– ಸಿಎಂ, ಗೃಹ ಮಂತ್ರಿಗೆ ಪತ್ರ ಬರೆದಿರುವೆ
ಬೆಂಗಳೂರು: ನಮ್ಮನ್ನ ಅನುಸರಿಸುವವರು ಇದ್ದಾರೆ. ಹೀಗಾಗಿ ನಮ್ಮ ಹೀರೋ ಮಾಡಿದ, ಹೀರೊಯಿನ್ ಮಾಡಿದ್ರು ಅಂತ ಮುಂದೆ ಫಾಲೋ ಮಾಡಿದ್ರೆ ಗತಿಯೇನು ಎಂದು ನಟಿ, ರಾಜಕಾರಣಿ ತಾರಾ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗಕ್ಕೆ ಯಾವುದೇ ದುರ್ನಾತ ಬಡಿಯದಿರಲಿ ಅಂತ ದೇವರಿಗೆ ನಮಸ್ಕಾರ ಮಾಡಿದೆ. ನಾನು ಸಿಎಂಗೆ ಇಂದು ಸಲಹೆ ನೀಡುವೆ. ನಾವೆಲ್ಲರೂ ಎಲ್ಲ ಬೆಳವಣಿಗೆ ವೀಕ್ಷಿಸುತ್ತಿದ್ದೀವಿ ಎಂದರು.
Advertisement
Advertisement
ಡ್ರಗ್ಸ್ ವಿಚಾರ ನಮ್ಮ ರಂಗಕ್ಕೆ ಅಂಟಿಕೊಂಡಿದೆ. ನನ್ನ ಗಮನಕ್ಕೆ ಈ ರೀತಿಯ ಡ್ರಗ್ಸ್ ವಿಚಾರ ಗೊತ್ತಿಲ್ಲ. ಓದಿ, ಟಿವಿ ನೋಡಿ ಮಾತ್ರ ಡ್ರಗ್ಸ್ ವಿಚಾರ ತಿಳಿದಿದೆ. ಕುಟುಂಬದ ಒಬ್ಬ ಸದಸ್ಯ ತಪ್ಪು ಮಾಡಿದರೆ ಎಲ್ಲರಿಗೂ ತಪ್ಪಾಗುತ್ತದೆ. ಈ ರೀತಿ ತಪ್ಪು ಮಾಡಿದರೆ ಕೆಟ್ಟ ಹೆಸರು ಬರಲಿದೆ. ಲಾಕ್ ಡೌನ್ ವೇಳೆ ರಂಗ ನೆಲಕಚ್ಚಿದೆ. ಇದು ಆತಂಕಕಾರಿ ವಿಚಾರವಾಗಿದೆ. ಇದು ಒಳ್ಳೆಯ ವಿಚಾರ ಅಲ್ಲ. ಎಂದು ತಿಳಿಸಿದರು.
Advertisement
Advertisement
ಡಿಜೆ ಹಳ್ಳಿ ಗಲಾಟೆಯಲ್ಲೂ ಇದೇ ವಿಚಾರ ಕೇಳಿ ಭಯವಾಗುತ್ತಿದೆ. ಡ್ರಗ್ಸ್ ವಿಚಾರದಲ್ಲಿ ವರದಿ ನೋಡಿ ಮನೆಯಲ್ಲಿ ಕೂಗು ಧ್ವನಿ ಎತ್ತಬೇಕಿದೆ. ನಮ್ಮ ಜನಾಂಗಕ್ಕೆ ನಾವ್ ಮೋಸ ಮಾಡಬಾರದು. ಈ ಹಾದಿಯಲ್ಲಿ ಚಿತ್ರರಂಗ ಇರಬಾರದು. ಸಿಎಂ ಹಾಗೂ ಗೃಹ ಮಂತ್ರಿಗೆ ಈ ಪತ್ರ ಬರೆದಿರುವೆ ಎಂದು ಹೇಳಿದರು.
ಬೇರೆ ದೇಶಗಳಲ್ಲಿ ಸಂಪೂರ್ಣ ನಿಷೇಧವಾಗಿದೆ. ಶ್ರೀಲಂಕಾದಲ್ಲಿ ಗಲ್ಲಿಗೆ ಹಾಕ್ತಾರೆ. ನೀವ್ಯಾಕೆ ಬರೀ ಮಾತನಾಡಬೇಕು. ವ್ಯಾಪಾರಿಗಳನ್ನು ತಡೆಯಿರಿ ಹಾಗೆಯೇ ಗ್ರಾಹಕರನ್ನು ನಿಲ್ಲಿಸಿ. ಕಠಿಣ ಕ್ರಮ, ಕಾನೂನು ಬೇಗ ಬೇಕಾಗಿದೆ ಎಂದು ಆಗ್ರಹಿಸಿದರು.