– ಎರಡು ವಾರ ಕಳೆದರೂ ಬರಲಿಲ್ಲ ಆಕ್ಸಿಜನ್ ರೈಲು
– ರಾಜ್ಯದ ಯಾವ ಸಮಸ್ಯೆಗೂ ಸಿಗುತ್ತಿಲ್ಲ ಪರಿಹಾರ
ಬೆಂಗಳೂರು: ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಆಕ್ಸಿಜನ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಸಹ ಹರಸಾಹಸಪಡುತ್ತಿದೆ. ಆದರೆ ರಾಜ್ಯದ ಈ ಸ್ಥಿತಿಗೆ ಕಾರಣ ಕೇಂದ್ರ ಸರ್ಕಾರದ ನಿರ್ಧಾರಗಳು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಎರಡು ವಾರ ಕಳೆದರೂ ನಮ್ಮ ರಾಜ್ಯಕ್ಕೆ ಆಕ್ಸಿಜನ್ ರೈಲು ಬಂದಿಲ್ಲ, ಮಾತ್ರವಲ್ಲದೆ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‍ನ್ನೂ ನಮಗೆ ಬಳಸಲು ಬಿಡುತ್ತಿಲ್ಲ. ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರತೆ ಎದುರಾಗಿದೆ.
Advertisement
ನಮ್ಮಲ್ಲಿ ಉತ್ಪಾದನೆ ಆಗುವ ಆಕ್ಸಿಜನ್‍ನ್ನು ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಮಗೆ ಬಿಟ್ಟಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇದನ್ನೆಲ್ಲ ಪ್ರಶ್ನೆ ಮಾಡಬೇಕಾದ ನಮ್ಮ ಸಂಸದರು ಮೌನಕ್ಕೆ ಶರಣಾಗಿರುವುದು ಯಾಕೆ ಎಂಬ ಪ್ರಶ್ನೆ ಎದ್ದಿದೆ.
Advertisement
ರಾಜ್ಯದಲ್ಲಿ ನಿತ್ಯ 1,041 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ಬಳ್ಳಾರಿ ಒಂದರಲ್ಲೇ 815 ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ಧಾರವಾಡ ಸೇರಿ ಇತರೆಡೆ 220 ಟನ್ ಉತ್ಪಾದನೆ ಆಗುತ್ತಿದೆ. ಸದ್ಯ ರಾಜ್ಯಕ್ಕೆ ನಿತ್ಯ 1,700 ಟನ್ ಆಕ್ಸಿಜನ್ ಅಗತ್ಯವಿದೆ. 865 ಟನ್ ಆಮ್ಲಜನಕ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. 140 ಟನ್ ಆಕ್ಸಿಜನ್‍ನ್ನು ಹೊರ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಬಳ್ಳಾರಿಯಿಂದ ಆಕ್ಸಿಜನ್ ಪೂರೈಕೆಗೆ ಕೇವಲ 25 ಟ್ಯಾಂಕರ್ ಗಳಿದ್ದು, ಹೀಗಾಗಿ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ.
Advertisement
Advertisement
ಮೋದಿ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆಯೇ? 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಕಾಳಜಿ ತೋರುತ್ತಿಲ್ಲ ಯಾಕೆ? ಕರ್ನಾಟಕದ ಬಗ್ಗೆ ನಿರ್ಲಕ್ಷ್ಯವೋ, ಸಿಎಂ ಮೇಲೆ ಕೋಪವೋ? ರಾಜ್ಯ-ಕೇಂದ್ರ ಸರ್ಕಾರದ ನಡುವೆ ಕೊಲ್ಡ್ ವಾರ್ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
`ನಮೋ’ ಮಲತಾಯಿ ಧೋರಣೆ
ಮಹಾರಾಷ್ಟ್ರದಲ್ಲಿ ಆಕ್ಸಿಜನ್ ದುರಂತ ಬೆನ್ನಲ್ಲೇ ಪ್ರಧಾನಿ ಮೋದಿ ಸಿಎಂಗೆ ಫೋನ್ ಮಾಡಿ ವಿಚಾರಿಸಿದ್ದರು. ಅಸ್ಸಾಂನಲ್ಲಿ ಭೂಕಂಪವಾದಾಗ ಸಹ ನೆರವಿನ ಅವಶ್ಯಕತೆ ಇದೆಯೇ ಎಂದು ಕೇಳಿದ್ದರು. ಗುಜರಾತ್‍ನಲ್ಲಿ ಆಕ್ಸಿಜನ್ ಕೊರತೆ ಆದರೆ ರಾತ್ರೋರಾತ್ರಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ 39 ಸೋಂಕಿತರು ಬಲಿಯಾದರೂ ತಿರುಗಿ ನೋಡದ್ದಕ್ಕೆ ಟೀಕೆ ವ್ಯಕ್ತವಾಗಿದೆ.