– ಉಡುಪಿ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್
ಉಡುಪಿ: ಮಹಾರಾಷ್ಟ್ರದಿಂದ ಉಡುಪಿಗೆ ಬಂದವರು ಮಹಾಮಾರಿ ಕೊರೊನಾವನ್ನು ಸ್ಫೋಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರಕ್ಕೆ ಮುಕ್ತಾಯವಾಗಬೇಕಿದ್ದ ಮಹಾಮಾರಿ ಸಂಖ್ಯೆ ಇದೀಗ 50ಕ್ಕೆ ಏರಿದೆ. ಜಿಲ್ಲೆಯಲ್ಲಿ ಸ್ಟ್ರಿಕ್ಟ್ ರೂಲ್ಸ್ ಮಾಡಿರುವ ಜಿಲ್ಲಾಧಿಕಾರಿಗೆ ಮುಂಬೈಯಿಂದ ಕಿಡಿಗೇಡಿಗಳು ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ.
Advertisement
ಮಹಾಮಾರಿ ಕೊರೊನಾ ವೈರಸ್‍ನಿಂದ ರಾಜ್ಯ ತತ್ತರಿಸಿ ಹೋಗಿದೆ. ಮಾರಕ ವೈರಸ್ ವಿರುದ್ಧ ವೈದ್ಯರು, ಪೊಲೀಸರು, ಕೊರೊನಾ ವಾರಿಯರ್ಸ್ ತಮ್ಮ ಜೀವ ಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಕೆಲಸ ಮಾಡ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಇಂತಹ ಹೊತ್ತಲ್ಲೇ ಇದೀಗ ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡ್ತಿರೋದು ಮುಂಬೈ ಲಿಂಕ್. ದಿನಕಳೆದಂತೆ ಉಡುಪಿಯಲ್ಲು ಕೂಡ ಮಹಾರಾಷ್ಟ್ರದಿಂದ ಬಂದವರು ಕೊರೊನಾ ಸ್ಫೋಟಿಸುತ್ತಿದ್ದಾರೆ. ಸೋಂಕಿತರ ಸಂಖ್ಯೆ ಈಗಾಗಲೇ 50ಕ್ಕೆ ಏರಿಕೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸ್ಟ್ರಿಕ್ ರೂಲ್ಸ್ ಮಾಡಿದ ಉಡುಪಿ ಡಿಸಿ ಜಗದೀಶ್ ಅವರಿಗೆ ಉಡುಪಿ ಮೂಲದ ಮುಂಬೈನಲ್ಲಿರುವ ಕಿಡಿಗೇಡಿಗಳು ಧಮ್ಕಿ ಹಾಕ್ತಿದ್ದಾರೆ.
Advertisement
Advertisement
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಏಳು ಸಾವಿರ ಮಂದಿ ಮುಂಬೈನಿಂದ ಬಂದವರಿದ್ದಾರೆ. ಕೊರೊನಾ ಸ್ಫೋಟಗೊಳ್ಳುತ್ತಿದ್ದಂತೆ ಮೇ 31ರವರೆಗೆ ಹೊರ ರಾಜ್ಯದಿಂದ ಜನರನ್ನು ಬಿಟ್ಟುಕೊಳ್ಳುವುದಿಲ್ಲ ಎಂದು ಸರ್ಕಾರ ಆದೇಶ ನೀಡಿದೆ. ಇದರಿಂದ ಕುಪಿತಗೊಂಡಿರುವ ಮಹಾರಾಷ್ಟ್ರದವರು ಜಿಲ್ಲಾಧಿಕಾರಿಗಳಿಗೆ ಫೋನ್ ಮೇಲೆ ಫೋನ್ ಮಾಡಿ ಬೆದರಿಸಿದ್ದಾರೆ. ಮುಂಬೈನಿಂದ ನಮ್ಮನ್ನ ಬರೋಕೆ ಬಿಡಿ ಇಲ್ಲಾಂದ್ರೆ ಅಷ್ಟೇ ಅಂತ ಹೆದರಿಸಿದ್ದಾರಂತೆ. ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಕೂಡ ಸ್ಪಷ್ಟ ಪಡಿಸಿದ್ದು, ಕಿಡಿಗೇಡಿಗಳಿಗೆ ಲಾಸ್ಟ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ಮುಂದೆ ಫೋನ್ ಮಾಡಿದರೆ ಜೈಲಿಗಟ್ಟುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
Advertisement
ಉಡುಪಿ ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣ ಮಾತ್ರ ಪತ್ತೆಯಾಗಿತ್ತು. ಅದು ಮೂರಕ್ಕೆ ಮುಕ್ತವಾಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಯಾಕಂದ್ರೆ ಜಿಲ್ಲೆಯಲ್ಲಿ ಅಷ್ಟು ಸ್ಟ್ರಿಕ್ಟ್ ಆಗಿ ಲಾಕ್‍ಡೌನ್ ಮಾಡಿದ್ದರು. ಇದಕ್ಕೆ ಕುಪಿತಗೊಂಡ ಮಹಾರಾಷ್ಟ್ರದ ಜನರು ತಗಾದೆ ತೆಗೆದಿದ್ದಾರೆ. ಅದರ ಜೊತೆಗೆ ಶಾಸಕರು ಸಂಸದರಿಗೂ ಮುಂಬಯಿಯಿಂದ ಕಿಡಿಗೇಡಿಗಳ ಕರೆ ಬರುತ್ತಿದೆ. ಕ್ವಾರಂಟೈನ್ ಸೆಂಟರ್‍ನಲ್ಲಿ ಇರುವ ಮುಂಬಯಿಗರು ದಿನಕ್ಕೊಂದು ತಗಾದೆ ತೆಗೆಯುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, 14 ಲಕ್ಷ ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು ಕಿಡಿಗೇಡಿಗಳಿಗೆ ತಾಕೀತು ಮಾಡಿದ್ದಾರೆ.
ಮಹಾರಾಷ್ಟ್ರದಿಂದ ಬಂದವರ ಕೊರೊನಾ ಟೆಸ್ಟ್ ಆಗಿ ವರದಿ ಬರೋ ತನಕ ಹೊಸಬರಿಗೆ ಅವಕಾಶ ಇಲ್ಲ ಎಂದು ಡಿಸಿ ಹೇಳಿದ್ದಾರೆ. ಬೆದರಿಕೆಯೊಡ್ಡಿದವರಿಗೂ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.