ಬೆಂಗಳೂರು: ನಾನು ಅಪ್ಪನಿಗೆ ಹುಟ್ಟಿದವನು ಎಲ್ಲಿ ಹೋಗಲ್ಲ. ಹಿಂದೆ ಮುಂದೆ ಮುಚ್ಚಿಟ್ಟುಕೊಂಡು ಯಾಕೆ ಮಾತನಾನಡಲಿ ನಾನೊಬ್ಬ ಆರ್‍ಎಸ್‍ಎಸ್ ಕಾರ್ಯಕರ್ತ ಎಂದು ಜಗ್ಗೇಶ್ ನಿನ್ನೆ ದರ್ಶನ್ ಅಭಿಮಾನಿಗಳು ಮಾತನಾಡಿರುವ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಲೈವ್ ಬಂದು ಬೇಸರವನ್ನು ಹೊರಹಾಕಿದ್ದಾರೆ.
ಒಂದು ವಿಷಯವನ್ನು ಇಟ್ಟುಕೊಂಡು ನನಗೆ ಬೇಸರ ಮಾಡುತ್ತಿದ್ದಾರೆ. ಸಣ್ಣ ವಿಷಯವನ್ನು ಇಟ್ಟುಕೊಂಡು ನೋವು, ಅಪಮಾನವನ್ನು ಮಾಡಿದರೆ ನನಗೆ ಯಾವುದೇ ನಷ್ಟವಿಲ್ಲ. ನಾನು ಕಳ್ಳತನ, ರಾಬರಿ ಮಾಡಿದ್ದೀನಾ? ಹೆದರಿ ಕೂತಿದೀನಾ? ನಿನ್ನೆ ಬಂದಿರುವವರ ಜೊತೆಯಲ್ಲಿ ಅವರೊಂದಿಗೆ ಕೂತು ಮಾತನಾಡಿದ್ದೇನೆ ಎಂದಿದ್ದಾರೆ.
ಕೋಟ್ಯಾಂತರ ರೂಪಾಯಿ ವಂಚನೆ, ಕನ್ನಡ ನೆಲಕ್ಕೆ ಅವಮಾನ ಮಾಡಿದ್ದೀನಾ. ಅಪಚಾರ, ಅವಮಾನ ನಾನು ಮಾಡಿಲ್ಲ, ಖಾಸಗಿ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡುವ ಹಾಗೆ ಆಗಿದೆ ಹಾಗಂತ ನಾನು ಹೆದರಿ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ.
ಇದು ಬೇಕಿತ್ತ ನಿಮಗೆ..
https://t.co/aED9S8Abn0
— ನವರಸನಾಯಕ ಜಗ್ಗೇಶ್ (@Jaggesh2) February 23, 2021
ನಾನು ಸಿನಿಮಾ ರಂಗಕ್ಕೆ ಬಂದು 40 ವರ್ಷವಾಯಿತು. ನಾನು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಯಾರು ಹುಟ್ಟಿರಲಿಲ್ಲ. 80ನೇ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು, ರಾಜ್‍ಕುಮಾರ್, ವಿಷ್ಣುವರ್ಧನ್, ಪ್ರಭಾಕರ್ ಅವರ ಜೊತೆಗೆ ಹೆಜ್ಜೆ ಹಾಕುತ್ತಾ ಬಂದಿರುವನು ನಾನು. ಇಲ್ಲಿವರೆಗೂ ಬಂದಿದ್ದೇನೆ ಎಂದರೆ ಎಲ್ಲಾ ನನ್ನ ಕನ್ನಡಿಗರಿಂದಾಗಿದೆ. ಕನ್ನಡಕ್ಕಾಗಿಯೆ ಬದುಕುತ್ತಿದ್ದೇನೆ ಮುಂದೆಯು ಬದುಕುತ್ತೇನೆ. ಇಲ್ಲಯವರೆಗೂ ಬೇರೆ ಭಾಷೆಗಳಲ್ಲಿ ಕಾಣಿಸಿಕೊಂಡಿ, ನನಗೆ ಬೇಕಾಗಿಲ್ಲ ಎಂದಿದ್ದಾರೆ.
ನಾನು ಸ್ವಾಭಿಮಾನಿಯಾಗಿ ಬದುಕುತ್ತಿದ್ದೇನೆ. ನಾನು ನನ್ನ ಬದುಕಲ್ಲೇ ಯಾರ ಬೂಟು ನೆಕ್ಕಿಲ್ಲ ಹಾಗೇ ಮಾಡಿದ್ದರೆ ನಾನು ಎಂಎಲ್‍ಎ, ಮಂತ್ರಿ ಆಗುತ್ತಿದೆ. ನೂರಾರು ಪೋಸ್ಟ್ ಗಳನ್ನು ತೆಗೆದುಕೊಳ್ಳುತ್ತಿದ್ದೆ. ನೀವು ಹೇಳಿದ್ದನೆಲ್ಲ ನಂಬಲು ಜನ ಒಂದು ಸೈಡ್ ಇಲ್ಲ. ಸತ್ಯ ಹೇಳುವುದಕ್ಕೆ ಸೋಷಿಯಲ್ ಮೀಡಿಯಾ ಇದೆ. ಇದೆನಾ ನೀವು ಹಿರಿಯ ನಟರಿಗೆ ಕೊಡು ಗೌರವಾಗಿದೆಯಾ? ಅನ್ಯಭಾಷೆಯವರು ಬಂದು ಕರ್ನಾಟಕವನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೇರೆಯವರು ಬಂದು ಅವರ ಭಾಷೆಯಲ್ಲಿ ಮಾತನಾಡುವಂತೆ ಪ್ರಚೋದನೆ ಕೊಡುತ್ತಿದ್ದಾರೆ ಕನ್ನಡ ಚಿತ್ರರಂಗ ಹಾಳಾಗಿ ಹೋಗಬೇಕಾ..? ಯಾರು ಹೇಳುವವರು ಕೇಳುವವರು ಇಲ್ಲವಾ..?
ಆತ್ಮೀಯರೆ ನನಗೆನೀವು ನಿಮಗೆ ನಾನು ಇನ್ನುಮುಂದೆ!
ಇನ್ನುಮುಂದೆ ನನ್ನಉದ್ಯಮದ ಯಾರ ಹುಟ್ಟುಹಬ್ಬ,ಸಿನಿಮ, ಸ್ನೇಹ,ಕಾರ್ಯಕ್ರಮ,ಬೇಟಿ,ಹರಟೆ
ನನ್ನಿಂದ ಇರುವುದಿಲ್ಲ!
ಮುಂದೆ ನನ್ನಸಿನಿಮ ನನ್ನztv showಗೆ ಮೀಸಲುಬದುಕು!
ಕಾರಣ ತುಂಬ ತಾಮಸವಾಗಿದೆ ನಮ್ಮರಂಗ,ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ! pic.twitter.com/cRRzNgtL1b
— ನವರಸನಾಯಕ ಜಗ್ಗೇಶ್ (@Jaggesh2) February 22, 2021
ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರನ್ನು ಕಳೆದುಕೊಂಡ ಹೋದ ಮೇಲೆ ಕನ್ನಡ ಸ್ವಾಭಿಮಾನವು ಸಾಯುತ್ತಿದೆ. ಉಳಿದಿರುವುದು ನಾವು ಕೆಲವರು ಮಾತ್ರ ನಾವು ಸತ್ತ ಮೇಲೆ ನಮ್ಮ ತಿಥಿಯನ್ನು ಮಾಡಿ ಸಂತೋಷವನ್ನು ಪಡಿ. ನನಗೆ ಬಹಳ ನೋವು ಕೊಟ್ಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ನನ್ನ ಪೂಜೆ ಸಿನಿಮಾ, ಸಂಸಾರ ಎಂದು ಇದ್ದವನು ನಾನು. ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೆನೆ ಹೋಗುತ್ತೇನೆ. ನನಗಾಗಿ ಕಾಯುವ ಸಾವಿರಾರು ಇದ್ದಾರೆ. ನೀನೊಬ್ಬ ಒಕ್ಕಲಿಗ ಎಂದು ಕೇಳಿದ್ದೀರಾ. ನಾನು ಸುಮ್ಮನೇ ಇದ್ದೇನೆ.
ನಿನ್ನೆ ಬಂದಿದ್ದ ಹುಡುಗರಿಗೆ ಕುಳಿತು ಉತ್ತರ ನೀಡಿದ್ದೇನೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ನಾನು ಓಡಿ ಹೋಗಿಲ್ಲ. ಕೇಳುವ ಸೌಜನ್ಯ ಇರಲಿಲ್ಲ. ನೂರು ಜನರು ಕಿರುಚುವಾಗ ಒಬ್ಬ ಹೇಗೆ ಮಾತನಾಡಲು ಸಾಧ್ಯವಾಗುತ್ತದೆ. ಈ ವಿಚಾರವಾಗಿ ನೀವು ಮಾತನಾಡುತ್ತಿರಾ?
ನನಗೆ ಬುದ್ದಿ ಕಲಿಸಬೇಕಾದವರು ರಾಘವೇಂದ್ರ ಸ್ವಾಮಿಗಳು, ನನ್ನ ಕನ್ನಡಿಗರು, ಹೆತ್ತವರಾಗಿದ್ದಾರೆ. ಯಾವೂಬ್ಬ ನಟ ಮತ್ತು ಅವನ ಅಭಿಮಾನಿಗಳು ಬರಲು ಸಾಧ್ಯವಾಗಲ್ಲ. ನನ್ನ ಪಾಡಿಗೆ ನನ್ನ ಬಿಡಿ ನಾನು ಕನ್ನಡ ತಾಯಿ ಸೇವೆ ಮಾಡಿಕೊಂಡು ಇರುತ್ತೇನೆ, ಕನ್ನಡದ ನಟನಾಗಿರುತ್ತೇನೆ ಎಂದಿದ್ದಾರೆ.
ನನಗೆ ಮಸಿ ಬಳಿಯುವ ಕೆಲಸ ಮಾಡಬೇಡಿ. ಕನ್ನಡದ ಕೆಲಸ ಮಾಡುತ್ತೇನೆ. ಎಷ್ಟೋ ಜನರು ನನ್ನ ಬಳಿ ಸಲಹೆ ಕೇಳುವಂತೆ ಆಗಿದ್ದೇನೆ. ನನ್ನನ್ನು ಅವಮಾನ ಮಾಡಲು ಬರಬೇಡಿ. ಹತ್ತಾರು ವರ್ಷ ಕನ್ನಡದ ಸೇವೆ ಮಾಡಬೇಕು ಎಂದು ಇದ್ದೇನೆ. ನೀವೆಲ್ಲ ನನ್ನ ಸ್ನೇಹಿತರಲ್ಲಾವ ಯಾಕೆ ಹೀಗೆ ನನ್ನ ಬಗ್ಗೆ ಹೀಗೆ ಬರಿತಿರಾ ಮಾತನಾಡುತ್ತೀರಾ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಕುಳಿತು ಮಾತನಾಡಬೇಕು. ದುಡ್ಡವರು ಇದ್ದಾರೆ. ಒಂದು ಸಿನಿಮಾ ಹಿಟ್ ಆದರೆ ಇನ್ನೊಬ್ಬ ಹುನ್ನಾರ ಮಾಡುತ್ತಾನೆ. ನಾನೊಬ್ಬನೇ ಬೆಳಯಬೇಕು. ನಾನೋಬ್ಬನೇ ಉದ್ಧಾರ ಆಗಬೇಕು ಎನ್ನುವ ಭಾವನೆ ಇದೆ. ನಮ್ಮ ಸಿನಿಮಾ, ಕನ್ನಡ ಚಿತ್ರರಂಗ ಎಂಬುದು ಇಲ್ಲ.
ನಾವು ಯಾಗಾವ ತಪ್ಪು ಮಾಡುತ್ತಿನಿ ಅಲ್ವಾ ಆಗಾ ನಾನು ಮಂಡಿಯೂರಿ ಕ್ಷಮೆ ಕೇಳುತ್ತೇನೆ. ಊಟ ನಿದ್ರೆ ಇಲ್ಲದೇ ಒಂದು ಕಷ್ಟ ಪಟ್ಟು ಬಂದು ಕನ್ನಡಿಗರ ಚಪ್ಪಾಳೆಯಿಂದ ಬೆಳದವನು ನಾನು. ನನ್ನ ಬೆಳಸಿರುವುದು ಮಾಧ್ಯಮವಾಗಿದೆ. ನನ್ನಪಾಡಿಗೆ ನನ್ನ ಬಿಡಿ. ನಿಮ್ಮ ತಂದೆತಾಯಿಗೂ ಹೀಗೆ ಅವಮಾನ ಮಾಡುತ್ತೀರಾ. ಇನ್ನು 2 ವರ್ಷದಲ್ಲಿ 60 ವರ್ಷವಾಗುತ್ತೇ ಇದೆಲ್ಲಾ ಯಾಕೆ ಎಂದಿದ್ದಾರೆ.
ಮೂರು ಜನ ಬಂದು ಸಿನಿಮಾ ನೋಡುತ್ತಿದ್ದಾರೆ ಇದಲ್ಲ ಸಿನಿಮಾ. ನಿದೇಶಕ, ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾಕೆ ರಂಗ ಕನ್ನಡ ಚಿತ್ರರಂಗ ಹಾಳಾಗಿ ಹೋಗುತ್ತಿದೆ. ಸ್ಟಾರ್ ಡಂ ಮಾಡತ್ತಿರಲ್ಲ. ನನಗೂ ಅಭಿಮಾನಿ ಸಂಘ ಇದೆ. ಅವರಿಗೆಲ್ಲ ಮಾತನಾಡಬೇಡಿ ಎಂದು ತಿಳಿಸಿದ್ದೇನೆ. ತಿಳಿಯದೆ ಆಗಿರುವುದು ನಾನು ಈ ಕುರಿತಾಗಿ ಮಾತನಾಡುತ್ತೇನೆ ಎಂದು ಹೇಳಿದ್ದೇನೆ.
ತಿನ್ನೋಕೆ ಅನ್ನವಿಲ್ಲದ ಪರಿಸ್ಥಿತಿಯಲ್ಲಿ ನಾನು ಸಿನಿಮಾ ರಂಗಕ್ಕೆ ಬಂದು 150 ಸಿನಿಮಾ ಮಾಡಿದ್ದೇನೆ. 29 ಸಿನಿಮಾ ನಿರ್ಮಾಣ ಮಾಡಿದ್ದೇನೆ, 2 ಬಾರಿ ಶಾಸಕನಾಗಿದ್ದೇನೆ. ಎಲ್ಲೂ ಕೂಡಾ ಕಳ್ಳತನ, ಲಂಚವನ್ನು ತೆಗೆದುಕೊಂಡಿಲ್ಲ ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ನಾನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ.
ಒಬ್ಬ ಕಲಾವಿದರ ಮಧ್ಯೆ ತಂದು ಇಟ್ಟು ತಮಾಷೆ ಮಾಡುವುದನ್ನು ಬಿಟ್ಟು ಬಿಡಿ. ಜನರಿಗೆ ಒಂದು ದಿನ ಸತ್ಯ ಏನು ಎಂಬುದು ಗೊತ್ತಾಗುತ್ತದೆ. ನಾನು ಅಪ್ಪನಿಗೆ ಹುಟ್ಟಿದ ಮಗ.. ನಾನು ಎಲ್ಲಿಯೂ ಓಡಿ ಹೋಗಲ್ಲ. ನನಗೆ ಗೊತ್ತು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಹೇಳಿದ್ದಾರೆ.
ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನು ಮುಂದಿನ ದಿನಗಳಲ್ಲಿ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಟಿವಿ ಶೋಗಳಿಗೆ ಮಾತ್ರ ಬದುಕು ಮೀಸಲು ಇಡುತ್ತೇನೆ.
ತುಂಬ ತಾಮಸವಾಗಿದೆ ನನಗೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.