ಕುರಿತು ಹುಮಾ ಖುರೇಷಿ ಸೇರಿದಂತೆ ಹಲವರು ಅಕ್ಷಯ್ ಕುಮಾರ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
https://www.instagram.com/tv/CE80urupejq/?utm_source=ig_embed&utm_campaign=loading
ಎಲಿಫ್ಯಾಂಟ್ ಪೂಪ್ ಟೀ ಕುಡಿಯಲು ನೀವು ಅಕ್ಷಯ್ ಕುಮಾರ್ ಅವರನ್ನು ಹೇಗೆ ಮನವೊಲಿಸಿದರಿ ಎಂದು ಹುಮಾ ಅವರು ಬಿಯರ್ ಗ್ರಿಲ್ಸ್ ಅವರನ್ನು ಕೇಳುತ್ತಾರೆ. ಇದಕ್ಕೆ ಗ್ರಿಲ್ಸ್ ಉತ್ತರಿಸಿ, ನಾವು ಅದನ್ನು ಹೇಗೆ ಮುಗಿಸಿದೆವೋ ತಿಳಿಯಲೇ ಇಲ್ಲ. ಆದರೆ ಅದು ತುಂಬಾ ಕೆಟ್ಟದ್ದೇನು ಅಲ್ಲ ಅಲ್ಲವೇ ಎಂದು ಅಕ್ಕಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಕ್ಷಯ್ ಕುಮಾರ್, ನಾನು ಚಿಂತಿಸಲಿಲ್ಲ. ಬದಲಿಗೆ ಚಿಂತೆ ಮಾಡಲು ತುಂಬಾ ಉತ್ಸುಕನಾಗಿದ್ದೆ. ಆಯುರ್ವೇದ ಕಾರಣಗಳಿಂದಾಗಿ ಇದು ಸಾಧ್ಯವಾಯಿತು ಎಂದರು. ಇದೇ ವೇಳೆ ನಾನು ಪ್ರತಿನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂಬ ವಿಚಾರವನ್ನು ಸಹ ರಿವೀಲ್ ಮಾಡಿದರು.