ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಜೆಪಿಗೆ ಧಮ್ ಇದೆಯಾ ಎಂಬ ಪ್ರಶ್ನೆ ಕಮಲ ನಾಯಕರನ್ನು ಕೆರಳಿಸಿದ್ದು, ಸಿದ್ದು ವಿರುದ್ಧ ವಾಗ್ದಾಳಿಗಳ ಸುರಿಮಳೆಗಳೇ ಬರುತ್ತಿದೆ.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಸಿದ್ದರಾಮಯ್ಯ ಬಿಜೆಪಿಗೆ ಧಮ್ ಇದೆಯಾ ಅಂತ ಕೇಳ್ತಾರೆ. ನಮಗೆ ಧೈರ್ಯ ಇರೋದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ್ತಿದೆ. 370 ವಿಧಿ ರದ್ದು ಮಾಡಿದ್ದು ಬಿಜೆಪಿ, ಇದು ಬಿಜೆಪಿಯ ಧೈರ್ಯ. ತ್ರಿವಳಿ ತಲಾಕ್ ರದ್ದು ಮಾಡಿದ್ದು ಇದೇ ಬಿಜೆಪಿ ಎಂದು ಮಾತಿನ ಚಾಟಿ ಬೀಸಿದರು.
Advertisement
Advertisement
ಸಿದ್ದರಾಮಯ್ಯಗೆ ಧಮ್ ಇದ್ದರೆ ಅಡಾಕ್ ಅಧ್ಯಕ್ಷರನ್ನ ತೆಗೆದು ಬೇರೆ ಅಧ್ಯಕ್ಷರನ್ನ ಮಾಡಲಿ. ಸಿದ್ದರಾಮಯ್ಯಗೆ ಧೈರ್ಯ ಇದ್ದರೆ ಎಐಸಿಸಿಗೆ ಪತ್ರ ಬರೆದು ಅಧ್ಯಕ್ಷರ ಬದಲಾವಣೆ ಮಾಡಿಸಲಿ ಎಂದು ಇದೇ ವೇಳೆ ಅಶೋಕ್ ಸವಾಲೆಸೆದರು. ಇದನ್ನೂ ಓದಿ: ಧಮ್ ಇದ್ರೆ ಮೋದಿ ಮುಂದೆ ಕೂತು ಪರಿಹಾರ ತೆಗೆದುಕೊಂಡು ಬರಲಿ: ಅಶ್ವಥ್ ನಾರಾಯಣ್‍ಗೆ ಸಿದ್ದು ಸವಾಲ್
Advertisement
ಉಪ ಚುನಾವಣೆ ರಂಗೇರುತ್ತಿದೆ. ಎರಡೂ ಕ್ಷೇತ್ರದಲ್ಲಿ ಅತಿ ದೊಡ್ಡ ಲೀಡ್ ನಲ್ಲಿ ಗೆಲ್ತೀವಿ. ಆರ್ ಆರ್. ನಗರದಲ್ಲಿ ಕುರುಕ್ಷೇತ್ರ ಪ್ರಾರಂಭ ಆಗಿದೆ. ಕಾಂಗ್ರೆಸ್ಸಿಗೆ ಸೋಲಿನ ಭಯ ಆಗಿ ಚುನಾವಣೆ ಆಯೋಗಕ್ಕೆ ಮನವಿ ಮೇಲೆ ಮನವಿ ಕೊಡ್ತಿದೆ. ಕಾಂಗ್ರೆಸ್ ಪ್ರೊಟೆಸ್ಟ್ ರಾಜಕೀಯ ಮಾಡ್ತಿದೆ. ನಾವು ಅಭಿವೃದ್ಧಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದೇವೆ ಎಂದು ಹೇಳಿದರು.
Advertisement
ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಸೋಲು ಅಂತ ಬಂದಿದೆ. ಡಿಕೆಶಿ ಶಸ್ತ್ರ ತ್ಯಾಗ ಮಾಡಿ ಪಲಾಯನ ಮಾಡಿದ್ದಾರೆ. ಬಿಜೆಪಿ ಬ್ರಹ್ಮಾಸ್ತ್ರಗಳಿಗೆ ಕಾಂಗ್ರೆಸ್ ಬಳಿ ಅಸ್ತ್ರ ಇಲ್ಲ. ಡಿಕೆಶಿ ಪಲಾಯನ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಸಚಿವರಾದ ಗೋಪಾಲಯ್ಯ, ಸೋಮಶೇಖರ್, ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಧಮ್ ಇದ್ರೆ ಚಿದಂಬರಂ ಮುಂದೆ ನಿಂತು ಮಾತಾಡಲಿ – ಕಟೀಲ್ ಟಾಂಗ್