ಬೆಂಗಳೂರು: ನನ್ನ ಹುಟ್ಟಿದ ದಿನ ಜೂನ್ 20. ಇಂದು ಅಲ್ಲ ಎಂದು ನಟ ನೀನಾಸಂ ಸತೀಶ್ ಸ್ಪಷ್ಟನೆ ನೀಡಿದ್ದಾರೆ.
ಕೆಲ ಅಭಿಮಾನಿಗಳು ಇಂದು ತಮ್ಮ ನೆಚ್ಚಿನ ನಟ ನೀನಾಸಂ ಸತೀಶ್ ಹುಟ್ಟಿದ ಹಬ್ಬ ಎಂದು ತಿಳಿದು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಬ್ರಹ್ಮಚಾರಿ, ಜೂನ್ 20 ನನ್ನ ಹುಟ್ಟುಹಬ್ಬ, ಇಂದಲ್ಲ. ಗೂಗಲ್ ನಲ್ಲಿ ತಪ್ಪಾಗಿ ತೋರಿಸುತ್ತಿದೆ. ಕ್ಷಮೆ ಇರಲಿ, ಮುಂಚಿತವಾಗಿ ಶುಭಾಶಯ ಕೋರಿದ ತಮಗೆಲ್ಲ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸತೀಶ್ ಅವರ ಟ್ವೀಟಿಗೆ ಪ್ರತಿಕ್ರಿಯಿಸಿರುವ ಅಭಿಮಾನಿ, ಕಲಾವಿದ ಅಂದ ಮೇಲೆ ಪ್ರತಿದಿನ ಹುಟ್ಟಿದ ಹಬ್ಬ ಮಾಡಿಕೊಳ್ಳಬೇಕಿ. ಪ್ರತಿ ಪಾತ್ರಕ್ಕೂ ಬಣ್ಣ ಹಾಕಿದಾಗ ಹುಟ್ಟಿದ ಹಬ್ಬ. ಇವತ್ತೊಂದು ಕೇಕ್, ಇಪ್ಪತ್ತೊಂದು ಕೇಕ್. ಹಬ್ಬ ಮಾಡುತ್ತಾ ಇರಬೇಕು ಎಂದು ಬರೆದುಕೊಂಡಿದ್ದಾರೆ.
ಜೂನ್ 20 ನನ್ನ ಹುಟ್ಟುಹಬ್ಬ, ಇಂದಲ್ಲ. ಗೂಗಲ್ನಲ್ಲಿ ತಪ್ಪಾಗಿ ತೋರಿಸುತ್ತಿದೆ, ಕ್ಷಮೆ ಇರಲಿ ಮುಂಚಿತವಾಗಿ ಶುಭಾಶಯ ಕೋರಿದ ತಮಗೆಲ್ಲ ಧನ್ಯವಾದಗಳು ????????????????
— Sathish Ninasam (@SathishNinasam) June 2, 2020