ಲಕ್ನೋ: ಕಂಠ ಪೂರ್ತಿ ಕುಡಿದು ಬಂದ ತಂದೆ ನಶೆಯಲ್ಲಿ ಮಗಳ ಮೇಲೆ ಅತ್ಯಾಚಾರ ಮಾಡಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ದಂಪತಿ 15 ವರ್ಷದ ಮಗಳು ಮತ್ತು 10 ವರ್ಷದ ಗಂಡು ಮಗನೊಂದಿಗೆ ಪುಟ್ಟದಾದ ಇಟ್ಟಿಗೆ ಮನೆಯಲ್ಲಿ ವಾಸವಾಗಿದ್ದರು. ತಾಯಿ ತನ್ನ ಇಬ್ಬರು ಮಕ್ಕಳನ್ನು ಪತಿಯೊಂದಿಗೆ ಬಿಟ್ಟು ಊರಿಗೆ ಹೋಗಿದ್ದಳು. ಈ ವೇಳೆ ತಂದೆ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಪತ್ನಿ ಊರಿಗೆ ಹೋದ ದಿನ ಈತ ಚೆನ್ನಾಗಿ ಕುಡಿದು ಬಂದಿದ್ದಾನೆ. ಈ ವೇಳೆ ಮಗಳ ಮೇಲೆ ಕಾಮುಕ ದೃಷ್ಟಿ ಬೀರಿದ್ದಾನೆ. ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಗ ಮಗಳು ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಆಗ ಕಾಮುಕ ತಂದೆ ಭಯದಿಂದ ಕಾಲ್ಕಿತ್ತಿದ್ದಾನೆ.
ಬಾಲಕಿಯ ಧ್ವನಿಯನ್ನು ಕೇಳಿದ ನೆರೆಹೊರೆಯವರು ಬಂದು ವಿಚಾರಿಸಿದ್ದಾರೆ. ವಿಷಯ ತಿಳಿದ ತಾಯಿ ಪೊಲೀಸ್ ಠಾಣೆಯಲ್ಲಿ ಮಗಳ ಮೇಲೆ ಅತ್ಯಾಚಾರ ಎಸಗಿದ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಇದೀಗ ಪೊಲೀಸರು ಆರೋಪಿ ಕಾಮುಕ ತಂದೆಗಾಗಿ ಬಲೆ ಬಿಸಿದ್ದಾರೆ.