– ದುಃಖದ ಮಡುವಿನಲ್ಲಿ ಮಕ್ಕಳು, ಕುಟುಂಬಸ್ಥರು
ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್(65) ಅಂಗಡಿಯವರು ವಿಧಿವಶರಾಗಿದ್ದು, ಕುಟುಂಬಸ್ಥರು ತೀವ್ರ ದುಃಖತಪ್ತರಾಗಿದ್ದಾರೆ. ಅವರ ತಾಯಿ, ಪತ್ನಿ ಹಾಗೂ ಮಗಳು ಕಣ್ಣೀರು ಹಾಕುತ್ತಿದ್ದು, ಸಂಬಂಧಿಕರು ಹಾಗೂ ಸ್ನೇಹಿತರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ.
Advertisement
ಬುಧವಾರ ರಾತ್ರಿ ಸುರೇಶ್ ಅಂಗಡಿಯವರು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪ್ರಧಾನಿ ಮೋದಿ ಸೇರಿ ದೇಶಾದ್ಯಂತ ಹಲವು ರಾಷ್ಟ್ರೀಯ ಹಾಗೂ ನಾಯಕರು ಕಂಬನಿ ಮಿಡಿದ್ದಾರೆ. ಅವರ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ. ಸುರೇಶ್ ಅಂಗಡಿ ತಾಯಿ ಸೋಮವ್ವ ಅಂಗಡಿಯವರು ತೀವ್ರ ದುಃಖತಪ್ತರಾಗಿದ್ದು, ನನ್ನ ಮಗ ಬರ್ತಾನೆ, ಬಾಗಿಲು ತೆಗೀರಿ ಅವನಿಗೆ ಎನೂ ಆಗಿಲ್ಲ ಎಂದು ರೋಧಿಸುತ್ತಿದ್ದಾರೆ. ಸುರೇಶ್ ಅಂಗಡಿ ಅವರ ತಾಯಿಗೆ ವಯಸ್ಸಾದ ಪರಿಣಾಮ ದೆಹಲಿ ತೆರಳಿಲ್ಲ. ಬೆಳಗಾವಿಯ ಮನೆಯಲ್ಲೇ ಇದ್ದು, ದುಃಖದ ಮಡುವಿನಲ್ಲಿದ್ದಾರೆ.
Advertisement
Advertisement
ತಂದೆಯನ್ನು ಕಳೆದುಕೊಂಡು ಅವರ ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳು ನೋವಿನಲ್ಲಿದ್ದಾರೆ. ಹಲವು ಸಂಬಂಧಿಕರು ಹಾಗೂ ಸ್ನೇಹಿತರು ಸಹ ಅವರ ಮೆನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ದಾಸ್ತಿಕೊಪ್ಪ, ಇಟಗಿ ಗ್ರಾಮದಿಂದ ಚಿಕ್ಕಮ್ಮಂದಿರು ಸೇರಿದಂತೆ ಅವರ ಸಂಬಂಧಿಕರು ಆಗಮಿಸಿದ್ದು, ಸಂಭದಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅವರ ಸಹೋದರಿ ಸಹ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಸುರೇಶ್ ಅಂಗಡಿ ನಿವಾಸದ ಬಳಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.
Advertisement
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದ್ದು, ದೆಹಲಿಯ ದ್ವಾರಕಾ ಸೆಕ್ಟರ್-24 ರಲ್ಲಿ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ತವರು ಕ್ಷೇತ್ರ ಬೆಳಗಾವಿಗೆ ಪಾರ್ಥಿವ ಶರೀರ ಕೊಂಡ್ಯೋಯಲು ಅನುಮತಿ ನೀಡದ ಹಿನ್ನೆಲೆ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ವಿಧಿವಶರಾದ ನಂತರ ಮತ್ತೊಂದು ಬಾರಿ ಕೊರೊನಾ ಪಾಸಿಟವ್ ಬಂದ ಹಿನ್ನಲೆಯಲ್ಲಿ ಪಾರ್ಥಿವ ಶರೀರ ಕೊಂಡೊಯ್ಯುವುದು ಬೇಡವೆಂದು ನಿರ್ಧರಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಏಮ್ಸ್ ಆಸ್ಪತ್ರೆಯಲ್ಲೇ ಅಂತಿಮ ದರ್ಶನ ಮಾಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸುರೇಶ ಅಂಗಡಿ ಹಿರಿಯ ಪುತ್ರಿ ಡಾಕ್ಟರ್ ಶೃತಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಜೆಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ಮುಂಬೈ ಮೂಲಕ ದೆಹಲಿಗೆ ತೆರಳಿದ್ದಾರೆ. ಬೆಳಗಾವಿ ಮೂಲಕ ಮುಂಬೈ ನಂತರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪುತ್ರಿ, ಮೊಮ್ಮಗಳು ಹಾಗೂ ಅಂತ್ಯಕ್ರಿಯೆ ವಿಧಿವಿಧಾನ ನೇರವೇರಿಸವ ಸ್ವಾಮೀಜಿ ಬಾಳಯ್ಯ ದೆಹಲಿಗೆ ತೆರಳಿದ್ದಾರೆ.