– ಗಂಭೀರ ಆರೋಪ ಮಾಡಿದ ಶಾಸಕ
– ಸ್ಪೀಕರ್, ಗೃಹ ಸಚಿವರಿಗೆ ದೂರು ನೀಡಿದ್ದೇನೆ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ತೀವ್ರ ಬೆಳವಣಿಗೆಯ ನಡುವೆಯೇ ಶಾಸಕ ಅರವಿಂದ್ ಬೆಲ್ಲದ್ ಅವರು ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರೋಪ ಮಾಡಿರುವ ಅವರು, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಇದರ ಬಗ್ಗೆ ನನಗೆ ಸಾಕಷ್ಟು ಕರೆ ಬಂದಿದೆ. ಕೆಲವು ದಿನದ ಹಿಂದೆ ಒಬ್ಬರು ಕಾಲ್ ಮಾಡಿ ನಾನು ಸ್ವಾಮಿ ಅಂದ್ರು, ಯಾವ ಸ್ವಾಮೀಜಿ ಅಂದರೆ ಯುವ ರಾಜಸ್ವಾಮೀಜಿ ಅಂದರು. ಬೇರೆ ನಂಬರ್ ನಿಂದ ಮತ್ತೆ ಕಾಲ್ ಮಾಡಿದರು ಎಂದು ತಿಳಿಸಿದರು.
Advertisement
Advertisement
ನಾನು ಯುವರಾಜ ಸ್ವಾಮಿ ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ ಎಂದರು. ಈ ಕಾಲ್ ಹಿಂದೆ ಷಡ್ಯಂತ್ರ ಇದೆ. ನಮ್ಮ ತಂದೆ ಚಂದ್ರಕಾಂತ್ ಬೆಲ್ಲದ್ 5 ಬಾರಿ ಶಾಸಕರಾಗಿದ್ದರು. ಕಪ್ಪು ಚುಕ್ಕಿ ಇಲ್ಲದೆ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ನಾನು ಅದೇ ಮಾರ್ಗದಲ್ಲಿ ಹೋಗುತ್ತಿದ್ದೇನೆ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತೆ. ನನ್ನ ಫೋನ್ ಕೂಡ ಟ್ಯಾಪ್ ಆಗಿದೆ. ಈ ಸಂಬಂಧ ಸ್ಪೀಕರ್ ಹಾಗೂ ಗೃಹ ಸಚಿವರಿಗೆ ಡಿಜಿಗೆ ಪತ್ರ ಕೊಟ್ಟಿದ್ದೇನೆ ಎಂದು ಹೇಳುತ್ತಾ ಬೆಲ್ಲದ್ ಅವರು ಪತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಇದನ್ನೂ ಓದಿ: ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?
Advertisement
Advertisement
ಜೈಲಿನಲ್ಲಿದ್ದ ಮನುಷ್ಯನಿಗೆ ಫೋನ್ ಯಾರು ಕೊಟ್ಟರು. ಅದಕ್ಕೆ ತನಿಖೆ ಆಗಬೇಕು. ನಾನು ಎಲ್ಲೇ ಹೋದರು ಒಂದಷ್ಟು ಜನ ಬರ್ತಾರೆ ಅದು ಹೇಗೆ? ನಾನು ಎಲ್ಲಿ ಹೋಗ್ತೇನೆ ಏನು ಮಾಡ್ತೀನಿ ಅಂತ ವಾಚ್ ಮಾಡುತ್ತಿದ್ದಾರೆ. ನಾನು ಹೋಗೋದು ಬರೋದು ಗೊತ್ತಾಗುತ್ತೆ ಅಂದರೆ ನನ್ನ ಫೋನ್ ಟ್ಯಾಪ್ ಆಗಿದೆ ಅಂತ ಎಂದು ಆರೋಪಿಸಿದರು.
ಈ ಬೆಳವಣಿಗೆ ನಂತರ ಹೀಗಾಗಿದೆ ಕಳೆದ 1 ತಿಂಗಳಿಂದ ಹೀಗಾಗುತ್ತಿದೆ. ಸರ್ಕಾರದ ಬಗ್ಗೆ ಮಾತಾಡಲ್ಲ ಟೆಕ್ನಾಲಜಿ ಬಂದಿದೆ ಸಾಕಷ್ಟು ಯಾರು ಟ್ಯಾಪ್ ಮಾಡ್ತಿದಾರೆ ಏನು ಅನ್ನೋದು ಸ್ಪೀಕರ್ ಹಾಗೂ ಗೃಹ ಸಚಿವರು ತನಿಖೆ ಮೂಲಕ ಪತ್ತೆಹಚ್ಚಬೇಕು ಎಂದು ಬೆಲ್ಲದ್ ಆಗ್ರಹಿಸಿದರು.