ತರಕಾರಿಗಳು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಆದರೆ ತರಕಾರಿಯಲ್ಲಿಯೂ ಕೆಲವಷ್ಟು ಮಾತ್ರ ಆಯ್ಕೆ ಮಾಡಿ ತಿನ್ನುತ್ತೇವೆ. ತೊಂಡೆಕಾಯಿ ಎಂದರೆ ಕೆಲವರಿಗೆ ಇಷ್ಟವಾಗುವುದೇ ಇಲ್ಲ. ಆದರೆ ಇದು ಹಲವು ಕಾಯಿಲೆಗಳಿಗೆ ಮದ್ದಾಗಿದೆ.
Advertisement
ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ತೊಂಡೆಕಾಯಿಯನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ, ಇದರಲ್ಲಿರುವ ಅತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡರೆ ತೊಂಡೆಕಾಯಿಯನ್ನು ಖಂಡಿತ ಇಷ್ಟಪಟ್ಟು ತಿನ್ನುತ್ತಿರಿ.
Advertisement
Advertisement
* ತೊಂಡೆಕಾಯಿ ಪಲ್ಯ, ಸಾಂಬರ್‍ನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, ದೇಹದಲ್ಲಿ ಏರುಪೇರಾಗಿರುವ ಸಕ್ಕರೆ ಅಂಶದ ಪ್ರಮಾಣವನ್ನು ಸಹಜ ಸ್ಥಿತಿಯ ಮರಳಿಸಲು ಸಹಕಾರಿಯಾಗಿದೆ.
Advertisement
* ತೊಂಡೆಕಾಯಿಯಲ್ಲಿ ಇರುವಂತಹ ಕೆಲವು ಅಂಶವು ಬೊಜ್ಜು ವಿರೋಧಿಯಾಗಿದೆ. ಜೀರ್ಣ ಕ್ರೀಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಣೆ ಮಾಡುವುದು ಮತ್ತು ಬೊಜ್ಜು ತಡೆಯುವುದುಕ್ಕೆ ಸಹಾಯಕಾರಿಯಾಗಿದೆ.
* ತೊಂಡೆಕಾಯಿಯಲ್ಲಿ ಕಬ್ಬಿಣಾಂಶವು ಉತ್ತಮ ಪ್ರಮಾಣದಲ್ಲಿದ್ದು, ಇದು ನಿಶ್ಯಕ್ತಿಯನ್ನು ಕಡಿಮೆ ಮಾಡುತ್ತದೆ.
* ಆಯುರ್ವೇದದಲ್ಲಿ ತೊಂಡೆಕಾಯಿಯ ಬಳ್ಳಿ, ಎಲೆಗಳು, ಬೇರು, ಕಾಯಿ, ಹಣ್ಣು ಎಲ್ಲವೂ ಉಪಯೋಗಿಸಲಾಗುತ್ತದೆ. ಕಜ್ಜಿ, ತುರಿಕೆ, ಕುಷ್ಟ ರೋಗದಂತಹ ಹಲವಾರು ಸಮಸ್ಯೆಗಳಿಗೆ ಔಷಧಿಯಾಗಿ ಉಪಯೋಗಿಸಲಾಗುತ್ತದೆ.
* ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ ಇರುವುದರಿಂದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೂತ್ರಪಿಂಡದಲ್ಲಿ ಆಗುವ ಕಲ್ಲುಗಳಿಗೆ ಮನೆಮದ್ದಿನಂತೆ ಕೆಲಸ ಮಾಡುತ್ತದೆ.