ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ವಿರುದ್ಧ ಡ್ರಗ್ಸ್ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ನಟಿಯ ಹಳೆಯ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ. ಕಂಗನಾ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಅನ್ನೋ ಆರೋಪಕ್ಕೆ ವಿಡಿಯೋ ಪುಷ್ಟಿ ನೀಡುತ್ತಿದೆ.
Advertisement
ಸಿನಿ ಕೆರಿಯರ್ ಆರಂಭದಲ್ಲಿ ತಾನು ಡ್ರಗ್ ಅಡಿಕ್ಟ್ ಆಗಿದ್ದೆ ಎಂದು ನಟಿ ಕಂಗನಾ ರಣಾವತ್ ಹೇಳಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮಾರ್ಚ್ 29ರಂದು ಕಂಗನಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ತನ್ನ ಸಿನಿ ಬದುಕು ಮತ್ತು ಡ್ರಗ್ಸ್ ಅಡಿಕ್ಟ್ ನಿಂದ ಹೊರ ಬಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಣವೀರ್, ರಣ್‌ಬೀರ್, ವಿಕ್ಕಿ ಡ್ರಗ್ಸ್ ಪರೀಕ್ಷೆಗೆ ಒಳಪಡಬೇಕು – ಕಂಗನಾ
Advertisement
Advertisement
ವಿಡಿಯೋದಲ್ಲಿ ಏನಿದೆ?: ಮನೆಯಲ್ಲಿ ಕುಳಿತು ಬೋರ್ ಆಗ್ತಿದೆಯಾ? ಕೆಲವರು ಅಳುತ್ತಿರಬಹುದು. ಕೆಟ್ಟ ಸಮಯ ಅದು ನಿಮ್ಮ ಜೀವನದ ಅತ್ಯಂತ ಒಳ್ಳೆಯ ದಿನ ಆಗಿರುತ್ತೆ. ಕಾರಣ ಆ ದಿನಗಳು ನಿಮಗೆ ಅಪಾರ ಅನುಭವ ನೀಡುತ್ತವೆ. 15-16ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಬಂದೆ. ಆಕಾಶದಲ್ಲಿರುವ ನಕ್ಷತ್ರಗಳನ್ನ ಹಿಡಿಯುವ ಆಸೆ ನನ್ನದಾಗಿತ್ತು. ಮನೆಯಿಂದ ಓಡಿ ಬಂದ ಎರಡೂವರೆ ವರ್ಷದಲ್ಲಿ ನಾನು ಫಿಲಂ ಸ್ಟಾರ್ ಮತ್ತು ಡ್ರಗ್ಸ್ ಅಡಿಕ್ಟ್ ಆಗಿದ್ದೆ. ಆ ಸಮಯದಲ್ಲಿ ಕೆಲವರ ಸಂಪರ್ಕದಿಂದಾಗಿ ನನ್ನ ಜೀವನ ಸಮಸ್ಯೆಗಳಿಂದ ತುಂಬಿತ್ತು. ನನ್ನ ಜೀವನವೇ ಅಂತ್ಯವಾಗುವ ಹಂತದಲ್ಲಿತ್ತು. ಇದನ್ನೂ ಓದಿ: ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ
Advertisement
https://www.instagram.com/p/B-T4iCHlGIo/
ಈ ಸಮಯಲ್ಲಿ ಒಳ್ಳೆಯ ಸ್ನೇಹಿತರ ಪರಿಚಯವಾಯ್ತು. ಅವರು ನನಗೆ ಧ್ಯಾನ, ಯೋಗ ಅಭ್ಯಾಸ ಮಾಡೋದನ್ನ ಕಲಿಸಿದರು. ವಿವೇಕಾನಂದ ಅವರನ್ನ ಗುರುಗಳೆಂದು ತಿಳಿದು ನನ್ನನ್ನ ನಾನು ಸುಧಾರಿಸಿಕೊಂಡಿದ್ದೇನೆ. ನನಗಾಗಿ ನಾನು ಬದುಕೋದನ್ನ ಕಲಿತುಕೊಂಡಿದ್ದರಿಂದ ನನ್ನ ವಿಲ್ ಪವರ್, ಭಾವನೆ, ಕುಟುಂಬ ಜೊತೆಗಿನ ಸಂಬಂಧ, ಟ್ಯಾಲೆಂಟ್ ಸುಧಾರಿಸಿಕೊಂಡೆ. ಹಾಗಾಗಿ ಇಂದು ಒಂದು ಹಂತಕ್ಕೆ ಬಂದಿದ್ದೇನೆ. ಆ ಕಷ್ಟದ ದಿನಗಳ ಬರದಿದ್ರೆ ಗುಂಪಿನಲ್ಲಿ ನಾನು ಒಬ್ಬಳಾಗುತ್ತಿದ್ದೆ. ಒಂದೆರಡು ವರ್ಷ ಕಟ್ಟುನಿಟ್ಟಾಗಿ ಬ್ರಹ್ಮಚರ್ಯವನ್ನ ಪಾಲಿಸಿದ್ದೇನೆ ಎಂದು ಹೇಳಿದ್ದಾರೆ.
ಕಂಗನಾ ಚಾಲೆಂಜ್: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಕಂಗನಾ ವಿರುದ್ಧ ಡ್ರಗ್ ತನಿಖೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಮುಂಬೈ ಪೊಲೀಸರು ಕಂಗನಾ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕಂಗನಾ, ಬಹಳ ಸಂತೋಷ. ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ. ನನ್ನ ಕರೆಗಳನ್ನು ತನಿಖೆ ಮಾಡಿ ಡ್ರಗ್ ಪೆಡ್ಲರ್ ಜೊತೆ ಇರುವ ಸಂಬಂಧವನ್ನು ಪತ್ತೆ ಹಚ್ಚಿ. ಒಂದು ವೇಳೆ ತಪ್ಪು ಸಾಬೀತಾದರೆ ನಾನು ಮುಂಬೈ ತೊರೆಯುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. ಇದನ್ನೂ ಓದಿ: ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ
ರಣ್‍ವೀರ್ ಸಿಂಗ್, ರಣ್‍ಬೀರ್ ಕಪೂರ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಿಕ್ ಡ್ರಗ್ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಬೇಕು. ಈ ನಟರು ಕೊಕೇನ್ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ಬಂದಿರುವ ಆರೋಪವನ್ನು ಸುಳ್ಳು ಮಾಡಲು ನಟರು ರಕ್ತದ ಮಾದರಿಯನ್ನು ನೀಡಬೇಕೆಂದು ವಿನಂತಿಸುತ್ತಿದ್ದೇನೆ. ಈ ವ್ಯಕ್ತಿಗಳು ಯುವ ಜನತೆಗೆ ಮಾದರಿಯಾಗಿರುವ ಕಾರಣ ಆರೋಪ ಮುಕ್ತವಾಗಬೇಕೆಂದು ಎಂದು ಕಂಗನಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ.
ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಸೋದರ ಶೌವಿಕ್ ಚಕ್ರವರ್ತಿ ಸೇರಿದಂತೆ 16 ಜನರನ್ನ ಎನ್‍ಸಿಬಿ ಬಂಧಿಸಿದೆ. ಇತ್ತ ಸ್ಯಾಂಡಲ್‍ವುಡ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಹ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.