ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು

Public TV
2 Min Read
Guru Shani 1

– ಮಹಾ ಸಂಗಮ ನೋಡೋಕೆ ಆಗಸದತ್ತ ಜನರ ನೋಟ

ಬೆಂಗಳೂರು: ಇಂದು ಸಂಜೆ ಬಾನಂಗಳದಲ್ಲಿ 800 ವರ್ಷಗಳ ಬಳಿಕ ಅಪರೂಪದ ವಿದ್ಯಮಾನ ಜರುಗಲಿದೆ. ಸೂರ್ಯಾಸ್ತದ ಬಳಿಕ ಗುರು, ಶನಿ ಗ್ರಹಗಳ ಸಂಗಮ ದೃಶ್ಯ ಬರಿಗಣ್ಣಿಗೆ ಗೋಚರಿಸಲಿದೆ. ಈ ಎರಡು ಗ್ರಹಗಳು ಕ್ರಿಸ್‍ಮಸ್ ಸ್ಟಾರ್ ರೀತಿಯಲ್ಲಿ ಕಾಣಲಿವೆ. ಈ ವಿಶೇಷಕ್ಕಾಗಿ ಮತ್ತೆ 60 ವರ್ಷಗಳ ಬಳಿಕ ಕಾಯಬೇಕು.

Guru Shani 4

ಗುರು-ಶನಿ ಸಂಯೋಗ: ಈ ಎರಡು ಗ್ರಹಗಳು ಭೂಮಿಗೆ ನೇರವಾಗಿ ಒಂದೇ ರೇಖೆಯಲ್ಲಿ ಬರುವುದರಿಂದ ಒಂದೇ ಗ್ರಹದಂತೆ ಗೋಚರವಾಗುತ್ತವೆ. ಆದರೆ, ಗ್ರಹಗಳು ಒಂದರ ಹಿಂದೆ ಒಂದು ಇರಲಿದೆ. ಹಾಗಾಗಿ ಇದನ್ನು ಬಾಹ್ಯಾಕಾಶ ವಿಜ್ಞಾನಿಗಳು ಮಹಾ ಸಂಗಮ ಎಂದು ಕರೆಯುತ್ತಾರೆ. ಒಂದೇ ರೇಖೆಯಲ್ಲಿ ಗುರು, ಶನಿ, ಚಂದ್ರ ಬರೋದರಿಂದ ಆಗಸದಲ್ಲಿ ತ್ರಿಕೋನಾಕೃತಿಯಲ್ಲಿ ಸಂಯೋಗ ಗೋಚರವಾಗುತ್ತದೆ. ಮುಂದೆ 2080ರಲ್ಲಿ ಈ ವಿದ್ಯಮಾನ ಘಟಿಸಲಿದೆ.

Guru Shani 4 1

ಸಮಯ: ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನ ಬರೀಗಣ್ಣಿನಿಂದ ನೋಡಬಹುದಾಗಿದೆ. ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ.

Guru Shani 3

ಗುರು,ಶನಿ ಸಮಾಗಮ ಎಂದರೇನು?: ಆಕಾಶಕಾಯಗಳ ಸಾಮೀಪ್ಯದ ವಿಶೇಷವೇ ಖಗೋಳ ವಿದ್ಯಮಾನ. 20 ವರ್ಷಗಳಿಗೊಮ್ಮೆ ಕಾಣುವ ವಿದ್ಯಮಾನವನ್ನ ಗ್ರೇಟ್ ಕಂಜಂಕ್ಷನ್ ಅಂತ ಕರೆಯುತ್ತಾರೆ. ಈ ಎರಡು ಗ್ರಹಗಳ ಅಂತರ 6.1 ಅರ್ಕ್ ಮಿನಿಟ್, ಅಂದ್ರೆ 0.1 ಡಿಗ್ರಿ ಇರುತ್ತೆ. ಹಿಂದೆ 1623ರಲ್ಲಿ ಈ ವಿದ್ಯಮಾನ ನಡೆದಿತ್ತು ಆದರೆ ಅದು ಗೋಚರಿಸಿರಲಿಲ್ಲ. ಅದಕ್ಕೂ ಹಿಂದೆ 1226 ರಲ್ಲಿ ಅದ್ರೆ 794 ವರ್ಷದ ಹಿಂದೆ ಗೋಚರಿಸಿತ್ತು. ಮತ್ತೊಮ್ಮೆ, 0.1 ಡಿಗ್ರಿ ಅಂತರದ ಸಮಾಗಮ ವೀಕ್ಷಿಸಲು 2080ರವರೆಗೆ ಕಾಯಬೇಕು. ಈ ವೈಶಿಷ್ಯವನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಸಮಾಗಮ 1 ಗಂಟೆ 45 ನಿಮಿಷ ಮಾತ್ರ ಕಾಣಸಿಗುತ್ತದೆ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರದ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.

Jupiter Saturn Conjunction 1

ಸೌರ ಮಂಡಲದ ಎಲ್ಲ ಗ್ರಹಗಳು ಸೂರ್ಯನ ಸುತ್ತ ತಿರುಗುತ್ತಿರುತ್ತದೆ. ಭೂಮಿಯಿಂದ ನೋಡಿದಾಗ ಈ ಗ್ರಹಗಳೂ ಗೋಚರವಾಗುತ್ತವೆ. ಇಂತಹ ಸಂದರ್ಭದಲ್ಲಿ ಗುರು, ಶನಿ ಗ್ರಹಗಳು ಸಮೀಪ ಬಂದಂತೆ ಭಾಸವಾಗುತ್ತೆ. ಈ ವಿದ್ಯಮಾನವೇ ಯುತಿ ಅಥವಾ ಸಮಾಗಮ ಅಂತಾರೆ. ಎಲ್ಲ ಗ್ರಹಗಳು ಸಮಾಗಮ ಹೊಂದುತ್ತವೆ. ಇಂದು ಗುರು-ಶನಿ ಗ್ರಹಗಳು ಭೂಮಿ ಸಮೀಪ ಬಂದತೆ ಭಾಸವಾಗುತ್ತೆ. 800 ವರ್ಷಗಳ ಬಳಿಕ ನಡೆಯುತ್ತಿದೆ. 800 ವರ್ಷಗಳ ಬಳಿಕ ಇಷ್ಟು ಹತ್ತಿರ ಬಂದಿರುವುದು ಇದೇ ಮೊದಲು ಎಂದು ಖಗೋಳಶಾಸ್ತ್ರಜ್ಞ ಸುಂದರ್ ಮಾಹಿತಿ ನೀಡಿದ್ದಾರೆ.

Share This Article