ನಾಗನೂರ ರುದ್ರಾಕ್ಷಿಮಠಕ್ಕೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್ ಭೇಟಿ

Public TV
2 Min Read
MB Patil Belagavi

ಬೆಳಗಾವಿ: ನಾಗನೂರ ರುದ್ರಾಕ್ಷಿಮಠಕ್ಕೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್ ಭೇಟಿ ನೀಡಿದ್ದಾರೆ.

ಇಂದು ಸದಾಶಿವ ನಗರದ ನಾಗನೂರ ರುದ್ರಾಕ್ಷಿಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿವಬಸವ ಸ್ವಾಮಿಗಳ, ಪ್ರಭು ಸ್ವಾಮಿಗಳ ಗದ್ದುಗೆಗೆ ನಮಸ್ಕರಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗೈಕ್ಯ ಫ.ಗು ಹಳಕಟ್ಟಿಯವರು ತಾವೇ ಪ್ರಕಟಿಸಿದ ಶಿವಾನುಭವ ಪತ್ರಿಕೆಯನ್ನು ಶೇಖರಿಸುವ ಕಾರ್ಯ ನಾಗನೂರ ರುದ್ರಾಕ್ಷಿಮಠ ಮಾಡಿದೆ. ಅದರ ಮರು ಮುದ್ರಣಕ್ಕೆ ನಾವು ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ ಎಂದರು. ಇದನ್ನೂ ಓದಿ: ಮಾಸ್ಕ್ ಹಾಕಿ ಕುತ್ಕೋ ಅಂದಿದ್ದಕ್ಕೆ KSRTC ನಿರ್ವಾಹಕನ ಹಲ್ಲು ಮುರಿದ ಯುವಕರು

MB Patil Belagavi2 medium

ಬಸವಣ್ಣನವರ ಮತ್ತು ಬಸವಾದಿ ಶರಣರ ವಚನಗಳ ಸಮಗ್ರ ಮಾಹಿತಿಯನ್ನು ಒದಗಿಸುವಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ವಚನ ಸಾಹಿತ್ಯದ ಗ್ರಂಥಾಲಯ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಎಲ್ಲ ವಿಚಾರಗಳನ್ನು ಪೂಜ್ಯರೊಂದಿಗೆ ಚರ್ಚಿಸಲು ಆಗಿಮಿಸಲಾಗಿದೆ ಎಂದು ಮಾಜಿ ಗೃಹ ಸಚಿವ, ಲಿಂಗಾಯತ ನಾಯಕ ಡಾ. ಎಂ.ಬಿ ಪಾಟೀಲ್  ತಿಳಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಚುನಾವಣೆ ಮುಂದೂಡಿಕೆಗೆ ಕಾರಣ: ಎಎಪಿ

ಗದಗ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಪೂಜ್ಯ ಡಾ ಅಲ್ಲಮಪ್ರಭು ಮಹಾಸ್ವಾಮಿಗಳಿಗೆ ಸತ್ಕರಿಸಿ ಆಶೀರ್ವಾದ ಪಡೆದರು. ಬೆಳಗಾವಿ ಜಿಲ್ಲೆಯ ಲಿಂಗಾಯತ ಸಮಾಜದ ಮುಂಖಂಡರು ಸತ್ಕಾರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಚಿಕ್ಕೊಡಿ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ಜಿಲ್ಲಾದಕ್ಷ ವಿನಯ ನಾವಲಗಟ್ಟಿ, ಅಥಣಿ ಮುಖಂಡ ಧರೇಪ್ಪ ಠಕ್ಕಣ್ಣವರ, ಬಾಬಾಸಾಹೇಬ್ ಪಾಟೀಲ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ, ಬಸವಸೇನಾ ಅಧ್ಯಕ್ಷ ಶಂಕರ್ ಗುಡಸ, ಮಹಾಂತೇಶ್ ಮತ್ತಿಕೊಪ್ಪ, ಆನಂದ್ ಗಡದೇವರಮಠ, ರಾಜಿ ಶೇಟ್, ಮತ್ತಿತ್ತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *