– ರಾಜ್‍ಕುಮಾರ್, ಕುಟುಂಬದ ಮೇಲೆ ಅಪಾರ ಗೌರವವಿದೆ
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಕುರಿತು ನಾಲಗೆ ಹರಿಬಿಟ್ಟ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಶಾಂತಿನಗರ ಶಾಸಕ ಹ್ಯಾರಿಸ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೊಮ್ಮಲೂರು ಭಾಗದಲ್ಲಿ ಕೆಲಸ ನಡೆಯುತಿತ್ತು. ಹೀಗಾಗಿ ವೀಕ್ಷಣೆಗೆ ಹೋಗಿದ್ದೆ. ಡಾ.ರಾಜಕುಮಾರ್, ಅಂಬೇಡ್ಕರ್ ಪ್ರತಿಮೆ ಕೂಡ ಇದೆ. ಸ್ಟ್ಯಾಚ್ಯೂ ನಡೀತಿರೋದನ್ನು ನಾವು ನೋಡೋಕಷ್ಟೇ ಹೋಗಿದ್ದು. ರಾಜಕುಮಾರ್ ಅವರನ್ನು ಜೀವಂತವಾಗಿ ನೋಡಿ ಪ್ರೀತಿ ಹಂಚಿಕೊಳ್ತಿದ್ದೇವೆ. ಅಣ್ಣಾವ್ರು ಇಡೀ ಮಾನವ ಕುಲಕ್ಕೆ ಸಂದೇಶ ಕೊಡ್ತಾರೆ. ಇವರ ಬಗ್ಗೆ ಯಾರಾದ್ರೂ ಮಾತಾಡೋದಕ್ಕೆ ಆಗತ್ತಾ ಎಂದು ಪ್ರಶ್ನಿಸಿದರು.
Advertisement
Advertisement
ಯಾರೋ ಬೇಕು ಅಂತ ಕಟ್ ಆ್ಯಂಡ್ ಪೇಸ್ಟ್ ಮಾಡಿದ್ದಾರೆ. ಯಾರಾದ್ರೂ ಇಂಟರ್ ನ್ಯಾಶನಲ್ ಅಣ್ಣಾವ್ರು ಅಂತಿದ್ರೆ ಅದು ರಾಜಕುಮಾರ್ ಅವರೇ. ನಾನು ಅವಕಾಶ ಸಿಕ್ಕಾಗೆಲ್ಲ ವೇದಿಕೆ ಮೇಲೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಅಂತ ಹಾಡು ಹೇಳ್ತೀನಿ. ಅಂಬೇಡ್ಕರ್ ಪ್ರತಿಮೆ ಪರಿಶೀಲನೆ ಮಾಡಲಾಗ್ತಿತ್ತು. ಪಕ್ಕದಲ್ಲಿ ಕೆಂಪೇಗೌಡ ಪ್ರತಿಮೆಯ ಕೆಲಸ ನಡೆಯುತಿತ್ತು. ನಾನು ಏನು ಮಾತನಾಡಿಲ್ಲ. ಅಲ್ಲಿ ಚರ್ಚೆಯಾಗಿರೋದನ್ನ ಏನೋ ತೊಗೊಂಡು ಅಲ್ಲಿ ರಾಜ್ ಪ್ರತಿಮೆ ಪಕ್ಕ ಬೋರ್ಡ್ ಹಾಕಬೇಕಿತ್ತು. ಅದನ್ನ ಹಾಕಿಸಿ ಅಲ್ಲಿ ಅಂತ ಹೇಳಿ ಬಂದದ್ದು. ನಾನು ರಾಜ್ ಅವರ ದೊಡ್ಡ ಅಭಿಮಾನಿ. ಸಾರಿ ಸಹೋದರರೇ ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದು ಶಾಸಕರು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಡಾ. ರಾಜ್ ಕುಮಾರ್ ಪರವಾಗಿ ಏನು ಬೇಕಾದರೂ ಮಾಡಲು ನಾನು ತಯಾರಿದ್ದೇನೆ. ಪ್ತಿಮೆ ಇಟ್ಟು ಯಾರಾದ್ರೂ ಕವರ್ ಮಾಡ್ತಾರಾ.? ಪ್ರತಿಮೆ ಇಟ್ಟು ಮುಚ್ಚೋದು ಸರಿಯಲ್ಲ. ಕವರ್ ಮಾಡೋದು ಸರಿಯಲ್ಲ ಅಂತ ಅಷ್ಟೇ ನಾನು ಹೇಳಿದ್ದು. ಅದು ಓಪನ್ ಆಗಿದ್ರೆ ಚೆನ್ನಾಗಿರುತ್ತೆ ಅಂತ ಹೇಳಿದ್ದೆ. ನಾನು ಅಭಿಮಾನಿಗಲ್ಲಿ ಮನವಿ ಮಾಡ್ತೀನಿ. ರಾಜ್ ಕುಮಾರ್ ವಿರುದ್ಧ ಯಾವತ್ತೂ ಆ ರೀತಿಯ ಹೇಳಿಕೆ ನೀಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಅಣ್ಣಾವ್ರ ಕುರಿತು ನಾಲಗೆ ಹರಿಬಿಟ್ಟ ಹ್ಯಾರಿಸ್ ವೀಡಿಯೋ ಫುಲ್ ವೈರಲ್
ವೀಡಿಯೋದಲ್ಲಿ ನಾನು ಏನು ಹೇಳಿದ್ದೇನೆ..? ಅಲ್ಲಿ ಪ್ರತಿಮೆ ಇಟ್ಟು ಅಫೀಸ್ ಮಾಡಲು ಪ್ರಯತ್ನ ಮಾಡ್ತಿದ್ದಾರೆ. ಪಾರ್ಕ್ ನಲ್ಲಿ ಅವೆಲ್ಲ ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದೇನೆ. ಪಾರ್ಕ್ ಒಳಗೆ ಅಫೀಸ್ ಕಚೇರಿ ಕಟ್ತೀವಿ ಅಂದ್ರೆ ಅದು ಆಗಲ್ಲ ಅಂತ ಹೇಳಿದ್ದೇನೆ. ನನ್ನ ಮೇಲೆ ಬೇಕಂತಲೇ ಹೀಗೆ ಮಾಡಿದ್ದಾರೆ. ರಾಜ್ ಕುಮಾರ್ ಮೇಲೆ ತುಂಬಾ ಗೌರವ ಇದೆ. ಅವರ ಕುಟುಂಬದ ಮೇಲೆ ಅಷ್ಟೇ ಗೌರವ ಇದೆ ಎಂದರು.