ಉಡುಪಿ: ನವಿಲು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಎರ್ಮಾಳದಲ್ಲಿ ನಡೆದಿದೆ.
ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬೆಳಪು ಗ್ರಾಮದ ಅಬ್ದುಲ್ಲಾ ಮೃತ ಯುವಕ. ಕಾಪು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದ್ವಿಚಕ್ರ ವಾಹನ ಸವಾರ ಅಬ್ದುಲ್ಲಾ (24) ಬೆಳಕು ಗ್ರಾಮದಿಂದ ಪಡುಬಿದ್ರೆಯ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಹೆದ್ದಾರಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನವಿಲೊಂದು ಹಾರಿ ದಾಟಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ಅಬ್ದುಲ್ಲಾ ತಲೆಗೆ ಬಡಿದಿದೆ.
Advertisement
Advertisement
ದ್ವಿಚಕ್ರವಾಹನ ಕಂಟ್ರೋಲ್ ತಪ್ಪಿ ಡಿವೈಡರ್ ಮೇಲೆ ಬಡಿದಿದೆ. ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಾಹನದ ರಭಸಕ್ಕೆ ನವಿಲು ಕೂಡ ಸಾವಿಗೀಡಾಗಿದೆ. ಪಡುಬಿದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಅಬ್ದುಲ್ಲಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಕಾಪು ತಾಲೂಕಿನಲ್ಲಿ ನವಿಲುಗಳ ಹಾವಳಿ ವಿಪರೀತವಾಗಿದೆ. ಗದ್ದೆಗಳಿಗೆ ನವಿಲುಗಳು ಬಂದು ಎಲ್ಲ ಬೆಳೆಗಳನ್ನು ಹಾಳು ಮಾಡುತ್ತಿದೆ. ರಸ್ತೆಗಳಲ್ಲೂ ನವಿಲಿನ ಸಂಚಾರ ಹೆಚ್ಚಾಗಿದೆ. ರಾಷ್ಟ್ರಪ್ರಾಣಿ ನವಿಲುಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಸರಕಾರ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಜನಪ್ರತಿನಿಧಿ ಜಹೀರ್ ಬೆಳಪು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ – ವಾಹನ ಸಮೇತ ಓರ್ವನ ಬಂಧನ