– ಮೂಲಮನೆಯ ಷಷ್ಠಿ ಪೂಜೆಯಲ್ಲಿ ಪಾಲ್ಗೊಂಡ ರಕ್ಷಿತ್ ಶೆಟ್ಟಿ
ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಕುಟುಂಬದ ಮನೆಯಲ್ಲಿ ನಡೆದ ಷಷ್ಠಿ ಕಾರ್ಯಕ್ರಮದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ನೆಲದಲ್ಲಿ ಕೂತು ನಾಗದೇವರ ಪ್ರಸಾದ ಸ್ವೀಕರಿಸಿ ತಾನು ಸಿಂಪಲ್ ಮ್ಯಾನ್ ಅನ್ನೋದನ್ನ ರಕ್ಷಿತ್ ಮತ್ತೊಮ್ಮೆ ಸಾಬೀತುಪಡಿಸಿದರು.
ಅಲೆವೂರು ಗ್ರಾಮದ ದೊಡ್ಡಮನೆ ರಕ್ಷಿತ್ ಶೆಟ್ಟಿಯ ಮೂಲ ಮನೆ. ಷಷ್ಠಿಯ ಹಿನ್ನೆಲೆಯಲ್ಲಿ ಕುಟುಂಬದ ಮನೆಯಲ್ಲಿ ಪ್ರತೀ ವರ್ಷ ನಾಗ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಇವತ್ತು ಈ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಪಾಲ್ಗೊಂಡರು. ನಾಗ ಬನ ಸಮೀಪ ನೆಲದಲ್ಲಿ ಕುಳಿತು ಷಷ್ಠಿಯ ವಿಶೇಷ ಭೋಜನ ಮಾಡುವ ಸಂಪ್ರದಾಯ ಇದೆ. ನಟ ರಕ್ಷಿತ್ ಶೆಟ್ಟಿ ಕೂಡ ಕುಟುಂಬದವರ ಜೊತೆ ನೆಲದಲ್ಲಿ ಕೂತು ಊಟ ಮಾಡಿದರು.
Advertisement
Advertisement
ಚಾರ್ಲಿ 777 ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದ್ದು, ಬ್ಯುಸಿ ಶೆಡ್ಯೂಲ್ ನಡುವೆಯೇ ಕುಟುಂಬದ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾದರು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೆಸರಿಗೆ ತಕ್ಕಂತೆ ಕುಟುಂಬದ ಸದಸ್ಯರ ಜೊತೆ ಸ್ಟಾರ್ ಎಂಬುದನ್ನು ಮರೆತು ಬೆರೆತರು. ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟರು.
Advertisement
Advertisement
ರಕ್ಷಿತ್ ಶೆಟ್ಟಿ ಸಹೋದರ ರಾಜೇಶ್ ಶೆಟ್ಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಎಷ್ಟೇ ಬ್ಯುಸಿ ಇದ್ದರೂ ಕೂಡ ಕುಟುಂಬದ ಕಾರ್ಯಕ್ರಮಗಳಲ್ಲಿ ತಪ್ಪದೇ ರಕ್ಷಿತ್ ಭಾಗಿಯಾಗುತ್ತಾನೆ. ನಾಗದೇವರ ಮೇಲೆ ರಕ್ಷಿತ್ ಶೆಟ್ಟಿಗೆ ಹೆಚ್ಚು ಭಕ್ತಿ. ಆತ ಸ್ಟಾರ್ ಅಂತ ಅನ್ನಿಸೋದೆ ಇಲ್ಲ. ಕುಟುಂಬದ ಸದಸ್ಯರ ಜೊತೆಗೂ ಹಿಂದೆ ಹೇಗಿದ್ದನೋ ಹಾಗೆಯೇ ಬೆರೆಯುತ್ತಾನೆ ಎಂದು ತಿಳಿಸಿದರು.