ನಾನು ಡ್ರಗ್ಸ್ ಸೇವನೆ ಮಾಡಲ್ಲ, ಮಾಡೋರ ಬಗ್ಗೆ ಗೊತ್ತಿಲ್ಲ: ರಚಿತಾ ರಾಮ್

Public TV
1 Min Read
rachitha

ಬೆಂಗಳೂರು: ನಾನು ಡ್ರಗ್ಸ್ ಸೇವನೆ ಮಾಡಲ್ಲ, ಮಾಡುವವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿಯ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಚಿತಾ ರಾಮ್, ಇದರ ಬಗ್ಗೆ ನನಗೇನು ಗೊತ್ತಿಲ್ಲ. ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಸುದ್ದಿಯ ಬಗ್ಗೆ ನನಗೆ ಅರಿವಿಲ್ಲ. ಅದು ಇಂಡಸ್ಟ್ರಿಯಲ್ಲಿ ಇದ್ದರೂ ಅದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಡ್ರಗ್ಸ್ ಮಾಫಿಯಾ ಬಗ್ಗೆ ಪ್ರತಿಕ್ರಿಯಿಸಿದರು.

vlcsnap 2020 08 28 13h31m25s10 e1598602490796

ಅವರವರ ಜೀವನ ಅವರ ಇಷ್ಟ. ಅವರ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದುಕೊಂಡಿರುತ್ತಾರೋ ಹಾಗೆ ಇರುತ್ತಾರೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಹೀಗಾಗಿ ಅವರ ಜೀವನವನ್ನು ಅವರೇ ನೋಡಿಕೊಳ್ಳಬೇಕು. ಅವರು ಬಿದ್ದರೆ ಅವರೇ ಎದ್ದೇಳಬೇಕು. ನಾವು ಚೆನ್ನಾಗಿದ್ದಾಗ ಮಾತ್ರ ಎಲ್ಲರೂ ನಮ್ಮೊಟ್ಟಿಗೆ ಇರುತ್ತಾರೆ. ಆದರೆ ನಾವು ಚೆನ್ನಾಗಿಲ್ಲ ಎಂದರೆ ನಮ್ಮನ್ನು ಬಿಟ್ಟು ಹೋಗುತ್ತಾರೆ. ಆಗ ನಾವು ಏಕಾಂಗಿ ಎಂದು ಗೊತ್ತಾಗುತ್ತದೆ. ಹೀಗಾಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದರು.

vlcsnap 2020 08 28 13h17m20s8 e1598602526251

ನಾನು ಡ್ರಗ್ಸ್ ಸೇವನೆ ಮಾಡಲ್ಲ ಮಾಡುವವರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಆರೋಗ್ಯ, ಕುಟುಂಬ ಮತ್ತು ಜೀವನವನ್ನು ನಾವೇ ನೋಡಿಕೊಳ್ಳಬೇಕು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಜೋಪಾನ. ಮಾದಕ ವಸ್ತುಗಳು ಬಳಸಿ ಆರೋಗ್ಯ ಹಾಳು ಮಾಡಿ ಕೊಳ್ಳಬೇಡಿ ಎಂದು ರಚಿತಾ ರಾಮ್ ಹೇಳಿದರು.

‘ಕಸ್ತೂರಿ ನಿವಾಸ’ ಟೈಟಲ್‍ನಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಹೊಸ ಕಸ್ತೂರಿ ನಿವಾಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ದಿನೇಶ್ ಬಾಬು ಸಾರಥ್ಯದ 50ನೇ ಚಿತ್ರವಾಗಿದ್ದು, ಇಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.

Share This Article
Leave a Comment

Leave a Reply

Your email address will not be published. Required fields are marked *