ಬೆಂಗಳೂರು: ಏನೇ ಕೊರೊನಾ ಇದ್ದರೂ ನಮ್ಮ ಭವಿಷ್ಯಕ್ಕಾಗಿ ವೋಟ್ ಮಾಡಲೇಬೇಕು. ಕೊರೊನಾ ಜೊತೆ ಬದುಕೋದನ್ನ ಜನರು ಅಭ್ಯಾಸ ಮಾಡಿಕೊಂಡಿದ್ದಾರೆ. ಕೊರೊನಾ ಬಳಿಕ ಜನರ ಬದುಕು ಸಾಮಾನ್ಯ ಪರಿ ಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದರು.
Advertisement
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕೊಟ್ಟಿಗೆಪಾಳ್ಯ ವಾರ್ಡ್ ನಲ್ಲಿ ನಟ ಪ್ರೇಮ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಮತ ಚಲಾಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮ್, ಮತದಾನ ನಮ್ಮ ಹಕ್ಕು ಮತ್ತು ಎಲ್ಲರ ಭವಿಷ್ಯವನ್ನ ನಿರ್ಧಾರ ಮಾಡುತ್ತದೆ. ಹಾಗಾಗಿ ಚುನಾವಣೆಯಲ್ಲಿ ಎಲ್ಲರೂ ವೋಟ್ ಮಾಡಬೇಕು. ನಾನು ಸಹ ಕುಟುಂಬದ ಜೊತೆ ಬಂದು ಮತ ಚಲಾಯಿಸಿದ್ದೇನೆ. ಚುನಾವಣೆ ಆಯೋಗ ಮತಗಟ್ಟೆಯಲ್ಲಿ ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗದುಕೊಂಡಿದೆ. ಆರಕ್ಷಕ ಮತ್ತು ಚುನಾವಣಾಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ತುಂಬಾ ಶಿಸ್ತುಬದ್ಧವಾಗಿ ಕೊರೊನಾ ನಿಯಮಗಳನ್ನ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.
Advertisement
Advertisement
ಕೊರೊನಾ ಕ್ಯಾನ್ಸರ್ ಗಿಂತ ದೊಡ್ಡ ರೋಗವೇನು ಅಲ್ಲ. ಭಯದಿಂದ ಮನೆಯಲ್ಲಿ ಕುಳಿತುಕೊಳ್ಳದೇ ಮತಗಟ್ಟೆಗೆ ಬಂದು ಮತ ಚಲಾಯಿಸಿ. ವೋಟ್ ಮಾಡದಿದ್ರೆ ನಮ್ಮ ಭವಿಷ್ಯದ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ ಆಗುತ್ತೆ. ನಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಮತ ಹಾಕಲೇಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.