ಬೆಂಗಳೂರು: ಕೊರೊನಾ ಭೀತಿಯಿಂದ ಹೋಂ ಕ್ವಾರಂಟೈನ್ ಮುಗಿಸಿ ಇಂದಿನಿಂದ ಮತ್ತೆ ತಮ್ಮ ಸೇವೆಗೆ ವೈದ್ಯಕೀಯ ಸಚಿವ ಡಾ. ಸುಧಾಕರ್ ಹಾಜರಾಗಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸವಾಗ್ತಿತ್ತು ಎಂದು ತಮ್ಮ ಕ್ವಾರಂಟೈನ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಇಷ್ಟು ದಿನ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದೆ. ಕ್ವಾರಂಟೈನ್ ನಲ್ಲಿದ್ರೂ ನಿತ್ಯ ಕೋವಿಡ್ ಕೆಲಸದಲ್ಲಿ ಮನೆಯಿಂದಲೇ ಭಾಗವಹಿಸ್ತಿದ್ದೆ. ಭೌತಿಕವಾಗಿ ಇವತ್ತಿಂದ ಹೊರಗೆ ಬದಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ರಾಜ್ಯದಲ್ಲಿ ಕೋವಿಡ್ ಕೇರ್ ಕೇಂದ್ರಗಳ ಹೆಚ್ಚಳದ ನಿಟ್ಟಿನಲ್ಲಿ ಖಾಲಿಯಿರುವ ಬಿಡಿಎ ಮತ್ತು ಖಾಸಗಿ ಫ್ಲ್ಯಾಟ್ ಗಳು, ದೊಡ್ಡ ಕ್ರೀಡಾ ಸೌಕರ್ಯಗಳನ್ನು ಬಳಸಿಕೊಳ್ಳುವ ಕುರಿತು ಇಂದು ಬಿಡಿಎ ಆಯುಕ್ತರು, ರೇರಾ ಕಾರ್ಯದರ್ಶಿಗಳು, ಕ್ರೀಡಾ ಇಲಾಖೆ ಆಯುಕ್ತರು, ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದೆ. pic.twitter.com/16z9em60jM
— Dr Sudhakar K (@mla_sudhakar) June 27, 2020
Advertisement
ನಾನು ಆ್ಯಕ್ಟಿವ್ ಆಗಿದ್ದಿದ್ದರಿಂದ ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸವಾಗುತ್ತಿತ್ತು. ಇದೀಗ ಮತ್ತೆ ಜನರ ಸೇವೆ ಮಾಡುವ ಅವಕಾಶ ಬಂದಿದ್ದು ಸಂತಸ ತಂದಿದೆ. ಎಲ್ಲರ ಹಾರೈಕೆಯಿಂದ ಮತ್ತೆ ಎಲ್ಲರ ಸೇವೆಗೆ ಅವಕಾಶ ಸಿಕ್ಕಿದೆ. ಮತ್ತೆ ಎಂದಿನಂತೆ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ.
Advertisement
ನನ್ನ ಕುಟುಂಬದಲ್ಲಿ ಯಾರಿಗೆಲ್ಲ ಪಾಸಿಟಿವ್ ಬಂದಿತ್ತೋ ಅವರೂ ಗುಣಮುಖರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ ಎಂದು ಅವರು ಇದೇ ವೇಳೆ ತಿಳಿಸಿದರು.
Advertisement
ಸುಧಾಕರ್ ಮನೆಯಲ್ಲಿ ಮೊದಲು ಅವರ ತಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಬೆನ್ನಲ್ಲೇ ಮನೆಯವರೆಲ್ಲ ಟೆಸ್ಟ್ ಮಾಡಿಸಿದಾಗ ಸಚಿವರ ಪತ್ನಿ ಹಾಗೂ ಮಗಳಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಸಚಿವರು ಹಾಗೂ ಅವರ ಇನ್ನಿಬ್ಬರು ಗಂಡು ಮಕ್ಕಳ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು.
ಆತ್ಮೀಯ ಬಂಧುಗಳೇ, ತಮ್ಮೆಲ್ಲರ ಶುಭಹಾರೈಕೆ, ಆಶೀರ್ವಾದಗಳಿಂದ ನನ್ನ ಕುಟುಂಬ ಸದಸ್ಯರು ಕ್ಷೇಮದಿಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಪ್ರಾಥಮಿಕ ಸಂಪರ್ಕಿತನಾಗಿ ಕ್ವಾರಂಟೈನ್ ನಲ್ಲಿರುವುದರಿಂದ, ನಾಳೆ ನನ್ನ ಜನ್ಮದಿನದಂದು ನೀವು ಇರುವಲ್ಲಿಂದಲೇ ಹಾರೈಸಿ, ಆಶೀರ್ವದಿಸಿ, ನಿಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿಯಾಗಿದ್ದೇನೆ.???? pic.twitter.com/Xycswv51zj
— Dr Sudhakar K (@mla_sudhakar) June 26, 2020