ನವದೆಹಲಿ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದ್ದು ಎಂದಿನಂತೆ ಮಾರುತಿ ಸ್ವಿಫ್ಟ್ ಮೊದಲ ಸ್ಥಾನ ಪಡೆದುಕೊಂಡಿದೆ.
ಟಾಪ್ 10 ಪಟ್ಟಿಯಲ್ಲಿ ಮಾರುತಿ ಕಂಪನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿವೆ. ಹುಂಡೈ ಕಂಪನಿಯ 2 ಕಾರುಗಳು, ಕಿಯಾ ಕಂಪನಿಯ 1 ಕಾರು ಸ್ಥಾನ ಪಡೆದಿದೆ.
Advertisement
1. ಮಾರುತಿ ಸ್ವಿಫ್ಟ್:
Advertisement
ಮಾರುತಿ ಕಂಪನಿಯ ಸ್ವಿಫ್ಟ್ 18,498 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಶೇ.4.2 ರಷ್ಟು ಬೇಡಿಕೆ ಕಳೆದುಕೊಳ್ಳುತ್ತಿದ್ದರೂ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
Advertisement
Advertisement
2. ಮಾರುತಿ ಸುಜುಕಿ ಬಲೆನೊ:
ಹ್ಯಾಚ್‌ಬ್ಯಾಕ್ ಕಾರು ಬಲೆನೊ ಸ್ವಿಫ್ಟ್ ಕಾರಿಗೆ ಸ್ಪರ್ಧೆ ನೀಡುತ್ತಿದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ನವೆಂಬರ್‌ನಲ್ಲಿ 17,872 ಕಾರುಗಳನ್ನು ಮಾರಾಟ ಮಾಡಿದೆ.
3. ಮಾರುತಿ ಸುಜುಕಿ ವ್ಯಾಗನಾರ್:
ಮೂರನೇ ಸ್ಥಾನವನ್ನೂ ಮಾರುತಿ ಕಂಪನಿಯ ಮತ್ತೊಂದು ಹ್ಯಾಚ್‌ಬ್ಯಾಕ್ ಕಾರು ವ್ಯಾಗನಾರ್ ಪಡೆದುಕೊಂಡಿದೆ. ನವೆಂಬರ್‌ನಲ್ಲಿ 16,356 ಕಾರುಗಳನ್ನು ಮಾರಾಟ ಮಾಡಿದ್ದು ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತದೆ.
4. ಮಾರುತಿ ಸುಜುಕಿ ಆಲ್ಟೋ:
ಒಟ್ಟು 15,321 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್ -10 ಪಟ್ಟಿಯಲ್ಲಿ ಆಲ್ಟೋ 4ನೇ ಸ್ಥಾನ ಪಡೆದಿದೆ.
5. ಮಾರುತಿ ಸುಜುಕಿ ಡಿಸೈರ್:
ಸೆಡಾನ್ ಕಾರುಗಳ ಮಾರುಕಟ್ಟೆಯಲ್ಲಿ ಮಾರುತಿ ಡಿಸೈರ್ ಕಾರಿನ ಆರ್ಭಟ ಈಗಲೂ ಮುಂದುವರಿದಿದೆ. ಹೋಂಡಾ ಅಮೇಜ್, ಟಾಟಾ ಟಿಗೊರ್ ಕಾರುಗಳಿದ್ದರೂ ಡಿಸೈರ್ 13,536 ಕಾರುಗಳನ್ನು ಮಾರಾಟ ಮಾಡಿ 5ನೇ ಸ್ಥಾನ ಪಡೆದುಕೊಂಡಿದೆ. ಕಳೆದ ನವೆಂಬರ್‌ಗೆ ಹೋಲಿಸಿದರೆ ಶೇ.23.3 ರಷ್ಟು ಬೇಡಿಕೆ ಕಡಿಮೆಯಾಗಿದ್ದರೂ ಜನಪ್ರಿಯತೆ ಕುಸಿದಿಲ್ಲ.
6.ಹುಂಡೈ ಕ್ರೇಟಾ
ಎರಡನೇ ತಲೆಮಾರಿನ ಕ್ರೇಟಾ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎಸ್‌ಯುವಿ(ಸ್ಫೋರ್ಟ್ ಯುಟಿಲಿಟಿ ವೆಹಿಕಲ್) ಮಾದರಿಯಲ್ಲಿ ಪ್ರಸಿದ್ಧವಾಗಿರುವ ಕ್ರೇಟಾ ನವೆಂಬರ್‌ನಲ್ಲಿ 12,017 ಕಾರುಗಳನ್ನು ಮಾರಾಟ ಮಾಡಿ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.
7. ಕಿಯಾ ಸಾನೆಟ್:
ದಕ್ಷಿಣ ಕೊರಿಯಾ ಕಿಯಾ ಕಂಪನಿ ನಿಧನವಾಗಿ ಭಾರತದಲ್ಲಿ ಜನಪ್ರಿಯವಾಗಲು ಆರಂಭವಾಗಿದೆ. ಒಟ್ಟು 11,417 ಸಾನೆಟ್ ಕಾರುಗಳು ಮಾರಾಟಗೊಂಡಿದ್ದು, 7ನೇ ಸ್ಥಾನವನ್ನು ಪಡೆದುಕೊಂಡಿದೆ.
8.ಮಾರುತಿ ಸುಜುಕಿ ಇಕೋ
ಮಾರುತಿ ಕಂಪನಿಯ ಯಟಿಲಿಟಿ ವೆಹಿಕಲ್ ಇಕೋ 11,183 ಕಾರುಗಳನ್ನು ಮಾರಾಟ ಮಾಡಿದೆ. ಕಡಿಮೆ ಬೆಲೆ ಮತ್ತು ಹೆಚ್ಚು ಜನರನ್ನು ಸಾಗಿಸಬಲ್ಲ ಈ ಕಾರಿನ ಪ್ರಸಿದ್ಧಿ ಈಗ ಕಡಿಮೆಯಾಗುತ್ತಿದ್ದರೂ 8ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
9. ಹುಂಡೈ ಗ್ರಾಂಡ್ ಐ10
ನವೆಂಬರ್‌ನಲ್ಲಿ ಒಟ್ಟು 10,936 ಗ್ರಾಂಡ್ ಐ10 ಕಾರುಗಳ ಮಾರಾಟ ಕಂಡಿದೆ. ಕ್ರೇಟಾದ ಬಳಿಕ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇ ಹುಂಡೈ ಕಂಪನಿಯ ಕಾರು ಇದಾಗಿದೆ. ಈ ಕಾರಿನ ಮಾರಾಟ ಶೇ.7.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಕಂಪನಿ ತಿಳಿಸಿದೆ.
10: ಮಾರುತಿ ಸುಜುಕಿ ಎರ್ಟಿಗಾ
ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ದೊಡ್ಡ ಕಾರು ಎರ್ಟಿಗಾ ಆಗಿದೆ. ಒಟ್ಟು 9,557 ಕಾರುಗಳನ್ನು ಮಾರಾಟ ಮಾಡಿ ಮೀಡಿಯಂ ಪ್ಯಾಸೆಂಜರ್ ವೆಹಿಕಲ್(ಎಂಪಿವಿ) ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆ ಬಾರಿ 10ನೇ ಸ್ಥಾನವನ್ನು ವಿಟಾರಾ ಬ್ರೀಜಾ ಪಡೆದುಕೊಂಡಿತ್ತು.