ಬೆಳಗಾವಿ: ನಾನು ವಿಚ್ಛೇದನ ಪತ್ರವನ್ನು ಹಿಂಪಡೆಯುತ್ತಿದ್ದೇನೆ. ಅದಕ್ಕೆ ಬೇಕಾದ ಸಹಿ ಕೂಡ ಮಾಡಿದ್ದೀನಿ ಎಂದು ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಹೇಳಿದರು. ಇದನ್ನೂ ಓದಿ: ನಾನು ನನ್ನ ಹೆಂಡತಿಯನ್ನು ಮನವೊಲಿಸಬೇಕಾಗಿಲ್ಲ: ಕೆ.ಕಲ್ಯಾಣ್
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಶ್ವಿನಿ, ಶಿವಾನಂದ ವಾಲಿಯನ್ನು ತುಂಬಾ ನಂಬಿದ್ದೆವು. ಆದರೆ ನಮಗೆ ನಂಬಿಕೆ ದ್ರೋಹ ಮಾಡಿದ್ದಾನೆ. ನಾವು ಅವರ ಮಾತನ್ನ ಕೇಳಬೇಕು, ಹೇಳಿದ್ದನ್ನು ಮಾಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಯಾರನ್ನಾದರೂ ಮನೆಗೆ ಸೇರಿಸಿಕೊಳ್ಳಬೇಕಾದರೆ ಅವರ ಪೂರ್ವಪರ ಮಾಹಿತಿ ಪಡೆದು ಕೆಲಸಕ್ಕೆ ಸೇರಿಸಿಕೊಳ್ಳಿ. ಈ ಘಟನೆಯಿಂದ ಹೊರಗೆ ಬರಲು ನಾನು ಮತ್ತು ನಮ್ಮ ಪೋಷಕರು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಇನ್ನೂ ನಾನು ವಿಚ್ಛೇದನ ಪತ್ರವನ್ನು ಹಿಂಪಡೆಯುತ್ತಿದ್ದೇನೆ. ಅದಕ್ಕೆ ಬೇಕಾದ ಸಹಿ ಕೂಡ ಮಾಡಿದ್ದೀನಿ. ನನ್ನ ಮೇಲೆ ಯಾರೋ ಪ್ರಭಾವ ಬೀರಿದ್ದರು. ಈಗ ನಾನು ಚೆನ್ನಾಗಿದ್ದೇನೆ. ಆರೋಪಿ ಶಿವಾನಂದ ನನಗೆ ಮೋಸ ಮಾಡಿದ ಎಂದು ಕೆ.ಕಲ್ಯಾಣ ಪತ್ನಿ ಅಶ್ವಿನಿ ಹೇಳಿದರು.
ಆರೋಪಿ ಶಿವನಾಂದ ವಾಲಿ ತಾನು ಹೇಳಿದ್ದ ಮಾತನನ್ನ ಕೇಳುವ ರೀತಿ ನಮ್ಮ ಪರಿಸ್ಥಿತಿ ನಿರ್ಮಾಣ ಮಾಡಿದ್ದ. ಆದರೆ ಏನು ಮಾಡಿದ್ದ ಎಂಬುದು ನನಗೆ ಗೊತ್ತಿಲ್ಲ. ನಾನು ಮತ್ತು ನನ್ನ ಪತಿ ಇಬ್ಬರು ಪರಸ್ಪರ ಭೇಟಿಯಾಗಿ ಮಾತನಾಡಿಲ್ಲ. ಇಬ್ಬರೂ ಭೇಟಿಯಾಗಿ ವೈಯಕ್ತಿಕವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ಬೆಳಗಾವಿ ಪೊಲೀಸರು ನಮಗೆ ತುಂಬಾ ಸಹಕಾರ ಮಾಡಿದ್ದಾರೆ. ಕೆಟ್ಟ ಸಮಯದಿಂದ ಈ ರೀತಿ ಆಗಿದೆ. ನಮಗೂ ತುಂಬಾ ಒತ್ತಡ ಇತ್ತು. ಆದರೆ ಆ ದೇವರೇ ಪೊಲೀಸರ ರೂಪದಲ್ಲಿ ಬಂದು ಸಹಾಯ ಮಾಡಿದ್ದಾರೆ ಎಂದು ಬೆಳಗಾವಿ ಪೊಲೀಸರಿಗೆ ಅಶ್ವಿನಿ ಕೃತಜ್ಞತೆ ಸಲ್ಲಿಸಿದರು.