ಬೆಂಗಳೂರು: ಇಂದು ವೈಕುಂಠ ಏಕಾದಶಿ ಸಂಭ್ರಮವಾಗಿದ್ದು, ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ. ಎಲ್ಲೆಲ್ಲೂ ಗೋವಿಂದ..ಗೋವಿಂದ ನಾಮಸ್ಮರಣೆ ಕೇಳಿಬರುತ್ತಿದೆ. ಆದರೆ ದೇಗುಲಗಳಲ್ಲಿ ದರ್ಶನಕ್ಕೂ ಕೊರೊನಾ ಅಡ್ಡಗಾಲು ಹಾಕಿದೆ.
ಕೊರೊನಾದಿಂದಾಗಿ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ನಿಷೇಧ ಹೇರಲಾಗಿದೆ. ಇಸ್ಕಾನ್ ದೇಗುಲದಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತರಿಗೆ ಆನ್‍ಲೈನ್ ಮೂಲಕ ಶ್ರೀವಾರಿಯ ದರ್ಶನ ಭಾಗ್ಯ ಕಲ್ಪಿಸಲಾಗಿದೆ. ಬೆಂಗಳೂರಿನ ಟಿಟಿಡಿ ದೇಗುಲದಲ್ಲಿ ಬೆಳಗ್ಗೆಯಿಂದಲೇ ಭಕ್ತರ ಸಾಲುಗಟ್ಟಿ ನಿಂತಿದ್ದಾರೆ. ಈ ಬಾರಿ 10 ದಿನಗಳ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮಲ್ಲೇಶ್ವರಂನಲ್ಲಿರೋ ತಿರುಪತಿ ತಿರುಮಲ ದೇವಸ್ಥಾನದ ಬಳಿ ಕೂಡ ಭಕ್ತರು ಕ್ಯೂನಲ್ಲಿ ನಿಂತಿದ್ದಾರೆ. ಕೊವೀಡ್ ಹಿನ್ನೆಲೆ ಈ ಬಾರಿ 10 ದಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಂದೇ ದಿನ ಲಕ್ಷಾಂತರ ಭಕ್ತಾದಿಗಳು ದರ್ಶನಕ್ಕೆ ಬರುತ್ತಾರೆ. ಕೋವಿಡ್ ನಿಯಮ ಪಾಲನೆ ಮಾಡೊದಕ್ಕೆ ಆಗೋದಿಲ್ಲ ಅನ್ನೋ ಕಾರಣಕ್ಕೆ 10 ದಿನ ಭಕ್ತಾದಿಗಳ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಮಹಾಲಕ್ಷ್ಮೀ ಲೇಔಟ್ ವೆಂಕಟೇಶ್ವರ ದೇವಾಲಯದಲ್ಲಿ ಸ್ವರ್ಗದ ಬಾಗಿಲು ವ್ಯವಸ್ಥೆ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈವರೆಗೂ ಸಾವಿರಾರು ಭಕ್ತರು ದೇವರ ದರ್ಶನ ಮಾಡಿದ್ದಾರೆ. ಅರ್ಚನೆ, ಪ್ರಸಾದ, ತೀರ್ಥ ಹಾಗೂ ಮಂಗಳಾರತಿ ಸಹ ಕೊಡಲ್ಲ.