ವಿಜಯಪುರ: ಚಿತ್ರ ನಟಿ ರಾಗಿಣಿ ದ್ವಿವೇದಿ ವಿಜಯಪುರದಲ್ಲಿ ಬಡ ಜನರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಇದೇ ವೇಳೆ ಮಾತನಾಡಿದ ರಾಗಿಣಿ ಡ್ರಗ್ಸ್ ಕೇಸ್ ವಿಚಾರದ ಬಗ್ಗೆ ಹೆಚ್ಚಿಗೆ ಮಾತಾಡೋದಿಲ್ಲ. ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ನಾವು ತಪ್ಪು ಮಾಡಿಲ್ಲ ಅಂದ್ರೆ ನಾವು ಟೆನ್ಷನ್ ಮಾಡ್ಕೋಬಾರ್ದು ಎಂದರು.
ಡ್ರಗ್ಸ್ ವಿಚಾರದಲ್ಲಿ ಶೇ.100 ಟಾರ್ಗೆಟ್ ಮಾಡಲಾಗಿದೆ. ಬರೀ ಒಂದು ಕೇಸ್ ವಿಚಾರವಾಗಿ ಮಾತ್ರವಲ್ಲ. ಹೆಣ್ಮಕ್ಕಳು ಅಂದ್ರೆ ಸಾಕು ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಹೆಣ್ಮಕ್ಕಳನ್ನು ತುಂಬಾ ಈಜಿಯಾಗಿ ಟಾರ್ಗೆಟ್ ಮಾಡೋದು ಹವ್ಯಾಸವಾಗಿದೆ ಎಂದು ಕಿಡಿಕಾರಿದರು.
ಬ್ಲೇಮ್ ಮಾಡೋ ಬದಲು ಎಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲಿ ಕರೆಕ್ಟ್ ಆಗಿದ್ರೆ ಸಾಕು. ಪ್ರಶಾಂತ್ ಸಂಬರಗಿ ಅವರು ನಿಜವಾಗಿಯೂ ನನಗೆ ಪರಿಚಯವಿಲ್ಲ, ಅವರೊಂದಿಗೆ ನಾನು ಮಾತಾಡಿಯೂ ಇಲ್ಲ. ಅವರು ಏನು ಮಾತಾಡ್ತಾರೋ ಮಾತಾಡಲಿ, ನನಗೆ ಅವರ ಪರಿಚಯವಿಲ್ಲ. ಅವರವರ ಓಪಿನೀಯನ್ ಮಾತಾಡ್ತಾರೆ, ಅದನ್ನು ನಾನು ಕಂಟ್ರೋಲ್ ಮಾಡಲು ಆಗಲ್ಲಾ ಎಂದರು. ಇದನ್ನೂ ಓದಿ: ಲಸಿಕೆ ಕೊರತೆ ಮುಚ್ಚಿ ಹಾಕಲು ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್ ಗಾಂಧಿ
ನಾನು ಏನು ಮಾಡ್ತೀನಿ, ಏನು ಮಾತಾಡ್ತೀನಿ ಅನ್ನೋದನ್ನು ಮಾತ್ರ ಕಂಟ್ರೋಲ್ ಮಾಡ್ತೀನಿ. ನನ್ನನ್ನು ಎಲ್ಲರೂ ಇಷ್ಟಪಡ್ತಾರೆ, ನನಗೆ ಫ್ಯಾನ್ಸ್ ಇದ್ದಾರೆ, ಅವರಿಗೆಲ್ಲ ಧನ್ಯವಾದ ಹೇಳ್ತೆನೆ. ನನ್ನನ್ನು ಇಷ್ಟಪಟ್ಟವರಿಗೂ, ಇಷ್ಟ ಪಡದವರಿಗೂ ಥ್ಯಾಂಕ್ಯೂ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.