ಬೆಂಗಳೂರು: ನಾನು ಈಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಒಳ್ಳೆಯ ಕಾಲ ಬರುತ್ತೆ ಎಂದಷ್ಟೇ ಹೇಳಿ ಹೊರಟರು. ನನಗೂ ಒಳ್ಳೆಯ ಕಾಲ ಬರಲಿದೆ. ನಮ್ಮ ಅಧ್ಯಕ್ಷರನ್ನ ಭೇಟಿಯಾಗಲು ಬಂದಿದ್ದೆ. ನನಗೆ ನಮ್ಮ ಕ್ಷೇತ್ರದ ಜನರು ಇದ್ದಾರೆ. ನಾನೀಗ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ. ಪ್ರತಿದಿನ ಬ್ಯಾಡ್ಮಿಂಟನ್ ಆಡ್ತಿದ್ದೇನೆ. ಬಿ ರಿಪೋರ್ಟ್ ಹಾಕೋದು ನನಗೆ ಗೊತ್ತಿಲ್ಲ. ನೋಡೋಣ ಏನಾಗುತ್ತೋ ಎಂದು ಹೇಳಿದರು.
ರಮೇಶ್ ಜಾರಕಿಹೊಳಿಯವರು ಬಿ.ಎಸ್ ಯಡಿಯೂರಪ್ಪ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. ಆದರೆ ಸೆಕ್ಸ್ ಸಿಡಿ ಕೇಸ್ ನಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದು ಕೊಂಡಿದ್ದರು. ಇದೀಗ ಹೊಸ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಕೂಡ ಸಚುವ ಸ್ಥಾನ ವಂಚಿತರಾಗಿದ್ದಾರೆ. ಅಲ್ಲದೆ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ಸಿಗುತ್ತೆ ಎಂದು ಹೇಳಲಾಗಿತ್ತಾದರೂ ಕೈಗೂಡಲಿಲ್ಲ. ಒಟ್ಟಿನಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಪಟ್ಟ ಕೈತಪ್ಪಿದ್ದು, ಇದು ರಮೇಶ್ ಜಾರಕಿಹೊಳಿಗೆ ಮುಖಭಂಗ ಆದಂತಿದೆ. ಇತ್ತ ಸಿಡಿ ಪ್ರಕರಣ ಸಂಬಂಧ ಬಿ ರಿಪೋರ್ಟ್ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ರಜತ ಪದಕ – ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ
ಇದೇ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಜಮೀರ್ ಅಹಮದ್ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆಶಿಗೆ ಎರಡು ಮುಖ ಇದೆ, ಎರಡು ತಲೆ, ಎರಡು ನಾಲಗೆ, ಡಬ್ಬಲ್ ಸ್ಟ್ಯಾಂಡರ್ಡ್. ಜಮೀರ್ ಮೇಲಿನ ಇಡಿ ದಾಳಿಗೆ ಡಿಕೆಶಿಗೆ ಒಳಗೊಳಗೆ ಖುಷಿ. ಸಿದ್ದರಾಮಯ್ಯ ಏನ್ ಅಂದ್ಕೋತಾರೋ ಅಂತಾ ಮಾಧ್ಯಮಗಳ ಮುಂದೆ ಮಾತಾಡಿದ್ದಾರೆ ಅಷ್ಟೇ ಎಂದರು.