ವಾಷಿಂಗಟನ್: ಸ್ಪೇಸ್ ಟೂರಿಸಂ ಕನಸು ಕಂಡಿರುವ ‘ವೆಲ್ತೀ ಡೇರ್ ಡೆವಿಲ್ ಮೊಘಲ್’ ಹೆಸರುವಾಸಿ ವರ್ಜಿನ್ ಕಂಪನಿಯ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ 10 ವರ್ಷಗಳ ಸಾಹಸ ಇಂದು ಸಾಕಾರಗೊಂಡಿದೆ. ಇಂದು ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22 ಯಶಸ್ವಿಯಾಗಿ ರಾತ್ರಿ 8 ಗಂಟೆಗೆ ಉಡಾವಣೆಯಾಗಿದ್ದು, ಆರು ಯಾನಿಗಳ ಪೈಕಿ ಆಂಧ್ರ ಮೂಲದ ಶಿರಿಷಾ ಬಾಂದ್ಲಾ ಸಹ ಒಬ್ಬರಾಗಿದ್ದಾರೆ. ಆಂಧ್ರ ಪ್ರದೇಶದ ಗುಂಟೂರು ಮೂಲದ ಶಿರಿಷಾ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ನಲ್ಲಿ ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಆಗಿದ್ದಾರೆ.
Advertisement
90 ನಿಮಿಷಗಳ ಪ್ರಯಾಣ ಮುಗಿಸಿ ಅಮೆರಿಕದ ನ್ಯೂ ಮೆಕ್ಸಿಕೋ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ. ಇದು ವಿಎಂಎಸ್ ಇವ್ ನಿಂದ ಮೇಲಕ್ಕೆ ಅಂದ್ರೆ ಭೂಮಿಯ ಪರಿಧಿಯಿಂದ 50 ಸಾವಿರ ಅಡಿಗಳಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ. ತದನಂತರ ಸ್ಪೇಸ್‍ಕ್ರಾಫ್ಟ್ ಸ್ವತಃ ಬಾಹ್ಯಾಕಾಶದತ್ತ ಚಲಿಸುತ್ತದೆ. ಅಂತರಿಕ್ಷದ ಈ ಯಾತ್ರೆ 1 ಗಂಟೆ 5 ನಿಮಿಷ ಇರಲಿದೆ. ನಂತರ ವಿಎಸ್‍ಎಸ್ ಯುನಿಟಿ ವಾಪಸ್ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಲಿದೆ.
Advertisement
Advertisement
ಸ್ಪೇಸ್‍ಪಾರ್ಟ್ ಲಾಂಚ್ ನಿಂದ ಲ್ಯಾಂಡಿಂಗ್ ನಡುವಿನ ಸಮಯ ಒಟ್ಟು 90 ನಿಮಿಷ. ವಿಎಸ್‍ಎಸ್ ಯುನಿಟಿ ಬರೋಬ್ಬರಿ 4 ನಿಮಿಷ ಅಂತರಿಕ್ಷ ಯಾತ್ರಿಗಳಿಗೆ ಝೀರೋ ಗ್ರೆವಿಟಿಯ ಅನುಭವವಾಗುತ್ತದೆ. ರಿಚರ್ಡ್ ಜೊತೆಯಲ್ಲಿ ಚೀಫ್ ಎಸ್ಟ್ರೋನಾಟ್ ಇನ್‍ಸ್ಟ್ರಕ್ಟರರ್ ಬೆಥ್ ಮೊಸೆಸ್, ಲೀಡ್ ಆಪರೇಷನ್ ಇಂಜಿನೀಯರ್ ಕೋಲಿನ್ ಬೆನ್ನೆಟ್, ಗವರ್ನ್‍ಮೆಂಟ್ ಅಫೇರ್ಸ್ ಮತ್ತು ರಿಸರ್ಚ್ ಆಪರೇಷನ್ ಉಪಾಧ್ಯಕ್ಷೆ ಶಿರೀಷಾ ಬಾಂದ್ಲಾ ಸಹ ಪ್ರಯಾಣಿಸಿದ್ದಾರೆ.