ಬೆಂಗಳೂರು: ನಾಡಿನ ಎಲ್ಲೆಡೆ ಇಂದು 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನತೆಗೆ ಶುಭ ಕೋರಿದ್ದಾರೆ.
ಆಗಸ್ಟ್ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು pic.twitter.com/tOPOOxQgYo
— Darshan Thoogudeepa (@dasadarshan) August 15, 2020
ಈ ಕುರಿತು ಟ್ವೀಟ್ ಮಾಡಿರುವ ದಾಸ, ಆಗಸ್ಟ್ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣ ಅವರನ್ನು ನೆನಪು ಮಾಡಿಕೊಂಡಿರುವ ದರ್ಶನ್, ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 222ನೇ ಜಯಂತ್ಯೋತ್ಸವದ ಮತ್ತು 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ೨೨೨ನೇ ಜಯಂತ್ಯೋತ್ಸವದ ಮತ್ತು ೭೪ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು..!! pic.twitter.com/JTTylWtxme
— Darshan Thoogudeepa (@dasadarshan) August 15, 2020
ದೇಶಾದ್ಯಂತ ಇಂದು ಸಂಭ್ರಮ, ಸಡಗರದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಎಲ್ಲಾ ಆಚರಣೆಗಳನ್ನು ಅತ್ಯಂತ ಆಚರಿಸಲಾಗುತ್ತಿದೆ.