– ಅಪ್ಪಾಜಿ ಅಗಲಿ 15 ವರ್ಷ ಆಯ್ತು
ಬೆಂಗಳೂರು: ಒಂದು ವರ್ಷ ಕಷ್ಟಪಟ್ಟಿದ್ದೇವೆ. ಮತ್ತೆ ಕಷ್ಟ ಪಡೋದು ಬೇಡ. ಲಾಕ್‍ಡೌನ್ ಅನ್ನೋದು ಬರೋದು ಬೇಡ. ಆ ರೀತಿ ಎಚ್ಚರವನ್ನ ನಾವು ವಹಿಸೋಣ. ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಿದ್ರೆ ಲಾಕ್‍ಡೌನ್ ಪ್ರಶ್ನೆ ಬರಲ್ಲ. ಎಷ್ಟು ವರ್ಷ ಅಂತ ಇದನ್ನ ತಳ್ಳಿಕೊಂಡು ಹೋಗೋಕೆ ಆಗುತ್ತೆ. ಆ ತರದ ಪರಿಸ್ಥಿತಿ ಬರೋದು ಬೇಡ ಎಂದು ಸ್ಯಾಂಡಲ್‍ವುಡ್ ನಟ ಡಾ. ಶಿವರಾಜ್ ಕುಮಾರ್ ಹೇಳಿದ್ದಾರೆ.
Advertisement
ಇಂದು ವರನಟ ಡಾ. ರಾಜ್ ಕುಮಾರ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಶಿವಣ್ಣ, ಅಪ್ಪಾಜಿ ಅಗಲಿ 15 ವರ್ಷ ಆಯ್ತು. ಕಳೆದ ವರ್ಷವೂ ಕೊರೊನಾ ಇತ್ತು. ಈ ವರ್ಷವೂ ಅದೇ ತರ ಆಗಿದೆ. ಹೀಗಾಗಿ ಆಢಂಬರ ಬೇಡ. ಸರಳವಾಗಿ ಪೂಜೆ ಮಾಡಬೇಕು ಅಂತ ನಿರ್ಧಾರ ಆಗಿತ್ತು. ಅಭಿಮಾನಿಗಳು ಹುಷಾರಾಗಿರಬೇಕು ಎಂದು ಹೇಳಿದರು.
Advertisement
Advertisement
ಎಲ್ಲರಿಗೂ ಕುಟುಂಬ ಇದೆ. ಮಾಸ್ಕ್ ಹಾಕಿಕೊಂಡು ಓಡಾಡೋದನ್ನ ಮರೆಯಬೇಡಿ. ಮೈ ಮರೆತು ಮತ್ತೆ ಸಂಕಂಷ್ಟ ದಿನಗಳನ್ನ ಎದುರಿಸೋದು ಬೇಡ. 1 ವರ್ಷ ಎಲ್ಲರೂ ಕಷ್ಟ ಪಟ್ಟಿದ್ದೀವಿ. ಕೊರೊನಾ ಜೊತೆಯೇ ಬದುಕಬೇಕು. ಮೊಂಡು ಧೈರ್ಯ ಮಾಡಬಾರದು. ಕೇರ್‍ಫುಲ್ ಆಗಿರಿ. ಮಾಸ್ಕ್ ಧರಿಸಿ, ಲಾಕ್‍ಡೌನ್ ಕಡೆ ಗಮನ ಕೊಡುವುದೇ ಬೇಡ. ಲಾಕ್‍ಡೌನ್ ನಮ್ಮ ಕೈಯಲ್ಲಿದೆ. ನಮ್ಮೆಲ್ಲರ ಜವಾಬ್ದಾರಿ ಕೂಡ ಹೌದು ಎಂದು ಹ್ಯಾಟ್ರಿಕ್ ಹೀರೋ ಹೇಳಿದರು.
Advertisement
ಯುಗಾದಿಯ ಮೊದಲು ಅಪ್ಪಾಜಿ ಪೂಜೆ ಮಾಡೋ ದಿನ ಬಂದಿದೆ. ಯುಗಾದಿ ಹಬ್ಬವನ್ನ ನಾವು ಸಡಗರದಿಂದಲೇ ಆಚರಿಸುತ್ತೇವೆ. ಇಡೀ ಕುಟಂಬ ಈ ಹಬ್ಬದ ದಿನ ಸೇರುತ್ತೇವೆ ಎಂದು ತಿಳಿಸಿದರು. ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿರೋ ಶಿವಪ್ಪ ಸಿನಿಮಾದ ಟೈಟಲ್ ಬದಲಾಗಿದೆ. ಈ ಸಿನಿಮಾಗೆ ಹೊಸ ಟೈಟಲ್ ಅನೌನ್ಸ್ ಮಾಡುತ್ತೇವೆ ಎಂದು ಇದೇ ವೇಳೆ ಶಿವಣ್ಣ ತಿಳಿಸಿದರು.
ಸಮಾಧಿ ಪೂಜೆಯ ವೇಳೆ ಅಭಿಮಾನಿಯೊಬ್ಬರು ಅಪ್ಪಾಜಿಗೆ ಇಷ್ಟವಾದ ರಾಗಿ ರೊಟ್ಟಿ ಇಟ್ಟು ಪೂಜೆ ಮಾಡಿದರು.