ನನ್ನ ದೇಹ ನನ್ನಿಷ್ಟ, ಅದನ್ನು ಕೇಳೋಕೆ ನೀನ್ಯಾರು?- ನೆಟ್ಟಿಗನಿಗೆ ಗಾಯಕಿ ತರಾಟೆ

Public TV
2 Min Read
SONA

ಮುಂಬೈ: ಬಾಲಿವುಡ್ ಗಾಯಕಿ ಸೋನಾ ಮೋಹಪತ್ರಾ ಅವರು ಡ್ರೆಸ್ ಬಗ್ಗೆ ಕಾಮೆಂಟ್ ಮಾಡಿ ನೆಟ್ಟಿಗನ ಚಳಿ ಬಿಡಿಸಿದ ಘಟನೆಯೊಂದು ನಡೆದಿದೆ.

sona 2

ಹೌದು. ‘ಐ ನೆವರ್ ಆಸ್ಕ್ ಫಾರ್ ಇಟ್’ ಎಂಬ ಟ್ವಿಟ್ಟರ್ ಅಭಿಯಾನವೊಂದಕ್ಕೆ ಕೈ ಜೋಡಿಸಿರುವ ಸೋನಾ, ತಮ್ಮ ಕಾಲೇಜು ದಿನಗಳಲ್ಲಿ ಚುಡಾಯಿಸುವ ಹಾಗೂ ಲೈಂಗಿಕ ಕಿರುಕುಳ ಎದುರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಟ್ರೋಲ್ ಮಾಡಿದ ನೆಟ್ಟಿಗನಿಗೆ ಗಾಯಕಿ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ವೀಟ್‍ನಲ್ಲೇನಿದೆ..?
ನಾನು ಬಿಟೆಕ್ ಎಂಜಿನಿಯರಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ಬಾರಿ ಮೈಕ್ರೊಪ್ರೊಸೆಸ್ಸರ್ ಲ್ಯಾಬ್ ಕಡೆ ಹೋಗುತ್ತಿದ್ದೆ. ಆ ದಿನ ನಾನು ತುಂಬಾನೇ ಸಡಿಲವಾದ ಹಸಿರು ಬಣ್ಣದ ಖಾದಿ ಕುರ್ತಾ ಧರಿಸಿದ್ದೆ. ನನ್ನ ನೋಡಿದ ಸೀನಿಯರ್ ಗಳು ಶಿಳ್ಳೆ ಹೊಡೆದು ನನ್ನ ಒಳಬಟ್ಟೆಯ ಸೈಜ್ ಬಗ್ಗೆ ಜೋರಾಗಿ ಮಾತನಾಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ನನ್ನ ಹಿತೈಷಿಯೊಬ್ಬರು, ನಾನು ದೇಹದ ಎಲ್ಲಾ ಭಾಗ ಮುಚ್ಚುವಂತೆ ದುಪ್ಪಟ್ಟ ಧರಿಸಿಲ್ವಾ ಎಂದು ಪ್ರಶ್ನಿಸುವ ಮೂಲಕ ನನ್ನ ಮೇಲೆ ರೇಗಾಡಿ ಹೋದರು ಎಂದು ಸೋನಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

sona 3

ಮತ್ತೊಂದು ಟ್ವೀಟ್ ಮಾಡಿ, ನಟಿ ಸೋನಮ್ ಕಪೂರ್ ಹಾಗೂ ಗಾಯಕಿ ಚಿನ್ಮಯಿ ಹಾಗೂ ಇತರೆ ಕೆಲವು ಮಂದಿಗೆ ಟ್ಯಾಗ್ ಮಾಡಿ ನಿಮ್ಮ ಅನುಭವವನ್ನು ಹಂಚಿಕೊಳ್ಳಿ ಎಂದಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂದರ್ಭದಲ್ಲಿ ನೀವು ಯಾವ ಬಟ್ಟೆ ಧರಿಸಿದ್ರಿ ಎಂಬುದನ್ನು ನೆನಪು ಮಾಡಿಕೊಂಡು ವಿಕ್ಟಿಮ್ ಬ್ಲೇಮಿಂಗ್ ಗಮನಕ್ಕೆ ತನ್ನಿ ಎಂದಿದ್ದಾರೆ.

ಸೋನಾ ಟ್ವೀಟ್ ಗೆ ಕಿಡಿಕಾರಿದ ನೆಟ್ಟಿಗರು ಒಂದರಮೇಲೊಂದರಂತೆ ಕಾಮೆಂಟ್ ಗಳನ್ನು ಮಾಡಲು ಆರಂಭಿಸಿದ್ದಾರೆ. ಈ ವೇಳೆ ಟ್ವಿಟ್ಟರ್ ಬಳಕೆದಾರನೊಬ್ಬ, ನೀವು ಇಷ್ಟೆಲ್ಲಾ ಯೋಚನೆ ಮಾಡುವುದಾದರೆ ಎದೆ ಸೀಳು ಕಾಣುವಂತೆ ಯಾಕೆ ಫೋಟೋಶೂಟ್ ಮಾಡಿಸ್ತೀರಿ?. ನಿಮ್ಮ ಫೋಟೋಗಳಲ್ಲೇ ನೀವು ಎಲ್ಲವನ್ನೂ ಎಕ್ಸ್ ಪೋಸ್ ಮಾಡುತ್ತೀರಿ ಅಂದ ಮೇಲೆ ಯಾಕೆ ನಾಟಕ ಮಾಡೋದು ಎಂದು ಕಿಡಿಕಾರಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೋನಾ, ನನ್ನ ದೇಹ ನನ್ನಿಷ್ಟ ಮಿಸ್ಟರ್ ಜೇ. ಅದನ್ನು ಕೇಳೋಕೆ ನೀನ್ಯಾರು?, ನನಗೇನಿಷ್ಟವೋ ಅದನ್ನೇ ನಾನು ಮಾಡುತ್ತೇನೆ ಎಂದು ಖಡಕ್ಕಾಗಿ ತಿಳಿಸಿದ್ದಾರೆ. ಸೋನಾ ಅವರ ಈ ಪ್ರತಿಕ್ರಿಯೆಗೆ ಕೆಲವರು ಪರವಾದ್ರೆ ಇನ್ನು ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *