-ಹಿಂದೆಯೂ ಫೋನ್ ಟ್ಯಾಪ್ ಆಗಿತ್ತು, ಈಗ ಮತ್ತೆ ಆಗ್ತಿದೆ
ಬೆಂಗಳೂರು: ನನ್ನ ಫೋನ್ ಟ್ಯಾಪ್ ಆಗುತ್ತಿದೆ. ಇಲ್ಲಿಯವರೆಗೆ ಚೆನ್ನಾಗಿತ್ತು, ಇವತ್ತು ಬೆಳಗ್ಗೆಯಿಂದ ಕರೆ ಬರುತ್ತಿಲ್ಲ. ಇವತ್ತು ಇದರ ಬಗ್ಗೆ ದೂರು ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭಿರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಪಾಪ ಏನು ಬೇಕೋ ಮಾಡಿಕೊಳ್ಳಲಿ. ಆದರೆ ನನ್ನ ಫೋನ್ ಟ್ಯಾಪಿಂಗ್ ಆಗುತ್ತಿರುವುದು ನಿಜ. ಈ ಹಿಂದೆಯೂ ಫೋನ್ ಟ್ಯಾಪ್ ಆಗಿತ್ತು. ಈಗ ಮತ್ತೆ ಆಗ್ತಿದೆ. ನಮ್ಮ ಸುದರ್ಶನ್ ಬೆಳಗ್ಗೆಯಿಂದ 25 ಕಾಲ್ ಮಾಡಿದ್ದಾರೆ. ಆದರೆ ಕರೆ ಬರುತ್ತಿಲ್ಲ. ಇವತ್ತು ಇದರ ಬಗ್ಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಗಲಭೆ ಪ್ರಕರಣದಲ್ಲಿ ಗೃಹ ಸಚಿವರ ಕಾರ್ಯ ವೈಖರಿ ಬಗ್ಗೆ ಕಿಡಿಕಾರಿದ ಡಿಕೆಶಿ, ನಾನು ಬಗ್ಗೆ ಅಪೀಲು ಮಾಡಿದ್ದೇನೆ. ಇಂತವರಿಗೆ ನೊಟೀಸ್ ಕೊಡಿ ಎಂದು ಸಚಿವರು ಹೇಳ್ತಾರಾ? ನೋಟಿಸ್ ಕೊಟ್ಟು ಅವರನ್ನನು ಕರೆಯಿಸಿ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ತನಿಖೆ ಮಾಡಿ ಏನಿದೆ ಅದನ್ನು ತೆಗೆಯಬೇಕು. ಸಚಿವರು ನೋಟಿಸ್ ನೀಡುತ್ತೇವೆ ಎಂದರೇ ಹೇಗೆ? ಯಾರಾದ್ರು ಹೀಗೆ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
Advertisement
ಕಳೆದ 30 ವರ್ಷ ದಿಂದ ರಾಜಕಾರಣ ನೋಡಿದ್ದೇವೆ. ಅವರು ಇಂಟರನಲ್ ಯಾರು ಏನುಬೇಕಾದರೂ ಹೇಳಲಿ. ಆದರೆ ನಮಗೂ ಗೃಹ ಇಲಾಖೆಯ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾನು ಸಿಎಂ ಏನು ಹೇಳಿದ್ದಾರೆ ಗಮನಿಸಿದ್ದೇನೆ. ಅವರು ಹೇಳಿದಂತೆ ಎಲ್ಲಾದ್ರೂ ನಡೆದುಕೊಂಡಿದ್ದಾರಾ? ಯಾವುದೇ ಸರ್ಕಾರ ಶಾಶ್ವತ ಅಲ್ಲ, ಹರಿಯೋ ನೀರಿದ್ದಂತೆ. ಸರ್ಕಾರ ಬರುತ್ತೆ, ಸರ್ಕಾರ ಹೋಗುತ್ತೆ. ಆದರೆ ನಿನ್ನೆ ಬರವಣಿಗೆಯಲ್ಲಿ ಕೊಡುವಂತೆ ಹುಡುಗನಿಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.
Advertisement
ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ವಿಚಾರವಾಗಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಹೆಲ್ತ್ ವರ್ಕರ್ಸ್ ಪ್ರಾಣ ಒತ್ತೆ ಇಟ್ಟು ಸೇವೆ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾನು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದರು. ಇಂದು ಪತಿಯನ್ನು ಕಳೆದುಕೊಂಡ ಹೆಣ್ಣು ಮಗಳು ಧ್ವನಿ ಎತ್ತಿದ್ದಾರೆ. ವೈದ್ಯಕೀಯ ಸಚಿವರು ಅಲ್ಲಿ ಹೋಗಿ ನಿಂತ್ರೆ ಸಾಕಾ? ಪ್ರಕರಣವನ್ನು ಮುಚ್ಚು ಹಾಕುವ ಪ್ರಯತ್ನವನ್ನು ಏಕೆ ಮಾಡುತ್ತಿದ್ದಾರೆ ಎಂದರು.
ಕಳೆದ 6 ತಿಂಗಳಿನಿಂದ ಅಧಿಕಾರಿಗೆ ಹಿಂಸೆ ನೀಡಿದ್ದಾರೆ. ಕೆಲಸ ಮಾಡೋಕೆ ಸರಿಯಾಗಿ ಅವಕಾಶ ಕೊಟ್ಟಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ದಾರಿ ಮಾಡಿಕೊಟ್ಟಿದ್ದಾರೆ. ಬೇರೆಯದು ಆದರೆ ಸುಮೋಟೋ ಕೇಸ್ ಹಾಕಿಕೊಳ್ಳುತ್ತಾರೆ. ಆದರೆ ಸರ್ಕಾರ ಈ ಪ್ರಕರಣದಲ್ಲಿ ಹಿಂದೇಟು ಹಾಕುತ್ತಿದೆ. ಮೊದಲು ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ. ಈಗ ಅಧಿವೇಶನ ಕರೆದಿದ್ದಾರೆ. ಅಲ್ಲಿ ಚರ್ಚೆ ಮಾಡ್ತೇವೆ ಎಂದರು.