– ಸುದೀಪ್, ಗಣೇಶ್, ಸೃಜನ್‍ಗೆ ಧನ್ಯವಾದ
ಬೆಂಗಳೂರು: ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು ಎಂದು ನಟ ರವಿ ಶಂಕರ್ ಅವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚುತ್ತಿದೆ. ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ಸಮುದಾಯದ ಮಟ್ಟದಲ್ಲಿ ಸ್ಫೋಟಗೊಂಡಿದೆ. ಹೊಸ ಹೊಸ ಏರಿಯಾಗಳಿಗೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಈಗ ನಟ ರವಿ ಶಂಕರ್ ಅವರ ಮನೆಯ ಎದುರಿನ ಮನೆಯವರಿಗೆ ಕೊರೊನಾ ಬಂದಿದೆ.
Advertisement
Advertisement
ಈ ವಿಚಾರವಾಗಿ ಟ್ವೀಟ್ ಮಾಡಿರುವ ರವಿ ಶಂಕರ್, ನನ್ನ ಅಪಾರ್ಟ್‍ಮೆಂಟ್‍ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕೊರೊನಾ. ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು. ಕ್ವಾರಂಟೈನ್ ಮಾಡಿದ್ದಾರೆ ಬಾಗಿಲನ್ನು 14 ದಿನ ತೆರೆಯುವಂತಿಲ್ಲ. ಸುದೀಪ, ಗಣಪ, ಸೃಜಾನ, ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಗೆಳೆತನ ಎಂದರೆ ಇದೆ ಅಲ್ಲವೆ. ನಮ್ಮ ಬಗ್ಗೆ ವಿಚಾರಿಸಿದ ಸಂತೋಷ್ ಆನಂದ್, ರಘುರಾಮ್, ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
Advertisement
ನನ್ನ Apartment ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕರೋನಾ.
ನನ್ನ ಮಕ್ಕಳಿರುವ ಮನೆ ದೇವರೆ ಕಾಪಾಡಬೇಕು.
ಬಾಗಿಲನ್ನು 14 ದಿನ ತೆರೆಯುವಂತಿಲ್ಲ Quarantin
ಸುದೀಪ , ಗಣಪ , ಸೃಜಾನ , ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು.
ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್ , ರಘುರಾಮ್ , ಧನ್ಯವಾದಗಳು. ???? pic.twitter.com/GV0FQLXZR8
— ರವಿಶಂಕರ ಗೌಡ (@RavishankarGow5) June 24, 2020
Advertisement
ಇತ್ತೀಚೆಗಷ್ಟೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊರೊನಾ ಸೋಂಕು ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ವಿಚಾರವಾಗಿ ಬುಧವಾರವಷ್ಟೇ ಟ್ವೀಟ್ ಮಾಡಿದ್ದ ವಿಜಯಲಕ್ಷ್ಮಿ, ನನಗೆ ಕೊರೊನಾ ಸೋಂಕು ಇಲ್ಲ. ಇದು ಸುಳ್ಳು ಸುದ್ದಿ, ನಾನು ಚೆನ್ನಾಗಿದ್ದೇನೆ. ನೀವು ಮನೆಯಲ್ಲಿ ಕ್ಷೇಮವಾಗಿ ಇರಿ ಎಂದು ಗಾಪಿಪ್‍ಗಳಿಗೆ ತೆರೆ ಎಳೆದಿದ್ದರು.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹಿಡಿತಕ್ಕೆ ಬರುತ್ತಿಲ್ಲ. ದಿನೇ ದಿನೇ ಸಾವಿನ ಸಂಖ್ಯೆ ಜಾಸ್ತಿಯಾಗುತ್ತದೆ. ಈ ನಡುವೆ ಬೆಂಗಳೂರನ್ನು ಲಾಕ್‍ಡೌನ್ ಮಾಡಬೇಕು ಎಂಬ ಮಾತುಗಳು ಮುನ್ನೆಲೆಗೆ ಬರುತ್ತಿವೆ. ಆದರೆ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಂದು ಇರುವ ಕ್ಯಾಬೆನೆಟ್ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.