ವಿಜಯಪುರ: ನಶೆಗಾಗಿ ಅವಧಿ ಮುಗಿದ ಕಾಫ್ ಸಿರಪ್(ಕೆಮ್ಮಿನ ಔಷಧಿ) ಮಾರುತ್ತಿದ್ದ ಇಬ್ಬರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಮಹ್ಮದ್ ಸಾದಿಕ್ ಭತಗುಣಕಿ(35), ಮಹ್ಮದ್ ಯುಸೂಫ್ ಕೊತ್ತಲ(35) ಬಂಧಿತರಾಗಿದ್ದು, ಬಂಧಿತರಿಂದ 4,16,696 ರೂ. ಮೌಲ್ಯದ ಔಷಧಿ ಬಾಟಲಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ನಶೆಗಾಗಿ ಯುವಕರಿಗೆ ಅವಧಿ ಮುಗಿದ ಕಾಫ್ ಸಿರಪ್ ಮಾರುತ್ತಿದ್ದರು.
ಕೆಮ್ಮು, ಕಫಕ್ಕೆ ಬಳಸುವ ಕಾಫ್ ಸಿರಪ್ ನ್ನು ಅವಧಿ ಮುಗಿದ ಬಳಿಕ ಆರೋಪಿಗಳು ಒಂದೆಡೆ ಸಂಗ್ರಹಿಸಿ ಇಡುತ್ತಿದ್ದರು. ನಂತರ ಬೈಕ್ ಮೇಲೆ ಔಷಧಿ ಇಟ್ಟುಕೊಂಡು ಗುಪ್ತವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.