ನಮ್ಮ ಹೃದಯದಲ್ಲಿ ಜೀವಂತವಾಗಿರುತ್ತೀರಿ- ಸುಶಾಂತ್ ಸಿಂಗ್ ಕುರಿತ ಭಾವನಾತ್ಮಕ ಟ್ವೀಟ್ ಮಾಡಿದ ರೈನಾ

Public TV
1 Min Read
Sushant Singh Suresh Raina

ನವದೆಹಲಿ: ಬಾಲಿವುಡ್ ಯಂಗ್ ಹೀರೋ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಮಾಡಿಕೊಂಡು 10 ವಾರ ಕಳೆದಿದೆ. ಆದರೆ ಇದುವರೆಗೂ ಆತನ ಆತ್ಮಹತ್ಯೆ ಪ್ರಮಾಣದ ವಿಚಾರಣೆಯಲ್ಲಿ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಸದ್ಯ ಪ್ರಕರಣವನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಭಾವನಾತ್ಮಕ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಸಿಂಗ್ ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಎಂದು ಟ್ವೀಟ್ ಮಾಡಿರುವ ರೈನಾ, ಸರ್ಕಾರದ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ. ‘ನೀನು ಎಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿರುವೆ. ಅಭಿಮಾನಿಗಳು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿಮಗೆ ಶೀಘ್ರ ನ್ಯಾಯ ಸಿಗಲಿದೆ. ನಿಮ್ಮ ಆತ್ಮಹತ್ಯೆಗೆ ಕಾರಣರಾಗಿರುವ ಯಾರನ್ನು ಬಿಡುವುದಿಲ್ಲ. ನೀವು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ ಎಂದು ಬರೆದುಕೊಂಡಿದ್ದಾರೆ.

ತಮ್ಮ ಟ್ವೀಟ್‍ನೊಂದಿಗೆ ವಿಡಿಯೋ ಪೋಸ್ಟ್ ಮಾಡಿರುವ ರೈನಾ, ಸುಶಾಂತ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತೀರುವ #JusticeforSSR ಹ್ಯಾಶ್‍ಟ್ಯಾಗ್‍ನೊಂದಿಗೆ ಟ್ವೀಟ್ ಮಾಡಿದ್ದಾರೆ.

Sushant Singh Rajput Drive 1200 2 1 medium

ಇತ್ತ ಸುಶಾಂತ್ ಸಿಂಗ್ ಪ್ರಕರಣ ದಿನವೊಂದಕ್ಕೆ ತಿರುವು ಪಡೆಯುತ್ತಿದ್ದು, ಮುಂಬೈ ಪೊಲೀಸರು ಪ್ರಾಥಮಿಕ ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸುಶಾಂತ್ ಸಿಂಗ್ ಮರಣೋತ್ತರ ವರದಿಯಲ್ಲಿ ಸುಶಾಂತ್ ಸಾವಿನ ಸಮಯನ್ನೇ ನಮೂದಿಸಿಲ್ಲ. ಇಂಥ ಮುಖ್ಯ ಅಂಶವೇ ಯಾಕೆ ಮಿಸ್ ಆಯ್ತು ಎಂದು ಸುಶಾಂತ್ ಸಿಂಗ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *