ಕೋಲ್ಕತ್ತಾ: ಕುಡಿದ ಅಮಲಿನಲ್ಲಿ ಮಗನ ಮೇಲೆ ಬಾಂಬ್ ಎಸೆದು ಕೊಲ್ಲಲು ಹೋದ ತಂದೆ ಸ್ಫೋಟಕ್ಕೆ ಬಲಿಯಾಗಿರುವ ಘಟನೆ ಉತ್ತರ ಕೋಲ್ಕತ್ತಾದ ಕಾಶಿಪುರ್‍ನಲ್ಲಿ ನಡೆದಿದೆ.
ಮಗನ ಮೇಲೆ ಬಾಂಬ್ ಎಸೆಯಲು ಹೋದ ತಂದೆ ಶೇಖ್ ಮತ್ಲಾಬ್ (65) ಎಂದು ಗುರುತಿಸಲಾಗಿದೆ. ಈತನ ಮಗ ಶೇಖ್ ನಜೀರ್ ಆಗಿದ್ದಾನೆ. ಬಾಂಬ್ ಸ್ಫೋಟಗೊಂಡ ಪರಿಣಾಮ ಶೇಖ್ ಸಾವನ್ನಪ್ಪಿದ್ದಾನೆ. ನಜೀರ್‍ನಿಗೆ ಚಿಕಿತ್ಸೆಗೆ ನೀಡಲಾಗುತ್ತಿದೆ.
ಪ್ರತಿನಿತ್ಯ ಕುಡಿದ ಮಲಿನಲ್ಲಿ ಬರುತ್ತಿದ್ದ ಶೇಖ್ ಮನೆಯಲ್ಲಿ ಜಗಳವಾಡುತ್ತಿದ್ದನು. ಮಗ ನಜೀರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ಕೆಲಸ ಮುಗಿಸಿ ವಾಪಾಸ್ ಬಂದಿದ್ದಾನೆ. ತಂದೆ -ಮಗನ ಮಧ್ಯೆ ಕೆಲವು ವಿಚಾರಕ್ಕಾಗಿ ಜಗಳವಾಗಿದೆ. ಕೋಪದಲ್ಲಿದ್ದ ತಂದೆ ಕಚ್ಚಾ ಬಾಂಬ್ ಹಿಡಿದು ಮಗನ ಮೇಲೆ ದಾಳಿ ಮಾಡಲು ಬಂದಿದ್ದಾನೆ. ಆಗ ಗಲಾಟೆಯಲ್ಲಿ ಬಾಂಬ್ ಕೆಳಗೆ ಬಿದ್ದು, ಸ್ಫೋಟಗೊಂಡಿದೆ. ತಂದೆ-ಮಗ ಇಬ್ಬರು ಗಾಯಗೊಂಡಿದ್ದರು, ನೆರೆಹೊರೆಯವರು ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ನಜೀರ್‍ಗೆ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.