ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ನನಗೆ ಆದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಿರುವೆ. ಈ ಕುರಿತು ತನಿಖೆ ನಡೆದು, ನನಗೆ ನ್ಯಾಯ ಸಿಗೋ ವಿಶ್ವಾಸವಿದೆ ಎಂದು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಭಾವುಕರಾಗಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಣೈ ಅವರು, ಕಾನೂನು ಬಾಹಿರವಾಗಿ ಮಾಡಿದ ವರ್ಗಾವಣೆ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಅಲ್ಲದೇ ಕಾನೂನು ಹೋರಾಟ ಸಹ ಮುಂದುವರಿಸಿರುವೆ. ಸಂಪೂರ್ಣ ತನಿಖೆ ನಡೆದು ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಅಲ್ಲದೆ ಈ ಕುರಿತು ಮೋದಿ ಅವರಿಗೂ ಸಹ ಪತ್ರ ಬರೆದಿರುವೆ ಎಂದು ತಿಳಿಸಿದರು.
Advertisement
Advertisement
ಸಾಮಾಜಿಕ ಸೇವೆ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿರುವೆ. ಆದರೆ ದುಡ್ಡಿಲ್ಲದೆ ರಾಜಕೀಯ ಮಾಡುವುದು ಕಷ್ಟ ಎಂಬುದು ನನಗೆ ಅರಿವಾಗಿದೆ. ಆದರೆ ನಾನೀಗ ಯಾರಿಗೂ ಬೇಡವಾದ ಶಿಶು. ಹಾಗಂತ ನಾನು ಕೈಕಟ್ಟಿ ಹಿಂದಿನ ಪರಿಸ್ಥಿತಿ ನೆನೆಸಿಕೊಂಡು ಕೂರುವುದಿಲ್ಲ. ಎಲ್ಲವನ್ನು ಮರೆತು ಮುನ್ನುಗ್ಗುವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಡಿವೈಎಸ್‍ಪಿ ಆಗಿ ಸೇವೆ ಸಲ್ಲಿಸುತ್ತಿದ್ದ ಅನುಪಮಾ ಶೆಣೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಳಿಕ ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪನೆ ಮಾಡಿದ್ದರು.